ಲಂಡನ್:ಬೆಳಗಿನ ತಿಂಡಿ ಮತ್ತು ರಾತ್ರಿ ಊಟ ತಪ್ಪಿಸುವುದು ಅಥವಾ ವಿಳಂಬವಾಗಿ ಸೇವನೆ ಮಾಡುವ ಮುನ್ನ ಎಚ್ಚರ. ಏಕೆಂದರೆ ಇದು ನಿಮ್ಮ ಹೃದಯಕ್ಕೆ ಹೆಚ್ಚಿನ ಅಪಾಯ ತರಲಿದೆ ಎಂದು ಸಂಶೋಧನೆಯೊಂದು ಎಚ್ಚರಿಸಿದೆ.
ಅಧ್ಯಯನ ಅನುಸಾರ, ರಾತ್ರಿ ಇಡೀ ಏನು ಸೇವನೆ ಮಾಡದ ಹಿನ್ನೆಲೆ ಬೆಳಗಿನ ತಿಂಡಿ ಸೇವನೆ ಅವಶ್ಯವಾಗಿದೆ. ಈ ತಿಂಡಿಯನ್ನು ಬೆಳಗ್ಗೆ 8 ಗಂಟೆಯೊಳಗೆ ಸೇಚಿಸಬೇಕು. ಹಾಗೇ ರಾತ್ರಿ ಊಟವನ್ನು ಕೂಡ 8ರೊಳಗೆ ಮುಗಿಸುವುದರಿಂದ ಹೃದಯ ರಕ್ತನಾಳ ರೋಗದ ಅಪಾಯವನ್ನು ತಪ್ಪಿಸಬಹುದು ಎನ್ನುತ್ತಿದೆ ಅಧ್ಯಯನ.
ಜಾಗತಿಕ ಸಾವಿನ ಪ್ರಮಾಣದಲ್ಲಿ ಹೃದಯ ರಕ್ತನಾಳದ ರೋಗದ ಕಾರಣ ಪ್ರಮುಖವಾಗಿದೆ. ಗ್ಲೋಬಲ್ ಬರ್ಡನ್ ಆಫ್ ಡೀಸಿಸ್ ಅಧ್ಯಯನ ಪ್ರಕಾರ, 2019ರಲ್ಲಿ ಜಾಗತಿಕವಾಗಿ ಈ ಸಮಸ್ಯೆಯಿಂದ 18.6 ಮಿಲಿಯನ್ ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಡಯಟ್ನಿಂದ ಕೊಡುಗೆ ಶೇ 7.9ರಷ್ಟಿದೆ. ಇದರ ಅರ್ಥ ಈ ರೋಗಗಳ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಡಯಟ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಫ್ರೆಂಚ್ ಸಂಶೋಧನಾ ಸಂಸ್ಥೆ ಐಎನ್ಆರ್ಎಇ ಮತ್ತು ನ್ಯಾಷನಲ್ ರಿಸರ್ಚ್ ಇನ್ಸುಟಿಟ್ಯೂಟ್ ಫಾರ್ ಅಗ್ರಿಕಲ್ಚರ್, ಫುಡ್ ಅಂಡ್ ಎನ್ವರಮೆಂಟ್ ಪ್ರಕಾರ ದಿನದ ಮೊದಲ ಅಹಾರವನ್ನು ಅಂದರೆ ತಿಂಡಿಯನ್ನು ತಪ್ಪಿಸುವುದು ಹೃದಯ ಸಮಸ್ಯೆ ಅಪಾಯವನ್ನು ಶೇ 6ರಷ್ಟು ಹೆಚ್ಚಿಸುತ್ತದೆ.