ವಾಷಿಂಗ್ಟನ್: ಕಳಪೆ ಕಲಿಕಾ ಕೌಶಲ್ಯ ಹೊಂದಿರುವ ಮಕ್ಕಳು ಇ-ಮೇಲ್ ಸ್ಕ್ಯಾಮ್ನಂತಹ ವಂಚನೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರಕ್ಷಣೆ ಅಗತ್ಯವಾಗಿದೆ ಎಂದು ಅಂತರರಾಷ್ಟ್ರೀಯ ಅಧ್ಯಯನ ಎಜುಕೇಷನ್ ಸ್ಟಡಿಯಲ್ಲಿ ಪ್ರಕಟಿಸಲಾಗಿದೆ.
15 ವರ್ಷದ ವಯೋಮಿತಿಯ 1,70,000 ವಿದ್ಯಾರ್ಥಿಗಳನ್ನು ಅಧ್ಯಯನ ಆಧಾರದ ಮೇಲೆ ಸಂಶೋಧನೆಗೆ ಒಳಪಡಿಸಲಾಗಿದೆ. ಕಡಿಮೆ ಆದಾಯದ ಕುಟುಂಬ ಅಥವಾ ವಂಚಿತ ಪ್ರದೇಶದಲ್ಲಿ ಐವರಲ್ಲಿ ಒಬ್ಬರು ಇಂಥ ವಂಚನೆಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ತೋರಿಸಿದೆ. ಇ-ಮೇಲ್ ಸ್ಕ್ಯಾಮ್‌ಗಳು ಜನರ ಗುರುತು ಮರೆ ಮಾಡಿ, ಹಣಕಾಸಿನ ವಂಚನೆಯ ಅಪಾಯಕ್ಕೆ ಯುವ ಜನರನ್ನು ದೂಡುತ್ತಿದೆ. ಡಿಜಿಟಲ್ ವಂಚನೆ ಬಗ್ಗೆ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಕಡಿಮೆ ಅಪಾಯ ಹೊಂದಿದ್ದಾರೆ. ಇ-ಮೇಲ್ ಆನ್ಲೈನ್ ಸ್ಕ್ಯಾಮ್ ಸೇರಿದಂತೆ ಆನ್ಲೈನ್ ಅಪಾಯವನ್ನು ಹೇಗೆ ಪತ್ತೆ ಮಾಡಬೇಕು ಎಂಬ ಕುರಿತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಶಾಲಾ ಮಕ್ಕಳಿಗೆ ನೀಡಬೇಕು ಎಂದು ಲೇಖಕ ಪ್ರೋ ಜಾನ್ ಜೆರ್ರಿಮ್ ತಿಳಿಸಿದ್ದಾರೆ. ಸಾಮಾಜಿಕ-ಆರ್ಥಿಕತೆ ಅನಾನುಕೂಲತೆಯ ಗುಂಪು ಇಂತಹ ಸ್ಕ್ಯಾಮ್ ಅಪಾಯವನ್ನು ಹೆಚ್ಚು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಹದಿಹರೆಯವರಿಗೆ ಇಂತಹ ಸ್ಕ್ಯಾಮ್‌ಗಳ ಕುರಿತು ತರಗತಿಗಳಲ್ಲಿ ಹೇಳಿಕೊಡುವ ಮೂಲಕ ಅವರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸಬೇಕಿದೆ. ಅಲ್ಲದೇ ಈ ಸಂಬಂಧ ಯುವ ಜನತೆಗೆ ಆನ್ಲೈನ್ ಜಗತ್ತಿನ ಸಂಕೀರ್ಣತೆ ಮತ್ತು ಅಪಾಯದ ಹೆಚ್ಚಳ ಕುರಿತು ಅರಿವು ಮೂಡಿಸಬೇಕಿದೆ.