ನೋಯ್ಡಾ(ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಮಕ್ಕಳು, ವೃದ್ಧರು ಮತ್ತು ಯುವಕರು ಸೇರಿದಂತೆ ಎಲ್ಲರ ಆರೋಗ್ಯ ಹದಗೆಡುತ್ತಿದೆ. ಸಾಮಾನ್ಯವಾಗಿ ಮೂರರಿಂದ ಐದು ದಿನಗಳಲ್ಲಿ ಗುಣವಾಗುತ್ತಿದ್ದ ನೆಗಡಿ, ಈಗ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗುವವರ ಪ್ರಮಾಣ ಸಹ ಸುಮಾರು 15 ಪ್ರತಿಶತದಷ್ಟು ಹೆಚ್ಚಾಗಿದೆ.
ನೋಯ್ಡಾದ ಸೆಕ್ಟರ್ 93 ರ ನಿವಾಸಿ ವೈಷ್ಣವಿ, ತಮ್ಮ 7 ವರ್ಷದ ಮಗ ಶೀತದಿಂದ ಬಳಲುತ್ತಿದ್ದಾನೆ ಮತ್ತು ಕಳೆದ ಕೆಲವು ತಿಂಗಳುಗಳಿಂದ ಉಸಿರಾಟದ ತೊಂದರೆ ಎದುರಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಅವರು ಹಲವಾರು ವೈದ್ಯರ ಬಳಿ ಸಹ ಹೋಗಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ.
ಚಳಿ ಮತ್ತು ಮಾಲಿನ್ಯದ ಹೆಚ್ಚಳದಿಂದ ಮಕ್ಕಳು ನ್ಯುಮೋನಿಯಾಕ್ಕೆ ಬಲಿಯಾಗುತ್ತಿದ್ದಾರೆ. ಯಾವ ಮಕ್ಕಳು ಲಸಿಕೆ ಹಾಕಿಸಿಕೊಂಡಿರುವುದಿಲ್ಲವೋ ಅವರು ಅನಾರೋಗ್ಯಕ್ಕೆ ಒಳಗಾಗುವ ಅಪಾಯ ಹೆಚ್ಚಿರುತ್ತದೆ.
ತಜ್ಞರು ಹೇಳೋದೇನು?:ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳನ್ನು ಒಪಿಡಿಯಲ್ಲಿ ದಾಖಲಿಸಲಾಗುತ್ತಿದೆ. ಸಕಾಲದಲ್ಲಿ ಅದರ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದರಿಂದ ಅವರನ್ನು ಉಳಿಸಬಹುದು. ಚಳಿಗಾಲದಲ್ಲಿ ಮಕ್ಕಳಿಗೆ ನ್ಯುಮೋನಿಯಾದ ಹೆಚ್ಚಿನ ಅಪಾಯವಿರುವುದರಿಂದ ಅವರಿಗೆ ವಿಶೇಷ ಕಾಳಜಿಯ ಅಗತ್ಯವಿದೆ ಎಂದು ಮಕ್ಕಳ ತಜ್ಞ ಡಾ.ಡಿ.ಕೆ.ಗುಪ್ತಾ ಹೇಳಿದರು.
ಇದನ್ನೂ ಓದಿ:ಸಂಗೀತ ಋತುಬಂಧಕ್ಕೆ ಒಳಗಾಗುವ ಮಹಿಳೆಯರ ಆರೋಗ್ಯ ಸುಧಾರಣೆಗೆ ಸಹಾಯಕ: ಅಧ್ಯಯನ
ಮಕ್ಕಳು ಜ್ವರ, ಕಿವಿ ಸೋಂಕು, ಅತಿಸಾರ ಮತ್ತು ದಡಾರ ಮುಂತಾದ ಹಲವಾರು ಇತರ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇದು ದಡಾರ ವೈರಸ್‌ನಿಂದ ಉಂಟಾಗುವ ಹೆಚ್ಚು ಸಾಂಕ್ರಾಮಿಕ ಕಾಯಿಲೆಯಾಗಿದೆ. ದಡಾರವನ್ನು ತಡೆಗಟ್ಟುವಲ್ಲಿ ವ್ಯಾಕ್ಸಿನೇಷನ್ ಹೆಚ್ಚು ಪರಿಣಾಮಕಾರಿಯಾಗಿದೆ.
ಸೋಂಕು ಹೇಗೆ ಹರಡುತ್ತದೆ: ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಬಾಯಿಯಿಂದ ಹೊರಬಂದು ಹನಿಗಳು ಗಾಳಿಯಲ್ಲಿ ಹರಡುತ್ತವೆ. ಆರೋಗ್ಯವಂತ ವ್ಯಕ್ತಿಯು ಅವುಗಳನ್ನು ಉಸಿರಾಡಿದಾಗ, ಅವರು ಸೋಂಕಿಗೆ ಒಳಗಾಗುತ್ತಾರೆ.
ಲಸಿಕೆಗಳು ಯಾವುವು?: ಶ್ವಾಸಕೋಶದ ಸೋಂಕು ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಲ್ ಸೋಂಕಿನಿಂದ ಉಂಟಾಗುತ್ತದೆ. ಮತ್ತೊಂದೆಡೆ, ಶೀತವು ಒಂದು ರೀತಿಯ ಅಲರ್ಜಿಯಾಗಿದೆ. ಇದು ಸ್ರವಿಸುವ ಮೂಗು ಮತ್ತು ಗಂಟಲಿನಲ್ಲಿ ಲೋಳೆಗೆ ಕಾರಣವಾಗುತ್ತದೆ. ನ್ಯುಮೋಕೊಕಲ್ ಲಸಿಕೆ, ಪಿಸಿವಿ 13, ಹಿಮೋಫಿಲಸ್ ಇನ್ಫ್ಲುಯೆಂಜಾ ಟೈಪ್ ಬಿ ಮುಂತಾದ ಲಸಿಕೆಗಳು ಮಕ್ಕಳನ್ನು ಬ್ಯಾಕ್ಟೀರಿಯಾದ ನ್ಯುಮೋನಿಯಾದಿಂದ ರಕ್ಷಿಸುತ್ತದೆ.