ಹಳಿ ಮೇಲೆ ಸಿಂಹ ಘರ್ಜನೆ... ರೈಲನ್ನೇ ನಿಲ್ಲಿಸಿದ ಕಾಡಿನರಾಜ! - 20 minutes
ಗುಜರಾತ್: ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ಅರಣ್ಯದಲ್ಲಿ ಅಪರೂಪದ ಸನ್ನಿವೇಶ ಕಂಡು ಬಂದಿದೆ. ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ರೈಲ್ಗೆ ಸಿಂಹಗಳು ಅಡ್ಡಬಂದಿದ್ದವು. ಅರಣ್ಯದಲ್ಲಿ ತಿರುಗಾಡುವ ಮೃಗರಾಜರು ರೈಲು ಹಳಿಯ ಪಕ್ಕದ ಮರದಡಿ ಬಂದು ವಿಶ್ರಾಂತಿ ಪಡೆದಿದ್ದವು. ಇದನ್ನು ಗಮನಿಸಿದ ರೈಲು ಚಾಲಕ ಗಾಡಿಯನ್ನು ನಿಲ್ಲಿಸಿದ್ದಾರೆ. ಬಳಿಕ ಸಿಂಹವೊಂದು ರೈಲು ಹಳಿಗಳ ಮಧ್ಯೆ ಬಂದು ಕುಳಿತುಕೊಂಡಿದ್ದವು. ಸುಮಾರು 20 ನಿಮಿಷಗಳ ಕಾಲ ಬಳಿಕ ರೈಲು ಆ ಸ್ಥಳದಿಂದ ನಿರ್ಗಮಿಸಿದೆ.