ಕರ್ನಾಟಕ

karnataka

ETV Bharat / sukhibhava

Child Labour: 10ರಲ್ಲಿ ಒಂದು ಮಗು ಇಂದಿಗೂ ಬಾಲ ಕಾರ್ಮಿಕ ವ್ಯವಸ್ಥೆಗೆ ಬಲಿ - ಕೂಲಿಕಾರ್ಮಿಕರಾಗಿ ದುಡಿಯಲು ಮುಂದಾಗುತ್ತಾರೆ

ಮಕ್ಕಳು ತಮ್ಮ ಅಮೂನ್ಯ ಬಾಲ್ಯವನ್ನು ದುಡಿಮೆಯಲ್ಲೇ ಕಳೆಯುತ್ತಿರುವುದನ್ನು ಮನಗಂಡ ಐಎಲ್​ಒ ಇದರ ನಿರ್ಮೂಲನೆಗೆ ಕಳೆದೆರಡು ದಶಕದಿಂದ ನಿರಂತರ ಪ್ರಯತ್ನ ಮಾಡುತ್ತಿದೆ.

World Day Against Child Labour: One in 10 children is a victim of child labor today
World Day Against Child Labour: One in 10 children is a victim of child labor today

By

Published : Jun 9, 2023, 4:32 PM IST

ಬಡತನವೇ ಬಾಲಕಾರ್ಮಿಕತೆಗೆ ಬಹುದೊಡ್ಡ ಕಾರಣ. ಮಕ್ಕಳು ಜೀವನೋಪಾಯಕ್ಕಾಗಿ ಕೂಲಿಕಾರ್ಮಿಕರಾಗಿ ದುಡಿಯಲು ಮುಂದಾಗುತ್ತಾರೆ. ಬಡತನದ ಸಂಪೂರ್ಣ ನಿರ್ಮೂಲನೆಗೆ ಹಲವು ವರ್ಷಗಳೇ ಬೇಕು. ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಅನೇಕ ಸಂಘಟನೆಗಳು ನಿಧಾನವಾಗಿ ಈ ಕುರಿತು ನಿರಂತರ ಕೆಲಸಗಳನ್ನು ಮಾಡುತ್ತಿವೆ. ಸರ್ಕಾರೇತರ ಸಂಸ್ಥೆಗಳೂ ಸಮಾಜದಲ್ಲಿ ಬದಲಾವಣೆ ತರುತ್ತಿವೆ. ವಿಶ್ವ ಕಾರ್ಮಿಕರ ವಿರುದ್ಧ ದಿನದ ಮಹತ್ವ ತಿಳಿಯೋಣ.

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಇತಿಹಾಸ: ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್​ಒ) ಮೊದಲ ಬಾರಿಗೆ ಬಾಲ ಕಾರ್ಮಿಕರ ಬಗ್ಗೆ ಧ್ವನಿ ಎತ್ತಿತ್ತು. 2002ರಲ್ಲಿ ಅಪಾಯದ ಪರಿಸ್ಥಿತಿಗಳಲ್ಲಿ 14 ವರ್ಷದ ಮಕ್ಕಳಿಂದ ದುಡಿಮೆ ಮಾಡಿಸುವುದು ಅಪರಾಧ ಎಂದು ಕಾನೂನು ಜಾರಿಗೆ ತಂದಿತು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್​ಒ) 187 ರಾಷ್ಟ್ರಗಳ ಸದಸ್ಯರನ್ನು ಹೊಂದಿದೆ.

ಐಎಲ್​ಇ ವಿಶ್ವದ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಅನೇಕ ಕಾನೂನುಗಳನ್ನು ಅಂಗೀಕರಿಸಿದೆ. ದಿನಗೂಲಿ, ಕೆಲಸದ ಸಮಯ, ಪೂರಕ ವಾತಾವರಣ ಮತ್ತು ಇತರೆ ಸಂಬಂಧ ಅಗತ್ಯ ಮಾರ್ಗದರ್ಶನ ಕೂಡ ಒದಗಿಸಿದೆ. 1973ರಲ್ಲಿ ಐಎಲ್​ಒ ಕನ್ವೆನ್ಶನ್​ ನಂ 138 ಅನ್ನು ಅಂಗೀಕರಿಸುವ ಮೂಲಕ ಕೆಲಸದ ಉದ್ಯೋಗಕ್ಕಾಗಿ ಕನಿಷ್ಠ ವಯಸ್ಸಿನವರ ಮೇಲೆ ಗಮನ ಕೇಂದ್ರೀಕರಿಸಿದೆ. ಈ ವೇಳೆ ಬಾಲ ಕಾರ್ಮಿಕರನ್ನು ಹೊಡೆದೋಡಿಸಲು ರಾಜ್ಯದ ಸದಸ್ಯರು ಕೆಲಸ ಮಾಡುವ ಉದ್ಯೋಗಿಗಳ ಕನಿಷ್ಠ ವಯೋಮಿತಿಯನ್ನು ನಿಗದಿಸಿದರು.

ವಿಶ್ವ ಬಾಲ ಕಾರ್ಮಿಕ ದಿನದ ಮಹತ್ವ: ಬಾಲ ಕಾರ್ಮಿಕತೆ ಹೆಚ್ಚಾಗಲು ಪ್ರಮುಖ ಕಾರಣ ಬಡತನ. ಕಡಿಮೆ ಮಧ್ಯಮ ಆದಾಯವಿರುವ ಕುಟುಂಬದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಕೆಲಸಕ್ಕೆ ದೂಡುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಇದರ ಜೊತೆಗೆ ಅನೇಕ ಅಪರಾಧ ರಾಕೆಟ್​​ಗಳಿಂದಾಗಿ ಮಕ್ಕಳು ಕೂಡ ಬಲವಂತವಾಗಿ ಬಾಲ ಕಾರ್ಮಿಕರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ರಕ್ಷಣೆ ಮಾಡಿ ಜಾಗತಿಕವಾಗಿ ಜನರ ಸೆಳೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗಿತ್ತಿದೆ.

ಬಾಲ ಕಾರ್ಮಿಕ ವಿರೋಧಿ ದಿನ ಆಚರಣೆ ಹೇಗೆ?: ಬಾಲ ಕಾರ್ಮಿಕ ವಿರೋಧಿ ದಿನದ ಹಿನ್ನೆಲೆಯಲ್ಲಿ ಕೆಲವು ಸ್ಥಳೀಯ ಅಧಿಕಾರಿಗಳು, ನಾಗರಿಕ ಸೊಸೈಟಿ ಮತ್ತು ಲಾಭ- ರಹಿತ ಸಂಸ್ಥೆಗಳು ಸೆಮಿನಾರ್​ ಮತ್ತು ಇತರೆ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಬಾಲ ಕಾರ್ಮಿಕರ ಸಮಸ್ಯೆಗಳ ಕುರಿತು ಗಮನ ಹರಿಸುತ್ತಾರೆ. ಬಾಲಕಾರ್ಮಿಕರಿಗೆ ಸಹಾಯ ಮಾಡಲು ಮಾರ್ಗಸೂಚಿಗಳನ್ನು ರೂಪಿಸಲು ಮುಂದಾಗುತ್ತಾರೆ.

ಬಾಲ ಕಾರ್ಮಿಕತೆ ವಿರುದ್ಧ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನದ ಫಲವಾಗಿ ಕಳೆದೆರಡು ದಶಕದಿಂದ ವಿಶ್ವದಲ್ಲಿ ಬಾಲ ಕಾರ್ಮಿಕತೆ ಕಡಿಮೆ ಮಾಡುವಲ್ಲಿ ಪ್ರಯತ್ನ ನಡೆಸಲಾಗಿದೆ. ಈ ನಡುವೆ ಕೆಲವು ಘರ್ಷಣೆ, ಬಿಕ್ಕಟ್ಟು ಮತ್ತು ಕೋವಿಡ್​​ ಸಾಂಕ್ರಾಮಿಕತೆ ಮತ್ತಷ್ಟು ಕುಟುಂಬವನ್ನು ಬಡತನಕ್ಕೆ ದೂಡಿದೆ. ಇಂದಿಗೂ 160 ಮಿಲಿಯನ್ ಮಕ್ಕಳು ಬಾಲಕಾರ್ಮಿಕ ವೃತ್ತಿಯಲ್ಲಿ ತೊಡಗಿದ್ದಾರೆ. ವಿಶ್ವದಲ್ಲಿ ಹತ್ತು ಮಕ್ಕಳಲ್ಲಿ ಒಂದು ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಮಕ್ಕಳೊಂದಿಗಿನ ನಿಮ್ಮ ಮಾತು ಅವರ ಮಿದುಳಿನ ಅಭಿವೃದ್ಧಿ ಹೆಚ್ಚಿಸುತ್ತದೆ: ಅಧ್ಯಯನ ವರದಿ

ABOUT THE AUTHOR

...view details