ನಿರಂತರ ಪ್ರವಾಹ: ಊರು ಬಿಟ್ಟು ನಿರಾಶ್ರಿತ ಕೇಂದ್ರಗಳಲ್ಲೇ ಇವರ ಬದುಕು - ಬಿಹಾರ ಪ್ರವಾಹ ಸುದ್ದಿ
ದರ್ಭಂಗ( ಬಿಹಾರ): ಜಿಲ್ಲೆಯಲ್ಲಿ ನಿರಂತರವಾಗಿ ಪ್ರವಾಹ ಉಂಟಾಗುತ್ತಿದೆ. ಪ್ರವಾಹ ಪೀಡಿತರ ನೋವು ಹೇಳತೀರದಾಗಿದೆ. 15-20 ದಿನಗಳಿಂದ ಜನರು ಪ್ರವಾಹದಿಂದಾಗಿ ಗ್ರಾಮಗಳನ್ನ ತೊರೆದು ಎತ್ತರದ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಯಘಾಟ್‌ನ ಸಿರಿನಿಯಾ, ಅಮ್ಮದಿಹ್ ಮತ್ತು ಸಿನುರಾ ಸೇರಿದಂತೆ ಹಲವಾರು ಹಳ್ಳಿಗಳ ಸುಮಾರು ಒಂದು ಸಾವಿರ ಕುಟುಂಬಗಳು ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಮಕ್ಕಳು ಮತ್ತು ಜಾನುವಾರುಗಳೊಂದಿಗೆ ಪ್ಲಾಸ್ಟಿಕ್ ಹಾಳೆಯಿಂದ ನಿರ್ಮಿಸಿಕೊಂಡ ಜೋಪಡಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆಲ್ಲ ಆಹಾರ ಸಮಸ್ಯೆ ಉಂಟಾಗಿದೆ. ಮೇವಿಲ್ಲದೇ ಜಾನುವಾರುಗಳು ಕಂಗೆಟ್ಟಿವೆ.