ನ್ಯೂಯಾರ್ಕ್:ಸಂಶೋಧಕರು ಹೊಸ ಆನ್ಲೈನ್ ಕೃತಕ ಬುದ್ಧಿಮತೆ- ಎಐ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದರಿಂದಾಗಿ ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅವರ ಲಕ್ಷಣವನ್ನು ಮತ್ತು ತೀವ್ರತೆಯನ್ನು ನಿಮಿಷದಲ್ಲಿ ದೂರದಿಂದಲೇ ತಿಳಿಯಲು ಸಹಾಯ ಮಾಡಲಿದೆ. ಈ ಅಧ್ಯಯವನ್ನು ಎನ್ಪಿಜೆ ಡಿಜಿಟಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ವೆಬ್ ಕ್ಯಾಮ್ ಮುಂದೆ ಬಳಕೆದಾರರ ಬೆರಳಿನ 10 ಟ್ಯಾಪ್ಗಳನ್ನು ಅವಲಂಬಿಸಿ ರೋಗ ಕಂಡು ಹಿಡಿಯುವ ಕಾರ್ಯಕ್ಷಮತೆಯನ್ನು ಇದು ಹೊಂದಿದೆ.
ಈ ಸಾಧನ ಅಧ್ಯಯನ ನಡೆಸಲು ಪಾರ್ಕಿನ್ಸನ್ ಕಾಯಿಲೆ ಹೊಂದಿರುವ 250 ಮಂದಿ ಬೆರಳನ್ನು ಟ್ಯಾಪ್ ಮಾಡಿ ಪರೀಕ್ಷೆ ಮಾಡಿದರು. ಎಐ ಮೂಲಕ ನರ ವಿಜ್ಞಾನಿಗಳು ಮೂವರು ಪ್ರಾಥಮಿಕ ವೈದ್ಯರನ್ನು ಹೋಲಿಕೆ ಮಾಡಿದರು. ಈ ವೇಳೆ ನರವಿಜ್ಞಾನಿಗಳು ಎಐ ಮಾದರಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಯುಪಿಡಿಆರ್ಎಸ್ ಪ್ರಮಾಣಿಕರಣದೊಂದಿಗೆ ಎಐ ಮಾದರಿಯು ಪ್ರಾಥಮಿಕ ಆರೈಕೆ ವೈದ್ಯರಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ರೋಚೆಸ್ಟರ್ ವಿಶ್ವವಿದ್ಯಾಲಯ ತಿಳಿಸಿದೆ.
ಯುಪಿಡಿಆರ್ಎಸ್ ಎಂಬುದು ಪಾರ್ಕಿನ್ಸ್ ರೋಗಿಗಳ ಕಾಯಿಲೆಯ ತೀವ್ರತೆ ಮತ್ತು ಪ್ರಗತಿಯನ್ನು ಅಳೆಯುವ ಸಾಧನವಾಗಿದೆ. ಎಡಿಎಸ್ ಯುಪಿಡಿಆರ್ಎಸ್ ಮೂಲಕ ಸರಳ ಮೋಟರ್ ಪರೀಕ್ಷೆ ಮೂಲಕ ರೋಗಿಗಳ ಚಲನೆ ಅಸ್ವಸ್ಥೆ ಮತ್ತು ತೀವ್ರತೆ ಮೌಲ್ಯಮಾಪನ ಮಾಡಲಾಗಿದೆ. ಎಐ ಮಾದರಿ ಎಂಡಿಎಸ್ ಯಪಿಡಿಆರ್ಎಸ್ ಮಾರ್ಗದರ್ಶನವನ್ನು ಶೀಘ್ರದಲ್ಲೇ ಮೌಲ್ಯಮಾಪನ ಮಾಡಿತು. ವೇಗ, ಆವರ್ತನ ಸೇರಿದಂತೆ ಇತರ ಸ್ವಯಂಚಾಲಿತ ಕಂಪ್ಯೂಟೇಶನಲ್ ಅನ್ನು ಅದು ಉತ್ಪಾದಿಸಿದೆ.