ಕರ್ನಾಟಕ

karnataka

ETV Bharat / sukhibhava

ಸೆಕ್ಸ್​ ಲೈಫ್​ ಚೆನ್ನಾಗಿರಲು ಅನುಸರಿಸಿ ಈ ಟಿಪ್ಸ್​..! - ಈಟಿವಿ ಭಾರತ ಕನ್ನಡ

ನಮ್ಮ ದೇಹದ ಅತ್ಯಂತ ಹೆಚ್ಚು ಲೈಂಗಿಕ ಭಾವನೆಯ ಭಾಗವೆಂದರೆ ಮೆದುಳು. ಏಕೆಂದರೆ ಲೈಂಗಿಕ ಬಯಕೆ ಹುಟ್ಟುವುದೇ ಇಲ್ಲಿ. ಆದ್ದರಿಂದ 'ಸೆಕ್ಸಿ ಮಾತು' ಅಥವಾ ಲೈಂಗಿಕತೆಯ ಬಗ್ಗೆ ಅಶ್ಲೀಲ ರೀತಿಯಲ್ಲಿ ಮಾತನಾಡುವುದರಿಂದ ತುಂಬಾ ಪ್ರಚೋದನೆಯಾಗುತ್ತದೆ.

ಸೆಕ್ಸ್​ ಲೈಫ್​ ಚೆನ್ನಾಗಿರಲು ಅನುಸರಿಸಿ ಈ ಟಿಪ್ಸ್​..!
5 tips to improve your sex life

By

Published : Aug 1, 2022, 1:57 PM IST

ಪ್ರತಿ ಬಾರಿಯೂ ಲೈಂಗಿಕ ಪರಾಕಾಷ್ಠೆಯನ್ನು ತಲುಪಿದಾಗ ವ್ಯಕ್ತಿಯ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್‌ನ ಪ್ರವಾಹವೇ ಉಂಟಾಗುತ್ತದೆ. ಇದು ಆ ವ್ಯಕ್ತಿಯ ಮೂಡ್​ ಅನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತದೆ. ಪ್ರೀತಿ, ಉತ್ಸಾಹ ಮತ್ತು ಮೃದುತ್ವದಿಂದ ಹಾತೊರೆಯುವಿಕೆ, ಆತಂಕ ಮತ್ತು ನಿರಾಶೆ ಹೀಗೆ ಸೆಕ್ಸ್ ಎಂಬ ಪದವು ಭಾವನೆಗಳ ಕಾಮನಬಿಲ್ಲನ್ನೇ ಸೃಷ್ಟಿಸುತ್ತದೆ.

ಆದಾಗ್ಯೂ ಸೆಕ್ಸ್​ ಎನ್ನುವುದು ನಿಮ್ಮ ಜೀವನದಲ್ಲಿ ಜಸ್ಟ್ ಮತ್ತೊಂದು ಕೆಲಸದ ರೀತಿಯಾಗಿದ್ದರೆ, ಏಕತಾನತೆಯಾಗಿದ್ದರೆ ನಿಮ್ಮ ಜೀವನದಲ್ಲಿ ಮಿಂಚಿನ ಸಂಚಾರ ಮೂಡಿಸಲು ಇಲ್ಲಿವೆ ಕೆಲವೊಂದಿಷ್ಟು ಉತ್ತಮ ಟಿಪ್ಸ್​. ಆರೋಗ್ಯಕರ ಸೆಕ್ಸ್​ ಲೈಫ್​ಗಾಗಿ ಇವನ್ನು ತಿಳಿದುಕೊಳ್ಳಿ.

ಮುಕ್ತ ಮನಸ್ಸಿನರಲಿ:ನಿಮ್ಮ ಸ್ವಂತ ದೇಹ ಮತ್ತು ಲೈಂಗಿಕತೆಯನ್ನು ಏಕಾಂಗಿಯಾಗಿ ಅಥವಾ ನಿಮ್ಮ ಸಂಗಾತಿಯೊಂದಿಗೆ ಅನ್ವೇಷಿಸಿ. ನಿಮಗೆ ಯಾವ ವಿಷಯಗಳಿಂದ ಸಂತೋಷವಾಗುತ್ತದೆ ಮತ್ತು ಯಾವ ರೀತಿಯಲ್ಲಿ ನೀವು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಬಹುದು ಎಂಬುದು ನಿಮಗೇ ತಿಳಿಯುತ್ತದೆ. ನೀವು ಹಾಸಿಗೆಯಲ್ಲಿ ಹೆಚ್ಚು ಕ್ರಿಯೇಟಿವ್ ಆಗಿರಲು ಬಯಸಿದರೆ, ವಿಭಿನ್ನ ಭಂಗಿಗಳು, ಆಟಿಕೆಗಳು ಮತ್ತು ರೋಲ್ ಪ್ಲೇಯಂತಹ ಹೊಸ ಆಲೋಚನೆಗಳನ್ನು ಅನ್ವೇಷಿಸಬಹುದು.

ಡರ್ಟಿ ಟಾಕ್:ನಮ್ಮ ದೇಹದ ಅತ್ಯಂತ ಹೆಚ್ಚು ಲೈಂಗಿಕ ಭಾವನೆಯ ಭಾಗ ಎಂದರೆ ಮೆದುಳು. ಏಕೆಂದರೆ ಲೈಂಗಿಕ ಬಯಕೆ ಹುಟ್ಟುವುದೇ ಇಲ್ಲಿ. ಆದ್ದರಿಂದ 'ಸೆಕ್ಸಿ ಮಾತು' ಅಥವಾ ಲೈಂಗಿಕತೆಯ ಬಗ್ಗೆ ಅಶ್ಲೀಲ ರೀತಿಯಲ್ಲಿ ಮಾತನಾಡುವುದರಿಂದ ತುಂಬಾ ಪ್ರಚೋದನೆಯಾಗುತ್ತದೆ. ಸೆಕ್ಸಿ ಪದಗಳಿಗೆ ಒಬ್ಬರ ಪ್ರತಿಕ್ರಿಯೆ ಅಥವಾ ಸಂಭಾಷಣೆಯ ವಿಷಯವು ಮೆದುಳಿನ ಹೈಪೋಥಾಲಮಸ್ ಮತ್ತು ಅಮಿಗ್ಡಾಲಾ ಪ್ರದೇಶಗಳನ್ನು ಅವಲಂಬಿಸಿರುತ್ತದೆ. ಆದರೆ ಇದು ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನವಾಗಿರುತ್ತದೆ.

ಫೋರ್​ಪ್ಲೇ ಮಹತ್ವವನ್ನು ಅರ್ಥಮಾಡಿಕೊಳ್ಳಿ:ಕೆಲವೊಮ್ಮೆ ನೀವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಅಲ್ಲಿಂದ ಮತ್ತೊಂದು ಜಾಗಕ್ಕೆ ಹೋದಂತೆ ನಿಮ್ಮ ಸೆಕ್ಸ್​ ಕೂಡ ಅನಿಸಬಹುದು. ಅಂದರೆ ಏಕತಾನತೆ ಮನೆ ಮಾಡುತ್ತಿದೆ ಎಂಬ ಭಾವ ಕಾಡಬಹುದು. ಹೀಗಾಗಬಾರದೆಂದರೆ ಫೋರ್​ಪ್ಲೇ ಬಹಳ ಅಗತ್ಯ. ಸೆಕ್ಸ್‌ಗೆ ಧುಮುಕುವ ಮೊದಲು ಮನಸ್ಸನ್ನು ನಿಧಾನಗೊಳಿಸಿ ಮತ್ತು ಇಂದ್ರಿಯ ಪ್ರಚೋದನೆಯ ಮೇಲೆ ಗಮನ ಕೇಂದ್ರೀಕರಿಸಿ. ಫೋರ್‌ಪ್ಲೇ ಇಬ್ಬರೂ ಸಂಗಾತಿಗಳು ಸೆಕ್ಸ್​ನಲ್ಲಿ ಪಾಲ್ಗೊಳ್ಳುವಂತೆ ಸಮಾನವಾಗಿ ಪ್ರಚೋದಿಸುತ್ತದೆ.

ಧೂಮಪಾನವನ್ನು ತಪ್ಪಿಸಿ:ಧೂಮಪಾನದಿಂದ ಶ್ವಾಸಕೋಶದ ಕಾಯಿಲೆಗೆ ಕಾರಣವಾಗುತ್ತದೆ. ಅಲ್ಲದೇ ನಾಳಗಳ ಕಾಯಿಲೆ ಸಹ ಇದರಿಂದ ಬರಬಹುದು. ಈ ಕಾಯಿಲೆಯಿಂದ ಶಿಶ್ನ, ಚಂದ್ರನಾಡಿ ಮತ್ತು ಯೋನಿ ಅಂಗಾಂಶಗಳ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ, ಧೂಮಪಾನ ಮಾಡುವ ಮಹಿಳೆಯರು ಧೂಮಪಾನಿಗಳಲ್ಲದವರಿಗಿಂತ ಎರಡು ವರ್ಷಗಳ ಮುಂಚೆಯೇ ಋತುಬಂಧಕ್ಕೆ (ಮೆನೊಪಾಸ್​ಗೆ) ಒಳಗಾಗುತ್ತಾರೆ.

ಇದನ್ನು ಓದಿ:ಏನಿದು ಕಡಿಮೆ ಸಕ್ಕರೆಯುಕ್ತ ಸಿಹಿ ತಿನಿಸುಗಳ ಡಯಟ್​.. ಆಹಾರದಲ್ಲಿ ನಿತ್ಯ ಎಷ್ಟು ಸಿಹಿ ಇದ್ದರೆ ಉತ್ತಮ?

ABOUT THE AUTHOR

...view details