ವಿಯೆನ್ನಾ: ಒಂದು ಸಿಗರೇಟಿನಲ್ಲಿರುವ ನಿಕೋಟಿನ್ ಪ್ರಮಾಣವು ಮಹಿಳೆಯೊಬ್ಬರಲ್ಲಿ ಅವರ ಮೆದುಳು ಈಸ್ಟ್ರೊಜೆನ್ ಉತ್ಪಾದಿಸುವುದನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಇದು ಧೂಮಪಾನಿಗಳ ವರ್ತನೆಯ ವ್ಯತ್ಯಾಸಗಳನ್ನು ಅರಿಯಲು ಈ ವಿಷಯ ಸಹಾಯಕವಾಗಬಹುದು. ಧೂಮಪಾನ ಬಿಡುವುದು ಪುರುಷರಿಗಿಂತ ಮಹಿಳೆಯರಿಗೆ ಏಕೆ ಹೆಚ್ಚು ಕಷ್ಟಕರ ಎಂಬುದನ್ನು ಕೂಡ ಈ ಅಂಶ ತಿಳಿಸುತ್ತದೆ.
ಇದೇ ಮೊದಲ ಬಾರಿಗೆ ನಿಕೋಟಿನ್ ಮಹಿಳೆಯರ ಮೆದುಳಿನಲ್ಲಿ ಈಸ್ಟ್ರೊಜೆನ್ ಉತ್ಪಾದನಾ ಕಾರ್ಯವಿಧಾನವನ್ನು ಸ್ಥಗಿತಗೊಳಿಸಲು ಕೆಲಸ ಮಾಡುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಕೇವಲ ಒಂದು ಸಿಗರೇಟಿಗೆ ಸಮಾನವಾದ ನಿಕೋಟಿನ್‌ನ ಒಂದು ಡೋಸ್‌ನಿಂದಲೂ ಈ ಪರಿಣಾಮ ಉಂಟಾಗುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಮಹಿಳೆಯರ ಮೆದುಳಿನ ಮೇಲೆ ಧೂಮಪಾನದ ಪರಿಣಾಮಗಳು ಎಷ್ಟು ಪ್ರಬಲವಾಗಿರುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಇದು ಹೊಸದಾಗಿ ಪತ್ತೆಯಾದ ವಿಷಯವಾಗಿದೆ ಮತ್ತು ಈ ಕೆಲಸ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಪ್ರಮುಖ ಸಂಶೋಧಕ, ಅಸೋಸಿಯೇಟ್ ಪ್ರೊಫೆಸರ್ ಎರಿಕಾ ಕೊಮಾಸ್ಕೊ (ಉಪ್ಸಲಾ ವಿಶ್ವವಿದ್ಯಾಲಯ, ಸ್ವೀಡನ್) ಹೇಳಿದರು.
ಲಿಂಬಿಕ್ ವ್ಯವಸ್ಥೆಯ ಮೆದುಳಿನ ಭಾಗವಾದ ಥಾಲಮಸ್ ಈ ಪರಿಣಾಮವನ್ನು ಪ್ರದರ್ಶಿಸಿದೆ. ಈ ವ್ಯವಸ್ಥೆಯು ನಡವಳಿಕೆ ಮತ್ತು ಭಾವನೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗವಾಗಿದೆ. ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಸಂಶೋಧಕರ ಸಹಾಯದಿಂದ ಹತ್ತು ಆರೋಗ್ಯವಂತ ಮಹಿಳಾ ಸ್ವಯಂಸೇವಕರು ಅಧ್ಯಯನದಲ್ಲಿ ಭಾಗವಹಿಸಿದ್ದರು.