ಬೆಳಗ್ಗಿನ ಹೊತ್ತು ಹಾಗೇ ಒಂದು ಜೋಂಪು ನಿದ್ದೆ ಹೊಡೆಯುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಗಾಢವಾದ ನಿದ್ದೆಯೂ ರಾತ್ರಿಯ ನಿದ್ದೆ ಮೇಲೆ ಭಂಗ ಉಂಟು ಮಾಡುತ್ತದೆ. ಇದರಿಂದ ರಾತ್ರಿ ನಿದ್ದೆ ಅವಧಿಗೆ ತೊಂದರೆಯಾಗಿ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ.
ನಮ್ಮ ಜೀವನದ ಅರ್ಧ ಆಯುಷ್ಯವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಇದು ಆರೋಗ್ಯಕ್ಕೆ ಅತ್ಯಗತ್ಯ ಕೂಡ. ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದರೆ ಕಿರಿಕಿರಿ, ಸುಸ್ತು ಮತ್ತು ಬೇಸರದ ಅನುಭವ ಆಗುತ್ತದೆ. ಜೊತೆಗೆ ದೈಹಿಕ ಪ್ರಕ್ರಿಯೆಯ ವೇಗ ಕೂಡ ಇಳಿಕೆ ಆಗುತ್ತದೆ. ತಲೆ ನೋವು, ಮಾನಸಿಕ ಒತ್ತಡದಂತಹ ಅನೇಕ ಸಮಸ್ಯೆಗಳು ಕಾಡುತ್ತದೆ. ದೀರ್ಘಕಾಲದ ಕಡಿಮೆ ನಿದ್ದೆಯಿಂದ ನಿದ್ರಾಹೀನತೆ ಕೂಡ ಆವರಿಸಿಕೊಳ್ಳುತ್ತದೆ. ಇದಕ್ಕೆ ಅನೇಕ ಕೊಡುಗೆಗಳು ಇದ್ದು, ಸರಿಯಾದ ಕಾರಣ ಪತ್ತೆಯಾದರೆ, ಇದನ್ನು ಸರಿಪಡಿಸಬಹುದು.
ಬೆಳಗಿನ ನಿದ್ದೆ: ಬೆಳಗಿನ ಹೊತ್ತು ಸಣ್ಣ ನಿದ್ದೆ ಮಾಡುವುದರಿಂದ ಸಮಸ್ಯೆ ಇಲ್ಲ. ಆದರೆ, ಈ ನಿದ್ದೆ ನಿಮ್ಮ ರಾತ್ರಿ ನಿದ್ದೆ ಮೇಲೆ ಪರಿಣಾಮ ಬೀರಬಾರದು. ಇದರಿಂದಾಗಿ ದೇಹಕ ಜೈವಿಕ ಗಡಿಯಾರ ತಪ್ಪುತ್ತದೆ. ಇದು ಹಗಲಿನಲ್ಲಿ ಸಕ್ರಿಯವಾಗಿರುವಂತೆ ಮಾಡಿ ರಾತ್ರಿಯಲ್ಲಿ ಮಲಗುವ ಪ್ರಕ್ರಿಯೆ ಮೇಲೆ ಅಡ್ಡಿಪಡಿಸುತ್ತದೆ. ಈ ಹಿನ್ನಲೆ ರಾತ್ರಿ ನಿದ್ದೆಯಿಂದ ಬಳಲುವವರು ಬೆಳಗಿನ ಹೊತ್ತಿನ ನಿದ್ದೆಯನ್ನು ತಪ್ಪಿಸುವುದು ಉತ್ತಮ.
ದೀರ್ಘ ರಾತ್ರಿ ಕೆಲಸ: ಎಲ್ಲ ದಿನವೂ ಕೆಲಸ ಮಾಡಲು ನಾವು ಮೆಷಿನ್ಗಳಲ್ಲ. ಮನಸು, ದೇಹ ಮತ್ತು ಸ್ನಾಯುಗಳಿಗೆ ಕೆಲಸದಿಂದ ವಿಶ್ರಾಂತಿ ಬೇಕಾಗುತ್ತದೆ. ನಾವು ಕ್ರಿಯಾಶೀಲವಾಗಿರುವರೆಗೂ ಅಡ್ರಿನಾಲಿನ್ ಹಾರ್ಮೋನ್‌ಗಳ ಪ್ರಮಾಣ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಅಂದರೆ, ಮಲಗುವು ಕೆಲವು ಗಂಟೆಗಳ ಮೊದಲು ದೇಹವನ್ನು ನಿದ್ರೆಗಾಗಿ ಸಿದ್ಧಪಡಿಸುವುದು. ಹಾಗಾಗಿ ಮಲಗುವ ಮುನ್ನ ಕೆಲಸದಲ್ಲಿ ತೊಡಗಬಾರದು. ಈ ಸಮಯದಲ್ಲಿ ಇಷ್ಟವಾದ ಪುಸ್ತಕವನ್ನು ಓದುವುದು. ಸಂಗೀತವನ್ನು ಕೇಳುವುದು ಮತ್ತು ಧ್ಯಾನ ಮಾಡುವ ಮೂಲಕ ಮನಸ್ಸನ್ನು ವಿಶ್ರಾಂತಗೊಳಿಸಬೇಕು