ಕರ್ನಾಟಕ

karnataka

ETV Bharat / sukhibhava

ತಾಯಿಗೆ ಮಾತ್ರವಲ್ಲ.. ತಂದೆಗೂ ಕಾಡುತ್ತಾ ಪ್ರಸವಪೂರ್ವ ಖಿನ್ನತೆ? - ಈಟಿವಿ ಭಾರತ್​​ ಕನ್ನಡ

ತಾಯಿಯ ಜೊತೆಗೆ ತಂದೆಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿ ಹೆಣೆದುಕೊಂಡಿರುತ್ತದೆ. ತಾಯಂದಿರ ಆರೋಗ್ಯ ಬಿಕ್ಕಟ್ಟು ಸುಧಾರಿಸುವಲ್ಲಿ ತಂದೆಯ ಆರೋಗ್ಯವನ್ನು ಸುಧಾರಿಸುವುದು ಪ್ರಮುಖವಾಗಿದೆ

postpartum depression affects fathers too
postpartum depression affects fathers too

By ETV Bharat Karnataka Team

Published : Oct 5, 2023, 5:57 PM IST

ನ್ಯೂಯಾರ್ಕ್​​: ಮದುವೆ ಬಳಿಕ ಗರ್ಭಿಣಿಯಾಗುವ ಯಾವುದೇ ಮಹಿಳೆಗೆ ಹೊಸ ಅನುಭವ, ಖುಷಿ ನೀಡುತ್ತದೆ. ಇದು ಆಕೆಯ ಪತಿಗೂ ಸಂತಸದ ವಿಷಯವಾಗುತ್ತೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಪ್ರಸವಪೂರ್ವ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಈ ಖಿನ್ನತೆ ಪುರುಷರಲ್ಲೂ ಕಾಡುವ ಸಾಧ್ಯತೆ ಇದ್ದು, ಈ ಸಂಬಂಧ ಅವರನ್ನು ಪರಿಶೀಲನೆಗೆ ಒಳಪಡಿಸಬೇಕಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ತಾಯಿಯ ಜೊತೆಗೆ ತಂದೆಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿ ಹೆಣೆದುಕೊಂಡಿರುತ್ತದೆ. ತಾಯಂದಿರ ಆರೋಗ್ಯ ಬಿಕ್ಕಟ್ಟು ಸುಧಾರಿಸುವಲ್ಲಿ ತಂದೆಯ ಆರೋಗ್ಯವನ್ನು ಸುಧಾರಿಸುವುದು ಪ್ರಮುಖವಾಗಿದೆ ಎಂದು ಯುನಿವರ್ಸಿಟಿ ಆಫ್​ ಇಲ್ಲಿನೊಯಿಸ್​ ಶಿಕಾಗೋ ಸಂಶೋಧಕರು ತಿಳಿಸಿದ್ದಾರೆ.

ಜರ್ನಲ್​ ಬಿಎಂಸಿ ಪ್ರಗ್ನೆನ್ಶಿ ಅಂಡ್​ ಚೈಲ್ಡ್​​ಬರ್ತ್​​ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. ಈ ಅಧ್ಯಯನ ಸಂಬಂಧ ಸಂಶೋಧಕರು 24 ತಂದೆಯಂದಿರನ್ನು ಸಂದರ್ಶನ ನಡೆಸಿದ್ದಾರೆ. ಶೇ 30ರಷ್ಟು ತಂದೆಯರು ಕೂಡ ಪ್ರಸವ ಪೂರ್ವದ ಬಳಿಕ ತಾಯಂದಿರಂತೆ ಖಿನ್ನತೆಗೆ ಗುರಿಯಾಗಿದ್ದಾರೆ. ಹೊಸ ತಂದೆಯಂದಿರು ಪ್ರಸವಪೂರ್ವ ಪರಿಸ್ಥಿತಿಯನ್ನು ಅನುಭವಿಸುತ್ತಾರೆ ಎಂಬುದು ಪ್ರಮುಖ ಅಂಶವಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾದ ಡಾ ಸ್ಯಾಮ್​ ವೈನ್​ರೈಟ್​​ ತಿಳಿಸಿದ್ದಾರೆ.

ಅನೇಕ ತಂದೆಯಂದಿರು ಈ ಪ್ರಸವ ಪೂರ್ವ ಖಿನ್ನತೆಯಿಂದ ಒತ್ತಡಕ್ಕೆ ಒಳಗಾಗುತ್ತಾರೆ. ಜೊತೆಗೆ ಭೀತಿಗೆ ಒಳಗಾಗುತ್ತಾರೆ. ಅವರು ಪೋಷಕತ್ವದ ಜವಾಬ್ದಾರಿ ನಿಭಾಯಿಸುವ ಜೊತೆಗೆ ಕೆಲಸದ ಸಮತೋಲನ ಮಾಡುವುದಕ್ಕೆ ಕಷ್ಟಪಡುತ್ತಾರೆ. ಅನೇಕ ಸಂದರ್ಭದಲ್ಲಿ ಪುರುಷರು ಈ ಖಿನ್ನತೆಗೆ ಒಳಗಾದರೂ ಇದರ ಬಗ್ಗೆ ಅನೇಕ ಮಂದಿ ಈ ಬಗ್ಗೆ ವಿಚಾರಿಸುವುದಿಲ್ಲ ಎಂದಿದ್ದಾರೆ.

ಹೊಸ ತಂದೆಯಂದಿರಿಗೆ ಅವರ ಮಾನಸಿಕ ಆರೋಗ್ಯದ ಕುರಿತು ಮಾತನಾಡುವುದು ಅವರ ಪಾಲುದಾರರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಗಣಿಸುವುದು ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ತನ್ನ ಸಂಗಾತಿ​​ ಕೂಡ ಖಿನ್ನತೆ ಹೊಂದಿದ್ದಲ್ಲಿ ಪ್ರಸವ ಪೂರ್ವದ ಬಳಿಕ ಮಹಿಳೆಯರನ್ನು ಕಾಡುವ ಖಿನ್ನತೆ ಅಪಾಯವೂ ಹೆಚ್ಚಿರುತ್ತದೆ ಎಂದು ವೈನ್​ ರೈಟ್​ ವಿವರಿಸಿದ್ದಾರೆ.

ಪ್ರಸವಪೂರ್ವ ಖಿನ್ನತೆ ಹೊಂದುವ ಯುವ ಪುರುಷರು ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ತೊಳಲಾಡುತ್ತಾರೆ. ಅಲ್ಲದೇ ಅವರು ವೈದ್ಯರ ಸಂಪರ್ಕಕ್ಕೆ ಒಳಗಾಗಲು ಇಚ್ಛಿಸುವುದಿಲ್ಲ. ನಿಮ್ಮ ಮಗುವಿನ ಸಲುವಾಗಿ, ನಿಮ್ಮ ಸಂಗಾತಿಯ ಸಲುವಾಗಿ ಮತ್ತು ವೈಯಕ್ತಿಕವಾಗಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ನಾವು ಅವರಿಗೆ ತೋರಿಸಬೇಕಾಗಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಇವರಲ್ಲಿ ದೀರ್ಘ ಕೋವಿಡ್​ ಅಪಾಯ ಮೂರು ಪಟ್ಟು ಹೆಚ್ಚು ಎನ್ನುತ್ತದೆ ಅಧ್ಯಯನ

ABOUT THE AUTHOR

...view details