ಬಹುತೇಕ ಮಹಿಳೆಯರಲ್ಲಿ ಮೆನೋಪಾಸ್ (ಮುಟ್ಟುವ ನಿಲ್ಲುವ ಅವಧಿ) ಸಮಯದಲ್ಲಿ ತೂಕ ಹೆಚ್ಚಳವಾಗುತ್ತದೆ. ಈ ಸಮಸ್ಯೆಗೆ ಪ್ರಮುಖ ಕಾರಣ ದೇಹದಲ್ಲಿನ ಈಸ್ಟ್ರೋಜನ್ ಮತ್ತು ಪ್ರೋಗೆಸ್ಟ್ರೊನ್ ಹಾರ್ಮೋನ್ಗಳ ಮಟ್ಟ ಇಳಿಕೆಯಾಗುವುದು. ವಯಸ್ಸಾದಂತೆ ಸ್ನಾಯುಗಳ ಬಲ ಕುಗ್ಗುತ್ತದೆ. ದೇಹದಲ್ಲಿನ ಕೊಬ್ಬಿನ ಪ್ರಮಾಣ ಕೂಡ ಹೆಚ್ಚುತ್ತದೆ. ಇದರ ಜೊತೆಗೆ ದೇಹದ ಚಯಾಪ ಚಯ ಕ್ರಿಯೆ ಕೂಡ ಕಡಿಮೆಯಾಗುತ್ತದೆ. ಹೀಗಾಗಿ ದೇಹದ ಕ್ಯಾಲೋರಿ ಕರಗಿಸುವ ಶಕ್ತಿ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ಆದಾಗ್ಯೂ ನಿಯಮಿತ ವ್ಯಾಯಾಮದಿಂದ ಈ ತೂಕ ನಿರ್ವಹಣೆ ಸಾಧ್ಯ. ಈ ನಿಟ್ಟಿನಲ್ಲಿ ಮೆನೋಪಾಸ್ ಸಮಯದಲ್ಲಿ ತೂಕ ಕಳೆದುಕೊಳ್ಳಲು ಯಾವ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ
ಸಮತೋಲಿತ ಆಹಾರ: ಮಹಿಳೆಯರು ಮೆನೋಪಾಸ್ ಸಮಯದಲ್ಲಿ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರಗಳು ಪಾಲನೆ ಅವಶ್ಯವಾಗಿದೆ. ಇದಕ್ಕಾಗಿ ತಾಜಾ ಹಣ್ಣು ಮತ್ತು ತರಕಾರಿಗಳಿಂದ ಕೂಡಿದ ಪೋಷಕಾಂಶ ಸಮೃದ್ಧ ಆಹಾರಗಳ ಸೇವನೆ ಮಾಡುವತ್ತ ಹೆಚ್ಚಿನ ಗಮನವಹಿಸಬೇಕು. ಈ ಸಮಯದಲ್ಲಿ ಮಹಿಳೆಯರು ಹಲವು ಸಮಸ್ಯೆಗೆ ಒಳಗಾಗುವ ಹಿನ್ನೆಲೆ ಈ ಸಂಬಂಧ ತಮ್ಮ ಆಹಾರ ಅಭ್ಯಾಸ ಮತ್ತು ಬದಲಾವಣೆ ಕುರಿತು ತಜ್ಞರಿಂದ ಸಮಾಲೋಚನೆ ಪಡೆಯುವುದು ಕೂಡ ಉತ್ತಮವಾಗಿದೆ.
ವ್ಯಾಯಾಮ:ಈ ಸಮಯದಲ್ಲಿ ವಯೋ ಸಂಬಂಧಿ ಆರೋಗ್ಯ ಸಮಸ್ಯೆಗಳು, ತೂಕ ಹೆಚ್ಚಳ ಸಮಸ್ಯೆಯನ್ನು ಅನೇಕ ಮಂದಿ ಎದುರಿಸುತ್ತಾರೆ. ವಿಶೇಷವಾಗಿ ಮಹಿಳೆಯರು ಮೆನೋಪಾಸ್ ಸಮಯದಲ್ಲಿ ಅನೇಕ ಆರೋಗ್ಯ ಸಮಸ್ಯೆ ಹೊಂದಿರುತ್ತಾರೆ. ಈ ಹಿನ್ನೆಲೆ ಇದರಿಂದ ಮುಕ್ತಿ ಹೊಂದಲು ಇರುವ ಅವಕಾಶ ಎಂದರೆ ವ್ಯಾಯಾಮವಾಗಿದೆ. ಮನೆಯಲ್ಲಿನ ತಮ್ಮ ದೈನಂದಿನ ಕೆಲಸದ ಹೊರತಾಗಿ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಇದರ ಜೊತೆಗೆ ಜಿಮ್ ಅಥವಾ ಇನ್ನಿತರ ಅಗತ್ಯ ವ್ಯಾಯಾಮವನ್ನು ಅನುಸರಿಸಬಹುದು. ಇದರಿಂದ ತೂಕ ಹೆಚ್ಚಳದ ಸಮಸ್ಯೆ ನಿರ್ವಹಣೆ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು