ಕರ್ನಾಟಕ

karnataka

By ETV Bharat Karnataka Team

Published : Sep 27, 2023, 5:08 PM IST

ETV Bharat / sukhibhava

Women workforce: ನಾರಿ ಶಕ್ತಿಗೆ ಮನ್ನಣೆ.. ದೇಶದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ 26ರಷ್ಟು ಏರಿಕೆ

ದೇಶದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಶಿಕ್ಷಣ, ತರಬೇತಿ ಮತ್ತು ಲಾಭ ರಹಿತ ಮತ್ತು ಚಾರಿಟಿ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 45 ರಿಂದ 47ರಷ್ಟಾಗಿದೆ.

female employees in India has increased by 26 percent
female employees in India has increased by 26 percent

ನವದೆಹಲಿ: ದೇಶಾದ್ಯಂತ ಮಹಿಳಾ ಉದ್ಯೋಗಿಗಳ ಪ್ರಾತಿನಿದ್ಯದ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದ್ದು, 2023ರಲ್ಲಿ ಶೇ 26ರಷ್ಟು ಹೆಚ್ಚಾಗಿದೆ. 2021ಕ್ಕೆ ಹೋಲಿಕೆ ಮಾಡಿದರೆ, ಈ ಪ್ರಾತಿನಿಧ್ಯ ಶೇ 21ರಷ್ಟು ಅಧಿಕವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಗ್ರೇಟ್​ ಪ್ಲೇಸ್​ ಟು ವರ್ಕ್​ ಇಂಡಿಯಾ ವರದಿ ಅನುಸಾರ, ಉದ್ಯಮದಲ್ಲಿ ಅಧಿಕ ಮತ್ತು ಕಡಿಮೆ ಮಹಿಳಾ ಪ್ರಾತಿನಿಧ್ಯದಲ್ಲಿ ಶೇ 38ರಷ್ಟು ವಿಭಿನ್ನತೆಯನ್ನು ಗುರುತಿಸಬಹುದಾಗಿದೆ. ಈ ವಿಭಿನ್ನತೆ ಸಕಾರಾತ್ಮಕ ದೃಷ್ಟಿಯಲ್ಲಿ ಶೇ 2ರಷ್ಟಿದೆ. ಈ ಸಕಾರಾತ್ಮಕ ಉದ್ಯಮ ಸ್ಥಳದ ಸಂಸ್ಕೃತಿ ಲಾಭವನ್ನು ಕೈಗಾರಿಕೆಯಂತಹ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಸ್ಥಳದಲ್ಲೂ ತೋರಿಸಿದೆ.

ಭಾರತದಲ್ಲಿ ಶೇ 8ರಷ್ಟು ಮಹಿಳೆಯರು ಸಿಇಒ ಆಗಿದ್ದು, ಶೇ 32ರಷ್ಟು ಮಹಿಳೆಯರು ಹಿರಿಯ ನಾಯಕತ್ವದ ಸ್ಥಾನವನ್ನು ಹೊಂದಿದ್ದಾರೆ. ನಮ್ಮ ಅಧ್ಯಯನ ತಿಳಿಸುವಂತೆ 2023ರಲ್ಲಿ ಮಹಿಳೆಯರಿಗೆ ಉತ್ತಮ ಕೆಲಸದ ಸ್ಥಳದ ಅವಕಾಶವನ್ನು ನೀಡಿದ್ದು, ಮಹಿಳಾ ಉದ್ಯೋಗಿಗಳು ಶೇ 5ರಷ್ಟು ಅಧಿಕ ತೃಪ್ತಿ ಮಟ್ಟವನ್ನು ಹೊಂದಿದ್ದಾರೆ. ಫಲಿತಾಂಶವಾಗಿ ಶೇ 89ರಷ್ಟು ಮಹಿಳೆಯರು ತಮ್ಮ ಪಾತ್ರ ನಿರ್ವಹಣೆ ನಿರೀಕ್ಷೆಯಲ್ಲಿ ಹೆಚ್ಚಿನ ಬದ್ಧತೆಯನ್ನು ತೋರಿಸುವುದಾಗಿ ಗ್ರೇಟ್​ ಪ್ಲೇಟ್​ ಟೂ ವರ್ಕ್​ ಇಂಡಿಯಾ ಸಿಇಒ ಯಶಸ್ವಿನಿ ರಾಮಸ್ವಾಮಿ ತಿಳಿಸಿದ್ದಾರೆ.

2021 ರಲ್ಲಿ ಶೇಕಡಾ 21 ರಿಂದ 2023 ರಲ್ಲಿ ಪ್ರಭಾವ ಶೇಕಡಾ 26 ಕ್ಕೆ ಏರಿದೆ. ಅತ್ಯುತ್ತಮ ಕೆಲಸದ ಸ್ಥಳಗಳು ತಮ್ಮ ಎದುರಾಳಿಗಳಿಗೆ ಹೋಲಿಸಿದರೆ ಶೇಕಡಾ 17 ರಷ್ಟು ಹೆಚ್ಚಿನ ಮಹಿಳೆಯರನ್ನು ನೇಮಿಸಿಕೊಳ್ಳುವ ಮೂಲಕ ದಾರಿ ಮಾಡಿಕೊಡುತ್ತವೆ.

ಶಿಕ್ಷಣ, ತರಬೇತಿ ಮತ್ತು ಲಾಭ ರಹಿತ ಮತ್ತು ಚಾರಿಟಿ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 45ರಿಂದ 47ರಷ್ಟಾಗಿದೆ. ಕ್ರಮವಾಗಿ ಅಧಿಕ ಲಿಂಗ ವೈವಿಧ್ಯತೆ ನಂಬಿಕೆ ಮಟ್ಟದಲ್ಲಿ ಹೆಚ್ಚಾಗಿದೆ.

ಸಾರಿಗೆ ಮತ್ತು ನಿರ್ಮಾಣ ಹಾಗೂ ಉತ್ಪನ್ನದಲ್ಲಿ ಕಡಿಮೆ ಲಿಂಗ ವೈವಿಧ್ಯತೆ ಕಾಣಬಹುದಾಗಿದ್ದು, ಇಲ್ಲಿ ಶೇ 13 ರಿಂದ 9 ಕ್ಕೆ ಇಳಿದಿದ್ದು, ಆದರೂ ಉದ್ಯೋಗಿಗಳಲ್ಲಿ ಹೆಚ್ಚಿನ ನಂಬಿಕೆ ಮಟ್ಟದ ಗುರಿಯನ್ನು ನಿರ್ವಹಣೆ ಮಾಡಬೇಕಿದೆ.

ಸಂಸ್ಥೆಗಳು ಎಲ್ಲರಿಗೂ ಆದ್ಯತೆ ನೀಡುವ ವೃತ್ತಿಪರ ಮತ್ತು ನಾಯಕತ್ವದ ಅಭಿವೃದ್ಧಿಗೆ ಆದ್ಯತೆ ನೀಡುವ ವಿಚಾರದಲ್ಲಿ ಶೇ 14ರಷ್ಟು ಹೆಚ್ಚಳ ಕಂಡಿದೆ. ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಎಲ್ಲಾ ಉದ್ಯೋಗಿಗಳು ಭಾಗಿಯಾಗುತ್ತಿರುವುದನ್ನು ಕಾಣಬಹುದಾಗಿದೆ ಎಂದು ವರದಿ ತಿಳಿಸಿದೆ.

ಸಂಸ್ಥೆಗಳು ವೃತ್ತಿಪರ ಮತ್ತು ನಾಯಕತ್ವದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲರ ಅನುಭವಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗಿ ಗ್ರಹಿಕೆಗಳಲ್ಲಿ 14 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿವೆ. ಜೊತೆಗೆ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಉದ್ಯೋಗಿಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ಜಾಗೃತಿ ದಿನ : ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಮಾರಕ ಕ್ಯಾನ್ಸರ್.. ವರದಿ ಹೇಳೋದೇನು..?

ABOUT THE AUTHOR

...view details