ನವದೆಹಲಿ:ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಕಂಡು ಬಂದಿತ್ತು. ಡಿಸೆಂಬರ್ನಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದವು ಮತ್ತು ಹವಾಮಾನ ಬದಲಾವಣೆ, ಹೊಸ ಸೋಂಕಿನ ತಳಿಯುವ ಸೋಂಕಿನ ಏರಿಕೆಗೆ ಕಾರಣವಾಗಿತ್ತು. ಇದೀಗ ಸೋಂಕಿನ ಅಲೆ ದೇಶದಲ್ಲಿ ತಗ್ಗಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೇವಲ 441 ಪ್ರಕರಣ ದಾಖಲಾಗಿದ್ದು, ಯಾವುದೇ ಸಾವಿನ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ತಿಳಿಸಿದೆ.
ಸದ್ಯ ದೇಶದಲ್ಲಿ ಒಟ್ಟಾರೆ ಸಕ್ರಿಯ ಸೋಂಕಿನ ಪ್ರಕರಣಗಳು 3,238 ಪ್ರಕರಣಗಳು ದಾಖಲಾಗಿದೆ. ಈ ವಾರದ ಆರಂಭದಲ್ಲಿ ಅಂದರೆ ಕಳೆದ ಸೋಮವಾರ ಈ ಸೋಂಕಿನ ಸಂಖ್ಯೆ 3,919 ಇತ್ತು. ಇನ್ನು ದೇಶದಲ್ಲಿ ಸಾವಿನ ಸಂಖ್ಯೆ 5,33,412 ದಾಖಲಾಗಿದೆ. ಕಳೆದ ನಾಲ್ಕು ವರ್ಷದಿಂದ ಅಂದರೆ 2020ರ ಜನವರಿಯಿಂದ ಕೋವಿಡ್ ಉಲ್ಬಣವಾದಾಗಿನಿಂದ ಇಲ್ಲಿಯವರೆಗೆ 4,50,20,942 ಆಗಿದ್ದು, ಸಾವಿನ ಸಂಖ್ಯೆ 5,33,412 ಆಗಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರ 98.81 ಆಗಿದ್ದು, ಸಾವಿನ ದರ 1.18 ಆಗಿದೆ
ಜನವರಿ 11ರವರೆಗ ಕೋವಿಡ್ ಉಪ ತಳಿಯ ಜೆಎನ್ 1 ಸೋಂಕು ಭಾರತದ 12 ರಾಜ್ಯದಲ್ಲಿ ಕಂಡು ಬಂದಿದ್ದು, ಒಟ್ಟು 1,104 ಪ್ರಕರಣಗಳು ದಾಖಲಾಗಿದೆ, ಅತಿ ಹೆಚ್ಚು ಜೆಎನ್.1 ಸೋಂಕು ಕರ್ನಾಟಕದಲ್ಲಿ (214) ಆಗಿದೆ. ಮಹಾರಾಷ್ಟ್ರ (170), ಕೇರಳ (154), ಆಂಧ್ರಪ್ರದೇಶ (189), ಗುಜರಾತ್ (76) ಮತ್ತು ಗೋವಾ (66) ಕೋವಿಡ್ ಪ್ರಕರಣಗಳು ವರದಿಯಾಗಿವೆ.