ರಸ್ತೆ ಹಿಮಾವೃತ: ಬಾಣಂತಿ-ಮಗುವನ್ನು 3.5 ಕಿಮೀ ಸ್ಟ್ರೆಚರ್ನಲ್ಲಿ ಹೊತ್ತು ಸಾಗಿದ ಯೋಧರು
ಸೋಪೋರ್ (ಜಮ್ಮು-ಕಾಶ್ಮೀರ): ಹಿಮಪಾತದಿಂದಾಗಿ ರಸ್ತೆ ಬ್ಲಾಕ್ ಆದ ಕಾರಣ ಸೋಪೋರ್ನಲ್ಲಿನ ಆಸ್ಪತ್ರೆಯಿಂದ ಬಾಣಂತಿ ಹಾಗೂ ನವಜಾತ ಶಿಶುವನ್ನು 3.5 ಕಿಮೀ ದೂರದಲ್ಲಿದ್ದ ಅವರ ಮನೆಗೆ ಸ್ಟ್ರೆಚರ್ನಲ್ಲೇ ಸೇನಾ ಸಿಬ್ಬಂದಿ ಹೊತ್ತು ಸಾಗಿದ್ದಾರೆ. ಸ್ಥಳೀಯರು ಮತ್ತು ಶುಶ್ರೂಷಕರು ಸಹ ಯೋಧರಿಗೆ ಸಹಾಯ ಮಾಡಿದ್ದಾರೆ. ಯೋಧರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.