ಮದ್ಯ ಸೇವನೆಗೆ ಆರೋಗ್ಯಕರ ಮಿತಿ ಎಂಬುದಿಲ್ಲ. ಎಷ್ಟೇ ಪ್ರಮಾಣದ ಕುಡಿತವೂ ವ್ಯಕ್ತಿಯೊಬ್ಬನ ಆರೋಗ್ಯಕ್ಕೆ ಹಾನಿಕಾರಕವೇ ಆಗಿದೆ ಎಂಬುದನ್ನು ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ನ ಕ್ಯಾನ್ಸರ್, ಆಲ್ಕೋಹಾಲ್ ಜೊತೆಗೆ ಕಲ್ನಾರಿನ, ವಿಕಿರಣ ಮತ್ತು ತಂಬಾಕು ಸೇವನೆ ಹೆಚ್ಚಿನ ಅಪಾಯದ ಗುಂಪು 1 ಕಾರ್ಸಿನೋಜೆನ್ ಅಪಾಯ ಹೊಂದಿದೆ. ಇದು ಕ್ಯಾನ್ಸರ್ಗೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ತಿಳಿಸಲಾಗಿದೆ.
ಮದ್ಯವೂ ಕನಿಷ್ಠ ಎಂದರೂ ಏಳು ರೀತಿಯ ಕ್ಸಾನ್ಸರ್ಗೆ ಕಾರಣವಾಗುತ್ತದೆ ಎಂಬುದನ್ನು ಹಿಂದಿನ ಅಧ್ಯಯನದಲ್ಲಿ ಏಜೆನ್ಸಿ ತಿಳಿಸಿದೆ. ಸಾಮಾನ್ಯ ಕ್ಯಾನ್ಸರ್ನಿಂದ ಮಹಿಳೆಯರ ಸ್ತನ ಕ್ಯಾನ್ಸರ್ವರೆಗೆ ಇದು ಹಲವು ರೀತಿಯ ಕ್ಯಾನ್ಸರ್ ಒಳಗೊಂಡಿದೆ. ಜೊತೆಗೆ ಇದು ಅನ್ನನಾಳ, ಯಕೃತ್ ಮತ್ತು ಕೊಲೆಸ್ಟ್ರಾಲ್ ಕ್ಯಾನ್ಸರ್ ಜೊತೆಗೆ ಸಂಬಂಧ ಹೊಂದಿದೆ. ಬೆಲೆ ಮತ್ತು ಗುಣಮಟ್ಟದ ಹೊರತಾಗಿ ಯಾವುದೇ ರೀತಿಯ ಮದ್ಯ ಪಾನೀಯಗಳು ಕ್ಯಾನ್ಸರ್ ಅಭಿವೃದ್ಧಿಗೆ ಕಾರಣವಾಗುತ್ತದೆ.
ಕ್ಯಾನ್ಸರ್ಗೆ ಕಾರಣವಾಗುತ್ತಿರುವ ಆಲ್ಕೋಹಾಲ್: ಯುರೋಪಿಯನ್ ಪ್ರದೇಶದಲ್ಲಿ ಕ್ಯಾನ್ಸರ್ ಸಾವಿಗೆ ಕಾರಣವಾಗುತ್ತಿದೆ. ಹಗುರದಿಂದ ಸಾಧಾರಣ ಮದ್ಯ ಸೇವನೆ ಅದು 20 ಗ್ರಾಗಿಂತ ಕಡಿಮೆ ಶುದ್ದ ಮದ್ಯ ಸೇವನೆ 23 ಸಾವಿರ ಮಂದಿಯಲ್ಲಿ ಹೊಸ ರೀತಿಯ ಕ್ಯಾನ್ಸರ್ಗೆ ಕಾರಣವಾಗಿದೆ. ಅರ್ಧಕ್ಕಿಂತ ಹೆಚ್ಚಿನ ಕ್ಯಾನ್ಸರ್ ಆಲ್ಕೋಹಾಲ್ನೊಂದಿಗೆ ಸಂಬಂಧ ಹೊಂದಿದ್ದು, ಮಹಿಳೆಯರಲ್ಲಿ ಶೇ 50ರಷ್ಟು ಮಂದಿಯಲ್ಲಿ ಸ್ತನ ಕ್ಯಾನ್ಸರ್ಗೂ ಕಾರಣವಾಗಿದೆ.