ಇತಿಹಾಸದಲ್ಲೇ ಮೊದಲ ಬಾರಿಗೆ ಬೃಹತ್ ಹಡಗು ನಿರ್ವಹಿಸಿದ ವಿಶಾಖಪಟ್ಟಣಂ ಬಂದರು
ವಿಶಾಖಪಟ್ಟಣ ಬಂದರು ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೃಹತ್ ಹಡಗೊಂದನ್ನು ನಿರ್ವಹಿಸುವ ಮೂಲಕ ಗಮನ ಸೆಳೆದಿದೆ. ಲೈಬೀರಿಯಾದಿಂದ ಬಂದ ಎಂಟಿ ಓಸ್ಲೋ ಎಂಬ ಹೆಸರಿನ ಹಡಗು ಸುಮಾರು 87529 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಹೊತ್ತು ತಂದಿತ್ತು. ಈ ದೊಡ್ಡ ಹಡಗು 229.20 ಮೀಟರ್ ಉದ್ದ ಹಾಗೂ 38 ಮೀಟರ್ ಅಗಲವಿದೆ.