ಕರ್ನಾಟಕ

karnataka

By ETV Bharat Karnataka Team

Published : Oct 6, 2023, 5:00 PM IST

ETV Bharat / sukhibhava

ಸರ್ಕಾರೇತರ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾಬಲ್ಯ; ಉಳಿದ ಉದ್ಯಮಗಳಿಂದ ಶೇ 24ರಷ್ಟು ಹೆಚ್ಚು

ಇಂದು ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಹಲವು ಉದ್ಯಮಗಳನ್ನು ಮುನ್ನಡೆಸುತ್ತಾ ಪ್ರಗತಿ ಕಾಣುತ್ತಿದ್ದಾಳೆ.

Women Dominance in NGOs compared to other industries here is more number
Women Dominance in NGOs compared to other industries here is more number

ಮಹಿಳಾ ಸಬಲೀಕರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಭಾರತದ ರಾಜಕೀಯ ವ್ಯವಸ್ಥೆಯಲ್ಲೂ ಹೆಚ್ಚಿನ ಸ್ಥಾನಮಾನ ಕಲ್ಪಿಸಲು ಮಹಿಳಾ ಮೀಸಲಾತಿ ಮಸೂದೆಗೆ ಇತ್ತೀಚೆಗೆ ಸಂಸತ್ತು ಒಪ್ಪಿಗೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬಲ ತುಂಬುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಉಳಿದೆಲ್ಲಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್​ಜಿಒ) ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. 2023ರ ಸರ್ವೆಯ ಪ್ರಕಾರ ಎನ್‌ಜಿಒಗಳಲ್ಲಿ ಶೇ 45ರಷ್ಟು ಮಹಿಳೆಯರೇ ಇದ್ದು, ಇದು ಉಳಿದೆಲ್ಲಾ ಉದ್ದಿಮೆಗಳಿಗೆ ಹೋಲಿಕೆ ಮಾಡಿದಾಗ ಶೇ 24ರಷ್ಟು ಹೆಚ್ಚು ಎಂದು ವರದಿ ತಿಳಿಸಿದೆ.

ಗ್ರೇಟ್​ ಪ್ಲೇಸ್​ ಟು ವರ್ಕ್​ ಇಂಡಿಯಾ ವರದಿಯಲ್ಲಿ ಈ ಕುರಿತು ತಿಳಿಸಲಾಗಿದೆ. ದೇಶದಲ್ಲಿರುವ ಶೇ 80ರಷ್ಟು ಎನ್​ಜಿಒಗಳು ಪ್ರಾಥಮಿಕವಾಗಿ ಶಿಕ್ಷಣ, ಉತ್ತಮ ಆರೋಗ್ಯ ಹಾಗೂ ಯೋಗ ಕ್ಷೇಮಕ್ಕೆ ಒತ್ತು ನೀಡುವ ಪ್ರಯತ್ನ ಮಾಡುತ್ತಿದ್ದು, ಬಡತನ ನಿರ್ಮೂಲನೆಗೆ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರ ಮತ್ತು ಅಂಗನವಾಡಿಯ ಜೊತೆಗೂಡಿ ಹಲವು ವರ್ಷಗಳ ಕಾರ್ಯಾಚರಣೆಯ ಫಲವಾಗಿ ಪೋಲಿಯೋ ನಿರ್ಮೂಲನೆ ಮಾಡಲಾಗಿದೆ. ಇದು ಲಕ್ಷಾಂತರ ಮಂದಿಯಲ್ಲಿ ಹೊಸ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಗ್ರೇಟ್​​ ಪ್ಲೇಸ್​ ಟು ವರ್ಕ್​ ಇಂಡಿಯಾದ ಸಿಇಒ ಯಶಸ್ವಿನಿ ರಾಮಸ್ವಾಮಿ ಹೇಳಿದ್ದಾರೆ.

ಇಂಥ ಉದ್ಯೋಗಗಳು ಶೇ 2ರಷ್ಟು ಜಿಡಿಪಿಗೆ ಕೊಡುಗೆ ನೀಡಿದೆ ಎಂದು ಇಂಡಿಯಾದ ಮಿಲಿಯನ್​ ಮಿಷನ್​ನ ಲಾಭರಹಿತ ವಲಯದ ವರದಿ ತಿಳಿಸಿದೆ. ಸಮೀಕ್ಷೆಯ ಪ್ರಕಾರ, ಸರಾಸರಿ 13 ಸ್ಥಳಗಳಲ್ಲಿ ಎನ್‌ಜಿಒಗಳು ಕೆಲಸ ಮಾಡುತ್ತವೆ. 323 ವ್ಯಕ್ತಿಗಳು ಮತ್ತು ಅವರಲ್ಲಿ ಶೇ 97ರಷ್ಟು ಮಂದಿ ಪೂರ್ಣ ಸಮಯ ಕೆಲಸ ಮಾಡುತ್ತಿದ್ದಾರೆ. ಎನ್​ಜಿಇ ದರ್ಪನ್​ ಪೋರ್ಟಲ್​ ಪ್ರಕಾರ, ಉಳಿದ ಎಲ್ಲಾ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅಧಿಕ ಎನ್​ಜಿಒಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಕ್ರಮವಾಗಿ ಶೇ 15 ಮತ್ತು 14ರಷ್ಟು ಎನ್​ಜಿಒಗಳಿದೆ. ಇದಾದ ಬಳಿಕ ನಂತರದ ಸ್ಥಾನದಲ್ಲಿ ದೆಹಲಿಯಲ್ಲಿ ಶೇ 8ರಷ್ಟಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇ7ರಷ್ಟು ಎನ್​ಜಿಒಗಳಿವೆ. (ಐಎಎನ್​ಎಸ್​)

ಇದನ್ನೂ ಓದಿ: Cricket World Cup 2023: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023... ಲಿಂಗ ಸಮಾನತೆ ಸಾರುವ ಮ್ಯಾಸ್ಕಾಟ್ ಬಿಡುಗಡೆ

ABOUT THE AUTHOR

...view details