ಕರ್ನಾಟಕ

karnataka

ETV Bharat / sukhibhava

ಒತ್ತಡ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅಯೋವಾ ವಿಶ್ವವಿದ್ಯಾಲಯ ಸಂಶೋಧನೆ - ಈಟಿವಿ ಭಾರತ ಕನ್ನಡ ನ್ಯೂಸ್

ಅಯೋವಾ ವಿಶ್ವವಿದ್ಯಾಲಯದ ಸಂಶೋಧಕರು ಬೆದರಿಕೆಗೆ ಉಂಟಾಗುವ ಪ್ರತಿಕ್ರಿಯೆಯ ಮೂಲವನ್ನು ಪತ್ತೆಹಚ್ಚಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ, ಮೆದುಳಿನ ಎರಡು ವಿಭಿನ್ನ ಪ್ರದೇಶಗಳನ್ನು ಸಂಪರ್ಕಿಸುವ ನರವ್ಯೂಹವು ಮಾನವರು ಸೇರಿದಂತೆ ಪ್ರಾಣಿಗಳು ಒತ್ತಡದ ಸಂದರ್ಭಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.

research-shows-how-stress-affects-brain
ಒತ್ತಡವು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ..ಅಯೋವಾ ವಿಶ್ವವಿದ್ಯಾಲಯ ಸಂಶೋಧನೆ

By

Published : Oct 25, 2022, 9:50 PM IST

ಅಯೋವಾ (ಯುಎಸ್): ನಾವೆಲ್ಲರೂ ಕೆಲವು ಹಂತದಲ್ಲಿ ಮಾನಸಿಕ ಒತ್ತಡ ಪರಿಣಾಮಗಳನ್ನು ಅನುಭವಿಸಿರುತ್ತೇವೆ. ಇದರ ಪರಿಣಾಮಗಳಿಗೆ ನಾವು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಈ ಬಗ್ಗೆ ಅಯೋವಾ ವಿಶ್ವವಿದ್ಯಾಲಯದ ಸಂಶೋಧಕರು ನಮ್ಮಲ್ಲಿ ಉಂಟಾಗುವ ಒತ್ತಡಕ್ಕೆ ಪ್ರತಿಕ್ರಿಯೆಯ ಮೂಲವನ್ನು ಪತ್ತೆ ಹಚ್ಚಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ, ಮೆದುಳಿನ ಎರಡು ವಿಭಿನ್ನ ಪ್ರದೇಶಗಳನ್ನು ಸಂಪರ್ಕಿಸುವ ನರವ್ಯೂಹವು ಮಾನವರು ಸೇರಿದಂತೆ ಪ್ರಾಣಿಗಳು ಒತ್ತಡದ ಸಂದರ್ಭಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ನಿಯಂತ್ರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಯೋವಾ ವಿಶ್ವವಿದ್ಯಾಲಯ ಸಂಶೋಧನೆ:ಈ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳು ಇಲಿಗಳನ್ನು ಬಳಕೆ ಮಾಡಿಕೊಂಡಿದ್ದು, ಇವು ಒತ್ತಡಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಇದರ ಎಲ್ಲ ಪ್ರತಿಕ್ರಿಯೆಗಳಿಗೆ ಮೆದುಳಿನಲ್ಲಿನ ನಿರ್ದಿಷ್ಟ ನರಗಳ ಸಂಬಂಧವನ್ನು ವಿಜ್ಞಾನಿಗಳು ವಿವರಿಸಿದ್ದಾರೆ. ಜೊತೆಗೆ ಸಂಶೋಧಕರು ತಮ್ಮ ಪ್ರಯೋಗದಲ್ಲಿ ನರವ್ಯೂಹಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಶೋಧನೆಗೆ ಇಲಿಗಳ ಬಳಕೆ: ಹಿಂದಿನ ಅಧ್ಯಯನಗಳ ಪ್ರಕಾರ, ಪ್ರಾಣಿಗಳು ಒತ್ತಡಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ನಿಯಂತ್ರಿಸುವ ಪ್ರಮುಖ ಮಾರ್ಗವೆಂದರೆ ಕಾಡಲ್ ಮೀಡಿಯಲ್​ ಪ್ರಿಫ್ರಂಟಲ್ ಕಾರ್ಟೆಕ್ಸ್-ಮಿಡ್‌ಬ್ರೇನ್ ಡಾರ್ಸೋಲೇಟರಲ್ ಪೆರಿಯಾಕ್ವೆಡಕ್ಟಲ್ ಗ್ರೇ ಎಂಬ ನರವ್ಯೂಹ. ಈ ನರವ್ಯೂಹದ ಮಾರ್ಗವನ್ನು ನಿಷ್ಕ್ರಿಯಗೊಳಿಸುವ ಮೂಲಕ ಇಲಿಗಳು ಬೆದರಿಕೆಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ.

ಮೂರನೇ ಪರೀಕ್ಷೆಯಲ್ಲಿ, ಸಂಶೋಧಕರು ಇಲಿಗಳನ್ನು ದೀರ್ಘಕಾಲದ ಒತ್ತಡಕ್ಕೆ ಒಡ್ಡಿದರು. ಎರಡು ವಾರಗಳ ಅವಧಿಯಲ್ಲಿ ದೈನಂದಿನ ಒತ್ತಡಕ್ಕೆ ಒಳಪಡಿಸಲಾಯಿತು. ಇದರಲ್ಲಿ ಅವರು ಒತ್ತಡದ ಹಾರ್ಮೋನ್ ಮಟ್ಟವು ಹೆಚ್ಚಾಗುವುದನ್ನು ಗಮನಿಸಿದರು. ಅಲ್ಲದೇ ಇಲಿಗಳ ನರವ್ಯೂಹಗಳನ್ನು ಸಕ್ರಿಯಗೊಳಿಸುವ ಮೊದಲು ಮತ್ತು ನಂತರ ನಡೆಸಿದ ರಕ್ತ ಪರೀಕ್ಷೆಗಳು ಬೆದರಿಕೆಯ ಸ್ಥಿತಿಯಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್‌ನ ಮಟ್ಟವು ಹೆಚ್ಚಾಗುವುದಿಲ್ಲ ಎಂದು ತಿಳಿದುಬಂದಿದೆ.

ಒತ್ತಡವು ಮಾನಸಿಕ, ದೈಹಿಕ ಅಸ್ವಸ್ಥತೆಗೆ ಕಾರಣ: ಸಂಶೋಧಕ ಜೇಸನ್​ ರಾಡ್ಲಿ ಪ್ರಕಾರ, ಮಾನವರು ದೀರ್ಘಕಾಲದ ಒತ್ತಡವನ್ನು ಅನುಭವಿಸುತ್ತಾರೆ. ಅದಕ್ಕಾಗಿಯೇ ದೀರ್ಘಕಾಲದ ಒತ್ತಡ ಪರೀಕ್ಷೆಯು ನಿರ್ಣಾಯಕವಾಗಿದೆ. ಕೆಲವರು ವಿನಾಕಾರಣ ಒತ್ತಡನ್ನು ತಲೆಯಲ್ಲಿ ಹೊರುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಈ ನಡವಳಿಕೆಯನ್ನು ಸಂಶೋಧಕರು ಒತ್ತಡದ ಸ್ಥಿತಿಸ್ಥಾಪಕತ್ವ ಎಂದು ಕರೆದಿದ್ದಾರೆ. ಈ ಮಿದುಳಿನ ಪ್ರಕ್ರಿಯೆಯನ್ನು ಅರ್ಥೈಸಿಕೊಂಡು ನಮ್ಮ ಒತ್ತಡವನ್ನು ನಿಯಂತ್ರಿಸಬಹುದು ಎಂದು ಕಂಡುಕೊಂಡಿದ್ದಾರೆ.

ಇದನ್ನೂ ಓದಿ:ಪುರುಷರು ಸ್ತ್ರೀರೋಗ ತಜ್ಞರಾಗಿದ್ದರೆ ಎದುರಿಸುವ ಸವಾಲುಗಳೇನು? ಡಾ. ಹಿಮಾಂಶು ರೈ Exclusive ಸಂದರ್ಶನ

ABOUT THE AUTHOR

...view details