ಕರ್ನಾಟಕ

karnataka

ಪಾಕಿಸ್ತಾನದಲ್ಲಿ ಪೋಲಿಯೋ ವೈರಸ್​​ ಪತ್ತೆ; ದೃಢಪಡಿಸಿದ ಆರೋಗ್ಯ ಇಲಾಖೆ

ಪೋಲಿಯೋ ವೈರಸ್​ ಎಂಬುದು ಮಕ್ಕಳನ್ನು ಅಂಗವೈಕಲ್ಯತೆ ಮತ್ತು ಕೆಲವು ಪ್ರಕರಣದಲ್ಲಿ ಸಾವಿಗೆ ಗುರಿಯಾಗಿಸುವ ಮಾರಣಾಂತಿಕ ಸೋಂಕಾಗಿದೆ.

By ETV Bharat Karnataka Team

Published : Dec 30, 2023, 3:14 PM IST

Published : Dec 30, 2023, 3:14 PM IST

Polioviruses have been detected in the environmental samples
Polioviruses have been detected in the environmental samples

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿನ ನಾಲ್ಕು ಜಿಲ್ಲೆಗಳ ಪರಿಸರ ಮಾದರಿಗಳಲ್ಲಿ ಪೋಲಿಯೋ ವೈರಸ್​​ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆ ನಿಯಂತ್ರಣ ಮತ್ತು ಸಹಕಾರ ಸಚಿವಾಲಯ ತಿಳಿಸಿದೆ.

ಸಿಂಧ್​ ಪ್ರಾಂತ್ಯದ ಕರಾಚಿ ಮತ್ತು ಹೈದ್ರಾಬಾದ್​​, ನೈರುತ್ಯದ ಚಾಮನ್​ ಜಿಲ್ಲೆಯ ವಾಯುವ್ಯ ಪೇಶಾವರ್​​ ಜಿಲ್ಲೆಯಲ್ಲಿ ಪೋಲಿಯೋ ವೈರಸ್​ ಕಾಣಿಸಿಕೊಂಡಿದೆ.

ದೇಶವೂ ಜಗತ್ತಿನಲ್ಲೇ ಅತ್ಯಂತ ವಿಸ್ತಾರವಾದ ಮತ್ತು ಸೂಕ್ಷ್ಮ ಪೋಲಿಯೋ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ. ಪೋಲಿಯೋ ವೈರಸ್​​ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದೆ. ಈ ಸೋಂಕು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗೇ ಅವರನ್ನು ಸುಲಭವಾಗಿ ಗುರಿಯಾಗಿಸುತ್ತದೆ.

ಪೋಲಿಯೋ ವೈರಸ್​ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಪೋಲಿಯೋ ವೈರಸ್​ನ ಹಾವಳಿ ಮತ್ತು ಅಂಗವೈಕಲ್ಯದಿಂದ ಮಕ್ಕಳನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಎಂದರೆ ಪೋಲಿಯೋ ಲಸಿಕೆ ಎಂಬುದನ್ನು ಅರಿಯಬೇಕಿದೆ. ಈ ಹಿನ್ನೆಲೆ ಪೋಷಕರು ದೇಶದಲ್ಲಿ ಪ್ರತಿ ವರ್ಷ ನಡೆಯುವ ಪೋಲಿಯೋ ಅಭಿಯಾನ ಸಂದರ್ಭದಲ್ಲಿ ಮಕ್ಕಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಲಸಿಕೆಗಳನ್ನು ಕಾಲ ಕಾಲಕ್ಕೆ ಹಾಕಿಸಬೇಕು ಎಂದು ಆರೋಗ್ಯ ಇಲಾಖೆ ಸಚಿವರು ತಿಳಿಸಿದ್ದಾರೆ.

ಪೋಲಿಯೋ ಮುಕ್ತ ಜಗತ್ತಿಗೆ ಇಡೀ ವಿಶ್ವವೇ ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ ಪೋಲಿಯೋ ವೈರಸ್​ ನಿರ್ಮೂಲನೆಗೆ ವಿಶ್ವಸಂಸ್ಥೆ ನಿರಂತರ ಕಾರ್ಯ ನಡೆಸಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪಾಕಿಸ್ತಾನ ಮತ್ತು ನೆರೆಯ ಅಫ್ಘಾನಿಸ್ತಾನ ದೇಶಗಳು ಇನ್ನೂ ಪೋಲಿಯೋ ಮುಕ್ತ ದೇಶಗಳಾಗಿ ಗುರುತಿಸಿಕೊಂಡಿಲ್ಲ. ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ ಒಟ್ಟು ಆರು ಪೋಲಿಯೋ ಪ್ರಕರಣಗಳು ವರದಿಯಾಗಿವೆ.

ಪೋಲಿಯೋ ವೈರಸ್​ ಎಂಬುದು ಮಕ್ಕಳನ್ನು ಅಂಗವೈಕಲ್ಯತೆ ಮತ್ತು ಕೆಲವು ಪ್ರಕರಣದಲ್ಲಿ ಸಾವಿಗೆ ಗುರಿಯಾಗಿಸುವ ಮಾರಣಾಂತಿಕ ಸೋಂಕಾಗಿದೆ. ಪೋಲಿಯೋ ವೈರಸ್​​ ದೇಶದ ಆರ್ಥಿಕತೆ ಮತ್ತು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಹೊರೆಯನ್ನು ಹೆಚ್ಚಿಸುತ್ತದೆ. ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರವು ಹೆಚ್ಚು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ. ಪೋಲಿಯೋ ವೈರಸ್​​ ಅನ್ನು ಜಗತ್ತಿನ ಬೇರೆ ಬೇರೆ ದೇಶಗಳು ಈಗಾಗಲೇ ನಿರ್ಮೂಲನೆ ಮಾಡಿದ್ದು, ಜಾಗತಿಕವಾಗಿ ಶೇ 99.99ರಷ್ಟು ನಿಯಂತ್ರಿಸಲಾಗಿದೆ. ಆದರೆ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಮಾತ್ರ ಆಗಿಂದಾಗ್ಗೆ ವೈಲ್ಡ್​ ಪೋಲಿಯೋ ವೈರಸ್​ ಪತ್ತೆಯಾಗುತ್ತಲೇ ಇದೆ. (ಐಎಎನ್ಎಸ್​)

ಇದನ್ನೂ ಓದಿ: ಗಾಜಾ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ : ವಿಶ್ವಸಂಸ್ಥೆ ಕಳವಳ

ABOUT THE AUTHOR

...view details