ಕರ್ನಾಟಕ

karnataka

ETV Bharat / sukhibhava

ಆಟಿಸಂ ಹೊಂದಿರುವ ಮಕ್ಕಳಲ್ಲಿ ಆಕ್ರಮಣಶೀಲತೆ ಹೆಚ್ಚು: ಅಧ್ಯಯನದಿಂದ ಬಹಿರಂಗ - ಆಕ್ರಮಣಕಾರಿಯಂತಹ ಗುಣಗಳು

ಆಟಿಸಂ ಮಕ್ಕಳಲ್ಲಿ ಈ ರೀತಿಯ ಆಕ್ರಮಣಕಾರಿ ನಡುವಳಿಕೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಸತತವಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ.

Aggression is high in children with autism; study
Aggression is high in children with autism; study

By

Published : Apr 26, 2023, 3:44 PM IST

ವಾಷಿಂಗ್ಟನ್​:ಆಟಿಸಂ ಸಮಸ್ಯೆ ಹೊಂದಿರುವ ಅರ್ಧದಷ್ಟು ಮಕ್ಕಳಲ್ಲಿ ಆಕ್ರಮಣಕಾರಿಯಂತಹ ಗುಣಗಳು ಇರುತ್ತದೆ. ಅವರು ಹೊಡೆಯುವ, ದೂಡುವ ಅಥವಾ ಹೆಸರು ಕರೆಯುವ ಸಮಸ್ಯೆ ಹೊಂದಿರುತ್ತಾರೆ. ಅವರ ಪೋಷಕರು ಸಾಮಾಜಿಕ ಏಕೀಕರಣ ನಿಭಾಯಿಸಲು ಸಹಾಯ ಮಾಡುತ್ತಾರೆ. ಆದಾಗ್ಯೂ ಆಟಿಸಂ ಮಕ್ಕಳಲ್ಲಿ ಈ ರೀತಿಯ ಆಕ್ರಮಣಕಾರಿ ನಡುವಳಿಕೆಗೆ ಕಾರಣ ಏನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.

ಈ ಜ್ಞಾನದ ಅಂತರವನ್ನು ಪರಿಹರಿಸಲು, ಅರ್ಕಾನ್ಸಾಸ್ ವಿಶ್ವವಿದ್ಯಾನಿಲಯದ ಕುಟುಂಬ ಮತ್ತು ಸಮುದಾಯ ಮಧ್ಯಸ್ಥಿಕೆ ಪ್ರಯೋಗಾಲಯದ ಸಂಶೋಧಕರು ಆಟಿಸಂ ಮಕ್ಕಳನ್ನು ಮೂರು ನಿರ್ಣಾಯಕ ಬೆಳವಣಿಗೆಯ ಅವಧಿ ಅಧ್ಯಯನ ನಡೆಸಲಾಗಿದೆ. ಅಲ್ಲದೇ, ಈ ಆಟಿಸಂ ಹೊಂದಿಲ್ಲದ ಮಕ್ಕಳಲ್ಲೂ ಈ ಕುರಿತು ಪರಿಶೀಲನೆ ನಡೆಸುತ್ತದೆ. ಆಟಿಸಂ ಮಕ್ಕಳ ಪೋಷಕರು ಆಗಾಗ್ಗೆ ಆಕ್ರಮಣಶೀಲತೆಯನ್ನು ವರದಿ ಮಾಡಿದ್ದಾರೆ ಎಂದು ಕಂಡು ಹಿಡಿದರು.

ಆಟಿಸಂ ಯುವಕರಲ್ಲಿ ಆಕ್ರಮಣಶೀಲತೆಯಿಂದ ಕುಟುಂಬಗಳು ವ್ಯಾಪಕವಾದ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವುದು ಪ್ರತಿನಿಧಿಸುತ್ತದೆ ಎಂದು ಲಾರೆನ್ ಕ್ವೆಷ್ ತಿಳಿಸಿದ್ದಾರೆ. ಬಾಲ್ಯದಲ್ಲಿನ ಆಟಿಸಂ ಅರ್ಥೈಸಿಕೊಳ್ಳುವಿಕೆಯನ್ನು ಆಟಿಸಂ ಹೊರತಾದ ಮಾದರಿಯೊಂದಿಗೆ ಹೋಲಿಕೆ ಮಾಡಬೇಕಿದೆ. ಹಲವು ದಶಕಗಳ ಅಧ್ಯಯನದಿಂದ ಮಕ್ಕಳ ವಿಶಿಷ್ಟ ಅಗತ್ಯಗಳ ಬಗ್ಗೆ ನಮಗೆ ಜ್ಞಾನ ಇಲ್ಲದಿದ್ದರೂ, ಇದನ್ನೂ ಬಹಳ ದೂರ ಕೊಂಡೊಯ್ಯಬೇಕಿದೆ. ಆಟಿಸಂ ಮಕ್ಕಳಲ್ಲಿ ಆಕ್ರಮಣಕಾರಿ ತನವನ್ನು ಅರ್ಥೈಸಿಕೊಳ್ಳವಲ್ಲಿ ನಮಗೆ ಈ ಬಗೆಗಿನ ಅಧ್ಯಯನ ಉತ್ತಮ ಪರಿಹಾರ ನೀಡುತ್ತದೆ.

ಮೂರು ವಿಧದಲ್ಲಿ ಅರ್ಥೈಸಿಕೊಳ್ಳುವಿಕೆ: 2020 ಡಿಸೆಂಬರ್​ನಿಂದ ಮಾರ್ಚ್​ 2021ರ ನಡುವೆ ಈ ಸಂಬಂಧ 450 ಆಟಿಸ್ಟಿಕ್​ ಮತ್ತು 432 ಆಟಿಸಂ ಹೊರಾತಾದ ಮಕ್ಕಳನ್ನ ದತ್ತಾಂಶವನ್ನು ಸಂಗ್ರಹಿಸಿ ಈ ಬಗ್ಗೆ ವಿಶೇಷ ಅಧ್ಯಯನ ನಡೆಸಲಾಗಿದೆ. ಈ ದತ್ತಾಂಶವನ್ನು ವಯಸ್ಸಿಗೆ ಅನುಗುಣವಾಗಿ ಮೂರು ಗುಂಪುಗಳಾಗಿ ಮಾಡಿ ಸಂಶೋಧನೆ ನಡೆಸಲಾಗಿದೆ. ಆರು ವರ್ಷಕ್ಕಿಂತ ಕಡಿಮೆ, ಆರರಿಂದ 12 ವರ್ಷ ಮತ್ತು 13 ರಿಂದ 17 ವರ್ಷದ ಗುಂಪುಗಳಲ್ಲಿ ಅಧ್ಯಯನ ನಡೆಸಲಾಗಿದೆ. ಈ ವೇಳೆ, ಮಕ್ಕಳಲ್ಲಿನ ಆಕ್ರಮಣಕಾರಿ ನಡುವಳಿಕೆ ನಿರ್ಣಯಕ ಅಭಿವೃದ್ಧಿ ಅವಧಿ ಹೊಂದಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ದತ್ತಾಂಶವನ್ನು ಸಂಗ್ರಹಿಸಿದ ಬಳಿಕ ಸಂಶೋಧಕರು ವಿಶ್ಲೇಷಣೆ ಕೈಗೊಂಡಿದ್ದರು. ಈ ವೇಳೆ ಬೆಳವಣಿಗೆಯ ಎಲ್ಲ ಮೂರು ಹಂತಗಳಲ್ಲಿ ಆಟಿಸಂ ಹೊಂದಿರುವ ಮಕ್ಕಳು, ಹೆಚ್ಚಿನ ಮಟ್ಟದ ಮೌಖಿಕ ಆಕ್ರಮಣಶೀಲತೆ ಮತ್ತು ಅಡ್ಡಿಪಡಿಸುವ ವರ್ತನೆಯ ತೀವ್ರತೆ ಬಹಿರಂಗಪಡಿಸಿತು. ಆರಕ್ಕಿಂತ ಕಡಿಮೆ ವಯಸ್ಸಿನ ಆಟಿಸಂ ಮಕ್ಕಳು ತಮ್ಮ ಇತರ ಗೆಳೆಯರಿಗಿಂತ ಹೆಚ್ಚು ದೈಹಿಕ ಆಕ್ರಮಣವನ್ನು ಹೊಂದಿದ್ದರು. ಆದಾಗ್ಯೂ, ಈ ಮಟ್ಟಗಳು ಮಕ್ಕಳು ವಯಸ್ಸಾದಂತೆ ಆಟಿಸಂ ಗೆಳೆಯರಿಗೆ ಸಮಾನವಾದವು. ಗುಣಾತ್ಮಕ ಅಧ್ಯಯನದಲ್ಲಿ, ಪೋಷಕರ ಪ್ರಕಾರ, ಸ್ವಲೀನತೆಯಲ್ಲದ ಮಕ್ಕಳು ನಿಯಂತ್ರಿತ ರೀತಿಯಲ್ಲಿ ಕೋಪವನ್ನು ಹೆಚ್ಚಾಗಿ ವ್ಯಕ್ತಪಡಿಸುತ್ತಾರೆ. ಆದರೆ, ಆಟಿಸಂ ಮಕ್ಕಳು ತಮ್ಮ ಕೋಪವನ್ನು ಬೇಗ ತೋರ್ಪಡಿಸಲು ಮುಂದಾಗುತ್ತಾರೆ ಎಂಬುದನ್ನು ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಭಾರತೀಯ ಯುವ ಜನರ ಮಾನಸಿಕ ಅರೋಗ್ಯದ ಮೇಲೆ ಕೋವಿಡ್​ ಮತ್ತು ಹವಮಾನ ಬದಲಾವಣೆಯಿಂದ ನಕಾರಾತ್ಮಕ ಪರಿಣಾಮ

ABOUT THE AUTHOR

...view details