ಕರ್ನಾಟಕ

karnataka

By ETV Bharat Karnataka Team

Published : Nov 25, 2023, 12:24 PM IST

ETV Bharat / sukhibhava

ಮೇಘಾಲಯದಲ್ಲಿ ರಾಷ್ಟ್ರೀಯ ಅನುಪಾತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾದ ಎಚ್​ಐವಿ ಪ್ರಕರಣ

Meghalaya HIV Cases: ಎಚ್​ಐವಿ ಸೋಂಕಿನ ವಿರುದ್ಧ ಹೋರಾಡಲು ಇದೀಗ ರಾಜ್ಯದ 60 ಶಾಸಕರನ್ನೊಳಗೊಂಡ ವೇದಿಕೆ ರೂಪಿಸಲಾಗಿದೆ.

HIV in Meghalaya is higher than the national average
HIV in Meghalaya is higher than the national average

ಶಿಲ್ಲಾಂಗ್​​: ಎಚ್​ಐವಿ ನಿರ್ಮೂಲನೆಗೆ ಸರ್ಕಾರದ ಇನ್ನಿಲ್ಲದ ಪ್ರಯತ್ನ ನಡುವೆ ಮೇಘಾಲಯದಲ್ಲಿ ದಾಖಲಾಗಿರುವ ವರದಿ ಗಾಬರಿ ಮೂಡಿಸಿದೆ. ರಾಷ್ಟ್ರೀಯ ಅನುಪಾತಕ್ಕೆ ಹೋಲಿಕೆ ಮಾಡಿದಾಗ ಮೇಘಾಲಯದಲ್ಲಿ ಅಧಿಕ ಪ್ರಮಾಣದಲ್ಲಿ ಎಚ್​ಐವಿ ಪ್ರಕರಣಗಳು ದಾಖಲಾಗಿದೆ. ಈ ಹಿನ್ನಲೆ ರಾಜ್ಯದ ಎಲ್ಲಾ 60 ಶಾಸಕರು ರೋಗದ ನಿರ್ಮೂಲನೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಹಿನ್ನಲೆ ನಡೆದ ಮೊದಲ ಸರ್ಕಾರಿ ಸಭೆಯಲ್ಲಿ ಪ್ರಮುಖವಾಗಿ ಆರು ಅಜೆಂಡಾಗಳನ್ನು ಚರ್ಚಿಸಲಾಯಿತು. ವಿಧಾನಸಭಾ ಸ್ಪೀಕರ್​​ ಥಾಮಸ್​ ಎ ಸಂಗ್ಮಾ ಅಧ್ಯಕ್ಷತೆಯನ್ನು ಸಭೆ ನಡೆಸಲಾಗಿದೆ.

ಈ ಅಂಜೆಡಾದಲ್ಲಿ ಆರೋಗ್ಯಸೇವೆ ಲಭ್ಯತೆ, ಸಾಮಾಜಿಕ ಬೆಂಬಲದ ಕಾರ್ಯಕ್ರಮ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಶಿಕ್ಷಣ ಮತ್ತು ಜಾಗೃತಿ ಅಭಿಯಾನ, ಪೌಷ್ಟಿಕಾಂಶದ ಬೆಂಬಲ ಮತ್ತು ಕಾನೂನು ಸೇವೆ ಬೆಂಬಲವನ್ನು ಹೊಂದಿದೆ.

ಸಭೆಯ ಬಳಿಕ ಮಾತನಾಡಿರುವ ಸ್ಪೀಕರ್​​, ಎಚ್​ಐವಿ/ ಏಡ್ಸ್​ ರೋಗದ ವಿರುದ್ಧ ಹೋರಾಡಲು ಶಾಸಕರ ವೇದಿಕೆ ರೂಪಿಸಿದ್ದು, ಜನರಲ್ಲಿ ಅರಿವು ಮೂಡಿಸುವ ಯತ್ನ ನಡೆಸಲಾಗುವುದು. ಸಭೆಯಲ್ಲಿ ಕೇವಲ ಪಿಎಲ್​ಎಚ್​ಐವಿ ವಿಚಾರ ಜೊತೆಗೆ ಅವರ ಸಾಮಾಜಿಕ, ಆರ್ಥಿಕ ಮತ್ತಿತ್ತರ ವಿಚಾರಗಳ ಕುರಿತು ಚರ್ಚಿಸಲಾಗಿದೆ. ಶಾಸಕರು ಎಚ್​ಐವಿ ಬಾದಿತ ರೋಗಿಗಳಿಗೆ ಸಲಹೆ ನೀಡಿದ್ದು, ಅವರನ್ನು ಮುಖ್ಯವಾಹಿನಿಗೆ ಕರೆ ತರುವ ಯತ್ನವನ್ನು ನಡೆಸಲಿದ್ದಾರೆ.

ಪಿಎಲ್​ಎಚ್​ಐವಿ ರೋಗಿಗಳ ತಮ್ಮ ಯೋಜನೆಯ ಕೊಡುಗೆಯನ್ನು ನೀಡಲು ಕೂಡ ಶಾಸಕರು ಒಪ್ಪಿದ್ದಾರೆ. ಮೇಘಾಲಯ ವಿಧಾಸಭೆ 60 ಸದಸ್ಯರ ಈ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದು, ರೋಗದ ವಿರುದ್ಧ ಹೋರಾಡುವಲ್ಲಿ ಬೆಂಬಕ ನೀಡಲಿದ್ದಾರೆ ಎಂದರು.

ರಾಷ್ಟ್ರೀಯ ಅನುಪಾತಕ್ಕಿಂತ ಮೇಘಾಲಯದಲ್ಲಿ ಎಚ್​ಐವಿ ಪ್ರಕರಣ ಹೆಚ್ಚಿರುವ ಕುರಿತು ಮಾತನಾಡಿರರುವ ಅವರು, ಸರ್ಕಾರವೂ ರೋಗದ ಹರಡುವಿಕೆ ತಡೆಗೆ ಕೆಲಸ ಮಾಡುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರ ಪ್ರೋತ್ಸಾಹಿತ ಯೋಜನೆಗಳ ಕುರಿತು ಮುಖ್ಯ ಮಂತ್ರಿಗಳು ಸಲಹೆ ನೀಡಿದ್ದಾರೆ. ಶಾಸಕರ ವೇದಿಕೆ ಏಡ್ಸ್​ ನಿಯಂತ್ರಣ ಸಮಾಜ ಮತ್ತು ರಾಜ್ಯ ಸರ್ಕಾರ ಮಾಡುತ್ತಿರುವ ನಿಯಮಿತ ಕೆಲಸದ ಹೊರತಾಗಿ ಕೊಂಚ ವಿಭಿನ್ನವಾಗಿ ಕೆಲಸ ಮಾಡಲಿದೆ. ಶಾಕರು ಕೇವಲ ಆರ್ಥಿಕವಾಗಿ ಮಾತ್ರವಲ್ಲದೇ, ಸಾಮಾಜಿಕವಾಗಿ ಕೆಲಸ ನಿರ್ವಹಿಸಲಿದ್ದಾರೆ.

ಎಚ್​ಐವಿ/ ಏಡ್ಸ್​​ ಸೋಂಕನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಫಿಲಿಫೈನ್ಸ್​ನ ಅನೇಕ ಸರ್ಕಾರೇತ್ ಸಂಸ್ಥೆಗಳ ಕಾರ್ಯವು ಸ್ಪೂರ್ತಿಭರಿತವಾಗಿದೆ ಎಂದು ಇದೇ ವೇಳೆ ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ: ಟಿಬಿ ವಿರುದ್ಧ ಹೋರಾಡಬಲ್ಲ ಪ್ರೋಟಿನ್​ ಕಂಡು ಹಿಡಿದ ಐಎಲ್​ಎಸ್​ ಸಂಶೋಧಕರು

ABOUT THE AUTHOR

...view details