ಕೋವಿಡ್ ಸೋಂಕು ಮನುಷ್ಯನಲ್ಲಿರುವ ದೇಹಾರೋಗ್ಯ ಕಾಪಾಡುವ ಉತ್ತಮ ಬ್ಯಾಕ್ಟೀರಿಯಾ ಮೇಲೂ ದಾಳಿ ಮಾಡುತ್ತದೆ ಎಂಬ ವಿಷಯ ಸಂಶೋಧನೆಯೊಂದರಲ್ಲಿ ಬಹಿರಂಗವಾಗಿದೆ.
ಕೋವಿಡ್ ಕಾರಣ, ಸೋಂಕಿತರ ಕರುಳಿನಲ್ಲಿರುವ ಬ್ಯಾಕ್ಟೀರಿಯಾದಲ್ಲಿ ಅಸಮತೋಲನ ಉಂಟಾಗುತ್ತದೆ. ಇದು ಉತ್ತಮ ಬ್ಯಾಕ್ಟೀರಿಯಾವನ್ನು ಸಹ ನಾಶ ಮಾಡುತ್ತದೆ. ಪರಿಣಾಮ ಇತರ ಸೋಂಕು ಸಮಸ್ಯೆಗಳು ಸಹ ಉದ್ಭವಿಸುತ್ತವೆ ಎಂದು ಇತ್ತೀಚಿನ ಸಂಶೋಧನೆ ವರದಿ ತಿಳಿಸಿದೆ.
ನ್ಯೂಯಾರ್ಕ್ ವಿಶ್ವವಿದ್ಯಾಲಯದ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸನ್ನ ವಿಜ್ಞಾನಿಗಳು ಈ ಸಂಶೋಧನೆ ಕೈಗೊಂಡಿದ್ದರು. ಇದರ ಭಾಗವಾಗಿ 2020ರಲ್ಲಿ, ಅವರು ಕೋವಿಡ್ ಸೋಂಕಿಗೆ ಒಳಗಾದ ಮತ್ತು ಆಸ್ಪತ್ರೆಗಳಿಗೆ ದಾಖಲಾದ ಅನೇಕ ಜನರಿಗೆ ಪರೀಕ್ಷೆಗಳನ್ನು ನಡೆಸಿದ್ದರು.
ಕೊರೊನಾ ರೋಗಿಗಳಲ್ಲಿ ಕರುಳಿನ ಬ್ಯಾಕ್ಟೀರಿಯಾ ಏರುಪೇರು ಕಾಣುತ್ತದೆ. ಉತ್ತಮ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಇದರಿಂಗ ಇತರೆ ಸೋಂಕು ಉತ್ಪಾದನೆಯಾಗಿ ರಕ್ತಕ್ಕೆ ತಲುಪಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಹೊಸ ತಳಿ ಹೆದರಿಕೆ ಬೇಡ ಅಂತಾರೆ ಐಐಟಿ ರೂರ್ಕಿ ವಿಜ್ಞಾನಿಗಳು: ಯಾಕೆ ಗೊತ್ತಾ?