ಅಸ್ಸೋಂನಲ್ಲಿ ಪ್ರವಾಹಕ್ಕೆ 6 ಬಲಿ; 21 ಜಿಲ್ಲೆಗಳಲ್ಲಿ 8 ಲಕ್ಷ 69 ಸಾವಿರ ಜನರ ಸ್ಥಿತಿ ಅಯೋಮಯ! - ವರುಣ
ಪುರಾತನ ದೇವಾಲಯಗಳ ನಾಡು, ಈಶಾನ್ಯ ರಾಜ್ಯಗಳ ಪೈಕಿ ಅತಿ ಹೆಚ್ಚು ಬುಡಕಟ್ಟು ಜನರನ್ನು ಹೊಂದಿರೋ ಅಸ್ಸೋಂ ಪ್ರವಾಹದಿಂದ ಅಕ್ಷರಶಃ ನಲುಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿದೆ.ರಾಜ್ಯದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಈವರೆಗೆ ಸತ್ತವರ ಸಂಖ್ಯೆ 6ಕ್ಕೆ ಏರಿದರೆ, ಸುಮಾರು 8 ಲಕ್ಷ ಮಂದಿಯ ಸ್ಥಿತಿ ಅಯೋಮಯವಾಗಿದೆ.