ಸ್ಯಾನ್ಫ್ರಾನ್ಸಿಸ್ಕೋ( ಅಮೆರಿಕ): ಜೀರ್ಣಕ್ರಿಯೆ ಸಮಸ್ಯೆ ಅಥವಾ ರೋಗಗಳು ವಯಸ್ಸಾದ ಹಿರಿಯರಲ್ಲಿ ಏಕಾಂಗಿತನ ಮತ್ತು ಖಿನ್ನತೆ ಮೂಡಿಸುವ ಜೊತೆಗೆ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಯೊಂದು ತಿಳಿಸಿದೆ.
ಅಮೆರಿಕದ ಯುನಿವರ್ಸಿಟಿಯ ಆಫ್ ಮಿಚಿಗನ್ ನಡೆಸಿದ ಸಂಶೋಧನೆಯಲ್ಲಿ ಏಕಾಂಗಿತ ಎಂಬುದನ್ನು ಒಬ್ಬಂಟಿ ಅಥವಾ ಜೊತೆಗಾರರು ಇಲ್ಲದೇ ಇರುವ ಒಂಟಿ ಭಾವನೆ ಎಂದು ಉಲ್ಲೇಖಿಸಲಾಗಿದೆ. ಏಕಾಂಗಿತನ ಮತ್ತು ಖಿನ್ನತೆ ನಡುವಿನ ಪರಸ್ಪರ ಸಂಬಂಧವನ್ನು ಸಮರ್ಪಕವಾಗಿ ಈ ಮೂಲಕ ಕಂಡುಕೊಳ್ಳಲಾಗಿದೆ.
ಆರೋಗ್ಯ ವ್ಯವಸ್ಥೆಯಲ್ಲಿನ ತ್ವರಿತ ಬದಲಾವಣೆ ಹಾಗೂ ವೈಜ್ಞಾನಿಕ ಬೆಳವಣಿಗೆಯಿಂದ ಹಿರಿಯ ನಾಗರಿಕರ ಆಯಸ್ಸು ಹಾಗೂ ಜೀವನಮಟ್ಟ ಹೆಚ್ಚಿದೆ. ಇದರಲ್ಲಿ ಅನೇಕ ಮಂದಿ ಕೆಲವು ರೀತಿಯ ಜೀರ್ಣಕ್ರಿಯೆ ರೋಗಗಳಿಂದ ಬಳಲುತ್ತಿರುವುದು ಕಂಡು ಬಂದಿದೆ. ಸಂಶೋಧಕರು ಹೇಳುವಂತೆ ಇತ್ತೀಚಿನ ದಿನದಲ್ಲಿ ಅನೇಕ ಜನರಲ್ಲಿ ಜೀರ್ಣಕ್ರಿಯೆ ರೋಗ ಅಭಿವೃದ್ಧಿ ಆಗುತ್ತಿರುವ ಕುರಿತು ಅನೇಕ ಆರೋಗ್ಯ ತಜ್ಞರು ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ.
ರೋಗಿಗಳ ಜೀವನದಲ್ಲಿರುವ ಮನೋವೈಜ್ಞಾನಿಕ ಅಂಶಗಳಿಗೂ ನಾವು ಪ್ರಮುಖವಾಗಿ ಗಮನ ಹರಿಸಬೇಕಿದೆ ಎಂದು ಪಿಜಿಷಿಯನ್ ತಿಳಿಸಿದ್ದಾರೆ ಎಂದು ಮಿಚಿಗನ್ ಮೆಡಿಸಿನ್ ಗ್ಯಾಸ್ಟ್ರೋಎಟರೊಲೊಜಿಸ್ಟ್ ಶರ್ಲಿ ಆನ್ ಕೊಹೆನ್ ತಿಳಿಸಿದ್ದಾರೆ. ಈ ಅಂಶಗಳು ಕರುಳಿನ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ರೋಗಿಗಳ ಒಟ್ಟಾರೆ ಯೋಗಕ್ಷೆಮದ ಮೇಲೆ ನಿರ್ಣಾಯಕ ಪಾತ್ರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಏಕಾಂಗಿತನ, ಖಿನ್ನತೆ ಮತ್ತು ಸಾಮಾಜಿಕ ಪ್ರತ್ಯೇಕೀಕರಣ ದರವನ್ನು ಜೀರ್ಣ ಸಮಸ್ಯೆ ಹೊಂದಿರುವ ಹೊಂದಿಲ್ಲದ ರೋಗಿಗಳಲ್ಲಿ ಗಮನಿಸಬೇಕಿದೆ. ತಂಡವೂ 2008 ರಿಂದ 2016ರವರೆಗೆ ಅಮೆರಿಕದ 20 ಸಾವಿರ ಮಂದಿಯ ದತ್ತಾಂಶವನ್ನು ವಿಶ್ಲೇಷಿಸಿದೆ. ಭಾಗಿಯಾದವರಲ್ಲಿ 50 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟವರಾಗಿದ್ದಾರೆ.
ಈ ಅಧ್ಯಯನದ ಫಲಿತಾಂಶವನ್ನು ಕ್ಲಿನಿಕಲ್ ಗ್ಯಾಸ್ಟ್ರೊಎಟರೊಲಾಜಿ ಅಂಡ್ ಹೆಪಟೊಲಾಜಿಯಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರಲ್ಲಿ ಇತರ ರೋಗಿಗಳಿಗೆ ಹೋಲಿಕೆ ಮಾಡಿದಾಗ ಕಳಪೆ ಅಥವಾ ಸುಧಾರಿತ ಆರೋಗ್ಯ ಹೊಂದಿರುವುದು ಕಂಡು ಬಂದಿದೆ. ಜೀರ್ಣಕ್ರಿಯೆ ಸಮಸ್ಯೆ, ಏಕಾಂಗಿತನ ಜೊತೆಗೆ ಸುಧಾರಿತ ಗಂಭೀರ ಖಿನ್ನತೆ ಕೂಡ ಸಂಬಂಧ ಹೊಂದಿರುವುದು ಕಂಡು ಬಂದಿದೆ ಎಂದು ತಜ್ಞರು ತಿಳಿಸಿದ್ದಾರೆ.
ಒಟ್ಟಾರೆ, 60 .4 ರಷ್ಟು ಮತ್ತು 55.6ರಷ್ಟು ಜೀರ್ಣಕ್ರಿಯೆ ಸಮಸ್ಯೆ ಹೊಂದಿರದ ಮತ್ತು ಹೊಂದಿರುವವರು ಏಕಾಂಗಿತನ ಹೊಂದಿದ್ದು, 12.7ರಷ್ಟು ಮತ್ತು 7.5ರಷ್ಟು ಮಂದಿ ಗಂಭೀರ ಖಿನ್ನತೆ, ಶೇ 8.9ರಷ್ಟು ಮತ್ತು 8.7ರಷ್ಟು ಮಂದಿ ಸಾಮಾಜಿಕ ಪ್ರತ್ಯೇಕಿಕರಣ ಹೊಂದಿರುವುದಾಗಿ ಅಧ್ಯಯನದಲ್ಲಿ ಬಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸಂಶೋಧನೆಗಳು ಅಂತಿಮವಾಗಿ ಖಿನ್ನತೆ ಮತ್ತು ಒಂಟಿತನಕ್ಕಾಗಿ ರೋಗಿಗಳನ್ನು ಪರೀಕ್ಷಿಸಲು ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ಗಳಿಗೆ ಅಧಿಕಾರ ನೀಡುತ್ತದೆ ಎಂದು ಭಾವಿಸುತ್ತೇವೆ. ಇದನ್ನು ಮಾಡುವುದರ ಮೂಲಕ, ರೋಗಿಗಳ ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಆರೈಕೆ ಮಾರ್ಗಗಳನ್ನು ಉತ್ತಮವಾಗಿ ಸ್ಥಾಪಿಸಬಹುದು ಎಂಬುದನ್ನು ವರದಿಯಲ್ಲಿ ಪ್ರತಿಪಾದಿಸಲಾಗಿದೆ. (IANS)
ಇದನ್ನೂ ಓದಿ:ಅಜೀರ್ಣದಂತಹ ಸಮಸ್ಯೆಗೆ ಅಂಟಾಸಿಡ್ನಂತೆ ಕಾರ್ಯ ನಿರ್ವಹಿಸಲಿದೆ ಅರಿಶಿಣ