ಲಂಡನ್:ನಾವು ಸೇವಿಸುವ ಆಹಾರವು ನಮ್ಮ ಭೂಮಿಯ ಸ್ಥಿತಿಗತಿಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಭೂಮಿಯ ಮೇಲಿನ ಅರ್ಧದಷ್ಟು ವಾಸಯೋಗ್ಯ ಭೂಮಿಯನ್ನು ಕೃಷಿ ಆಕ್ರಮಿಸುತ್ತದೆ. ಕೃಷಿಯು ಅರಣ್ಯಗಳು, ಇತರ ಪರಿಸರ ವ್ಯವಸ್ಥೆಗಳನ್ನು ನಾಶಪಡಿಸುತ್ತದೆ ಮತ್ತು ವಿಶ್ವದ ಹಸಿರುಮನೆ ಅನಿಲ ಹೊರಸೂಸುವಿಕೆಯ ಕಾಲು ಭಾಗ ಕೃಷಿಯಿಂದಲೇ ಉತ್ಪನ್ನವಾಗುತ್ತದೆ. ಮಾಂಸ ಮತ್ತು ಹೈನುಗಾರಿಕೆ ನಿರ್ದಿಷ್ಟವಾಗಿ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯ ಸುಮಾರು ಶೇ 14.5 ರಷ್ಟಿದೆ. ಆದ್ದರಿಂದ ನಾವು ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಕೃಷಿ ಉತ್ತೇಜಿಸಲು ಸಹಾಯ ಮಾಡುತ್ತದೆ.
ಈ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳಲು ನಮ್ಮೆದುರಿಗೆ ಹಲವಾರು ಪರಿಸರ ಸ್ನೇಹಿ ಆಹಾರ ಪದ್ಧತಿಗಳಿವೆ. ಸಸ್ಯ ಆಧರಿತ ಸಸ್ಯಾಹಾರಿ ಆಹಾರ ಪದ್ಧತಿಯು ಈವರೆಗೆ ನಮಗೆ ತಿಳಿದ ಅತ್ಯುತ್ತಮ ಆಹಾರ ಪದ್ಧತಿಯಾಗಿದೆ. ಇದರಲ್ಲಿ ಮೊಟ್ಟೆ ಹಾಗೂ ಹೈನುಗಳನ್ನು ಸಹ ಸೇರಿಸಿಕೊಳ್ಳಬಹುದು. ಇದರ ಜೊತೆಗೆ ಕಡಲು ಆಹಾರ ಪದ್ಧತಿ ಸಹ ಉತ್ತಮವಾಗಿದೆ.
ಏನಿದು ಫ್ಲೆಕ್ಸಿಟರೇನಿಯನ್ ಡಯಟ್?:ಫ್ಲೆಕ್ಸಿಟರೇನಿಯನ್ ಡಯಟ್ ಎಂದು ಕರೆಯಲಾಗುವ ಆಹಾರ ಪದ್ಧತಿಯಲ್ಲಿ ಮೂರು ಹೊತ್ತಿನ ಮಾಂಸ ಹಾಗೂ ಹೈನು ಊಟವನ್ನು ಸಂಪೂರ್ಣ ಸಸ್ಯ ಆಧರಿತ ಆಹಾರದೊಂದಿಗೆ ಬದಲಾಯಿಸಲಾಗುತ್ತದೆ. ಮೆಡಿಟರೇನಿಯನ್ ಡಯೆಟ್ ಪದ್ಧತಿಯಲ್ಲಿ ಮಧ್ಯಮ ಪ್ರಮಾಣದ ಕೋಳಿ, ಹಂದಿ ಮಾಂಸ, ಕುರಿಮಾಂಸ ಮತ್ತು ಗೋಮಾಂಸ ಸೇವಿಸಲಾಗುತ್ತದೆ. ಇವೆಲ್ಲವುಗಳ ಮಧ್ಯೆ ಯಾವ ಆಹಾರ ಪದ್ಧತಿ ಉತ್ತಮ ಎಂಬುದನ್ನು ನಿರ್ಧರಿಸುವುದು ಕಷ್ಟದ ವಿಷಯವಾಗುತ್ತದೆ.
ಜಗತ್ತಿನಲ್ಲಿ ಹುಟ್ಟಿಕೊಂಡಿರುವ ಹೊಸದೊಂದು ನಂಬಿಕೆಯ ಬಗ್ಗೆ ನೋಡೋಣ.. ಇತ್ತೀಚೆಗೆ ಹುಟ್ಟಿಕೊಂಡಿರುವ ಹೊಸ ಆಹಾರ ಪದ್ಧತಿ ಎಂದರೆ ಹವಾಮಾನ ಆಹಾರ ಪದ್ಧತಿ. ಲಾಭರಹಿತ ಸಂಸ್ಥೆಯಾದ ಕ್ಲೈಮೇಟ್ಸ್ ನೆಟ್ವರ್ಕ್ ಇದರ ಒಂದು ಆವೃತ್ತಿಯನ್ನು ತಿಳಿಸಿದೆ.
ಈ ಆಹಾರ ಪದ್ಧತಿಯು ಆರೋಗ್ಯಕರ, ಪರಿಸರ ಸ್ನೇಹಿ ಮತ್ತು ಹವಾಮಾನ ಸ್ನೇಹಿಯಾಗಿದೆ ಎಂದು ಸಂಸ್ಥೆ ಹೇಳಿದೆ. ಇದರ ಪ್ರಕಾರ ಸರಳವಾದ ಆಹಾರ ಬದಲಾವಣೆಯ ಮೂಲಕ ಪ್ರತಿ ವ್ಯಕ್ತಿಯು ಪ್ರತಿವರ್ಷ ಟನ್ಗಟ್ಟಲೆ ಇಂಗಾಲದ ಡೈ ಆಕ್ಸೈಡ್ ಸಮಾನದಷ್ಟು ಮಾಲಿನ್ಯ ತಪ್ಪಿಸಬಹುದು. (ಸಮಾನದ ಎಂದರೆ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ಮಿಥೇನ್ ಹಾಗೂ ಇತರ ಹಸಿರುಮನೆ ಅನಿಲಗಳು).