ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷೆ..ಪೂರ್ವಜರ ಊರಿನಲ್ಲಿ ಸಂಭ್ರಮ!! - kamala harris belongs to tamilnadu news
ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್,ಮೂಲತಃ ತಮಿಳುನಾಡಿನ ತಿರುವರೂರ್‌ನವರಾಗಿದ್ದಾರೆ. ಈ ಹಿನ್ನೆಲೆ ತಿರುವರೂರ್ನಲ್ಲಿ ವಿಶೇಷ ರಂಗೋಲಿ ಬಿಡಿಸುವ ಮೂಲಕ ಕಮಲಾ ಹ್ಯಾರಿಸ್ ಗೆಲುವನ್ನು ಸಂಭ್ರಮಿಸಲಾಯಿತು. ಚುನಾವಣೆಯಲ್ಲಿ ಗೆದ್ದ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆಗಳು.. ನೀವು ತಿರುವರೂರಿನ ಹೆಮ್ಮೆಯ ಮಹಿಳೆ, ವಣಕಂ ಅಮೆರಿಕ.. ಎಂದು ರಂಗೋಲಿಯಲ್ಲಿ ಬರೆಯಲಾಗಿತ್ತು. ಜೊತೆಗೆ ಕಮಲಾ ಹ್ಯಾರಿಸ್ ಅವರ ಭಾವಚಿತ್ರವುಳ್ಳ ಬ್ಯಾನರ್ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ.
Last Updated : Nov 8, 2020, 12:41 PM IST