ಕರ್ನಾಟಕ

karnataka

ETV Bharat / sukhibhava

ನಿಮಿಷದಲ್ಲಿ ಕೋವಿಡ್​ ಪರೀಕ್ಷಾ ವಿಧಾನವನ್ನ ಕಂಡು ಹಿಡಿದ ಜಪಾನ್​ ಸಂಶೋಧಕರು

ಪ್ರಾಣಿಗಳು ಬಳಕೆ ಮಾಡುವ ಹೊಳೆಯುವ ತಂತ್ರವನ್ನು ಈ ಕೋವಿಡ್​ ಪತ್ತೆ ಪರೀಕ್ಷೆಯಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

By ETV Bharat Karnataka Team

Published : Jan 18, 2024, 2:55 PM IST

japanese researchers have developed a new Covid test
japanese researchers have developed a new Covid test

ಟೋಕಿಯೋ: ಕೋವಿಡ್​ 19 ಇರುವಿಕೆ ಕುರಿತು ನಿಮಿಷದಲ್ಲಿ ಪತ್ತೆ ಮಾಡುವ ಹೊಸ ಪರೀಕ್ಷಾ ವಿಧಾನವನ್ನು ಜಪಾನ್​ನ ಸಂಶೋಧಕರು ಪತ್ತೆ ಮಾಡಿದ್ದಾರೆ. ಹೊಳೆಯುವ ರಾಸಾಯನಿಕದ ಮೂಲಕ ಈ ಪರೀಕ್ಷೆ ಮಾಡಬಹುದಾಗಿದ್ದು, ಕ್ಷಣ ಮಾತ್ರದಲ್ಲಿ ಫಲಿತಾಂಶ ಪಡೆಯಬಹುದಾಗಿದೆ.

ಜಪಾನ್​ ಸೈನ್ಸ್​ ಅಂಡ್​ ಟೆಕ್ನಾಲಾಜಿ ಏಜೆನ್ಸಿ (ಜೆಎಸ್​ಟಿ) ಸಾರ್ಸ್​-ಕೋವ್​​ -2 ಪ್ರೋಟಿನ್​ ಪತ್ತೆಗೆ ಕ್ರಸ್ಟಾಸಿಯನ್​​ ಅಣುಗಳನ್ನು ಬಳಕೆ ಮಾಡಿದ್ದಾರೆ. ಫೈರ್​ಫೈಲ್ಸ್​​ನಿಂದ ಲ್ಯಾಂಟರ್ನ್​​ ಮೀನಿನವರೆಗೆ ಅನೇಕ ಪ್ರಾಣಿಗಳು ಬೆಳಕನ್ನು ಉತ್ಪಾದಿಸಲು ರಾಸಾಯನಿಕ ಬಿಡುಗಡೆ ಮಾಡುತ್ತದೆ. ಇದೇ ರೀತಿಯ ಪ್ರಕ್ರಿಯೆಗೆ ಲೂಸಿಫೆರೇಸ್​ ಮತ್ತು ಲೂಸಿಫೆರೇಸ್ ಕಿಣ್ವಗಳು ಬೇಕಾಗುತ್ತದೆ.

ಐಪಿಟಿ ಸಂಯುಕ್ತಗಳು ಎಂದು ಕರೆಯುವ ಕಡಿಮೆ ಲೂಸಿಫೆರಿನ್‌ಗಳ ವರ್ಗವು ಇತರ ಪ್ರೋಟೀನ್‌ಗಳಿಗೆ ಎದುರಾದಾಗ ಹೊಳೆಯುತ್ತದೆ ಎಂದು ಎಸಿಎಸ್​ ಸೆಂಟ್ರಲ್​ ಸೈನ್ಸ್​​ ಜರ್ನಲ್​ ವರದಿ ಮಾಡಿದೆ. ಹಿಂದಿನ ಸಂಶೋಧನೆಯು ಐಪಿಟಿ ಲೂಸಿಫೆರಿನ್‌ಗಳು ಹೊಸ ರೀತಿಯ ವೈದ್ಯಕೀಯ ಪರೀಕ್ಷೆಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ. ಇದೇ ಮಾದರಿ ಪ್ರೋಟೀನ್ ಇರುವಿಕೆಯ ಬಗ್ಗೆ ಬೆಳಕು ಚಲ್ಲುತ್ತದೆ ಎಂದು ತಿಳಿದು ಬಂದಿದೆ.

ಐಪಿಟಿ ಲೂಸಿಫೆರೇನ್​ ಸಾರ್ಸ್​ ಕೋವ್​​ 2 ಪ್ರೋಟಿನ್​ ಜೊತೆಗೆ ಪ್ರತಿಕ್ರಿಯಿಸುತ್ತದೆ. ಇದು ವೈರಸ್ ಕಣಗಳು, ಕೋಶಗಳನ್ನು ಆಕ್ರಮಿಸಲು ಮತ್ತು ಕೋವಿಡ್ ಉಂಟುಮಾಡಲು ಅನುವು ಮಾಡಿಕೊಡುತ್ತದೆ. ಮತ್ತು ಹೊಳೆಯುವ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಿದೆ ಎಂದು ಜೆಎಎಸ್​ಟಿಯ ಆರ್​ಯೊ ನಿಶಿಹಾರ ಮತ್ತು ರ್ಯೊಯಿ ಕುರಿಟಾ ತಿಳಿಸಿದ್ದಾರೆ.

ತಂಡವೂ ಮೊದಲ ಬಾರಿಗೆ 36 ವಿಧದ ಐಪಿಟಿ ಲೂಸಿಫೆರೇನ್​ ಸಾಮರ್ಥ್ಯವನ್ನು ಸ್ಪೈಕ್​ ಪ್ರೋಟಿನ್​ನ ಏಕ ಘಟಕದ ಪ್ರತಿಕ್ರಿಯೆಯಲ್ಲಿ ತನಿಖೆ ನಡೆಸಿದ್ದಾರೆ. ಬಳಿಕ ಸಂಶೋಧಕರು ಲೂಸಿಫರೇನ್​ ಚಟುವಟಿಕೆಯನ್ನು ಸಹಜ ಸ್ಥಿತಿಯಲ್ಲಿನ ಸ್ಪೈಕ್​​ ಪ್ರೋಟಿನ್​ನೊಂದಿಗೆ ಪರೀಕ್ಷೆ ಮಾಡಿದ್ದಾರೆ. ಈ ವೇಳೆ 10 ನಿಮಿಷದಲ್ಲಿ ಅಗತ್ಯವಿರುವ ಬೆಳಕು ಪತ್ತೆಯಾಗಿದೆ.

ಇದಕ್ಕೆ ವಾಣಿಜ್ಯವಾಗಿ ಲಭ್ಯವಿರುವ ಲೂಮಿಸೆನ್ಸ್​​ ರಿಡೀಂಗ್​ ಸಾಧಾನವೂ ಅವಶ್ಯವಿದೆ. ಈ ಬೆಳಕು ಬರೀಗಣ್ಣಿನಲ್ಲಿ ಕಾಣುವುದಿಲ್ಲ. ಹೆಚ್ಚುವರಿ ಪ್ರಯೋಗವೂ ಐಪಿಟಿ ಲೂಸಿಫರೇಸ್​​​ ಆಯ್ಕೆಯಾಗಿದೆ. ಕಾರಣ ಇದು ಲಾಲಾರಸದನಲ್ಲಿ ಆರು ಪ್ರೋಟಿನ್​​ಗೆ ತೆರೆದುಕೊಂಡಾಗ ಹೊಳೆಯುವುದಿಲ್ಲ ಎಂದು ಸೂಚಿಸಿದೆ.

ಅಂತಿಮವಾಗಿ ತಂಡವೂ ಲಸಿಕೆ ಅಭಿವೃದ್ಧಿಯಲ್ಲಿ ಪ್ರಸ್ತುತ ಬಳಸಲಾಗುವ ತಂತ್ರದಂತೆಯೇ ಅದೇ ನಿಖರತೆಯೊಂದಿಗೆ ಲಾಲಾರಸದಲ್ಲಿನ ಸ್ಪೈಕ್ ಪ್ರೋಟೀನ್ ಪ್ರಮಾಣವನ್ನು ಪತ್ತೆ ಮಾಡಿ​​ದೆ. (ಐಎಎನ್​ಎಸ್​)

ಇದನ್ನೂ ಓದಿ: ಮಾರಣಾಂತಿಕ ನಿಫಾ ವೈರಸ್: ಮಾನವರ ಮೇಲೆ ಲಸಿಕೆ ಪ್ರಯೋಗ ಆರಂಭ

ABOUT THE AUTHOR

...view details