ಕರ್ನಾಟಕ

karnataka

ಯಾದಗಿರಿ: ಬೃಹತ್ ಗಾತ್ರದ ಹೊಂಡದಲ್ಲಿ ಬಿದ್ದು ಯುವಕ ಸಾವು

ಮರಮ್​ ಗುಂಡಿಯ ನೀರಿನಲ್ಲಿ ಈಜಲು ಹೋಗಿ ಓಂಕಾರ್​ ಎಂಬ ಯುವಕ ಪ್ರಾಣ ಕಳೆದು ಕೊಂಡಿದ್ದಾನೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

By

Published : Apr 4, 2022, 10:33 PM IST

Published : Apr 4, 2022, 10:33 PM IST

Updated : Apr 4, 2022, 10:54 PM IST

YDR : death news
ಯಾದಗಿರಿ: ಬೃಹತ್ ಗಾತ್ರದ ಹೊಂಡದಲ್ಲಿ ಬಿದ್ದು ಯುವಕ ಸಾವು

ಯಾದಗಿರಿ:ಬೃಹತ್ ಗಾತ್ರದ ಹೊಂಡದಲ್ಲಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುರಮಠಕಲ್ ತಾಲೂಕಿನ ಜೈಗ್ರಾಮದಲ್ಲಿ ನಡೆದಿದೆ. ಓಂಕಾರ (22) ಮೃತ ಪಟ್ಟ ಯುವಕ. ಗ್ರಾಮದಲ್ಲಿನ ಸರ್ಕಾರಿ ಜಮೀನಿನಲ್ಲಿ ಅಕ್ರಮ ಮರಮ್ ಸಾಗಣೆ ಮಾಡುತ್ತಿರುವ ಕಾರಣ ಹೊಂಡ ನಿರ್ಮಾಣಹೊಂಡು ನೀರು ಸಂಗ್ರಹಗೊಂಡಿತ್ತು. ದೇವತಾ ಕಾರ್ಯದ ನಿಮಿತ್ತ ಕಲಬುರ್ಗಿಯಿಂದ ಗ್ರಾಮಕ್ಕೆ ಬಂದ ಯುವಕ ಹೊಂಡದಲ್ಲಿ ಈಜಾಡಲು ಹೋಗಿ ನೀರು ಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ.

ಯಾದಗಿರಿ: ಬೃಹತ್ ಗಾತ್ರದ ಹೊಂಡದಲ್ಲಿ ಬಿದ್ದು ಯುವಕ ಸಾವು

ಮರಮ್ ಸಾಗಣೆ ಯಾವುದೇ ಪರವಾನಗಿ ಪಡೆಯದೇ ರಾಜಾರೋಷವಾಗಿ ಅಗೆಯಲಾಗುತ್ತಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:ಕಾಲುವೆಯಲ್ಲಿ ಮುಳುಗಿ ಪಿಯು ವಿದ್ಯಾರ್ಥಿ ಸಾವು : ಶವಕ್ಕಾಗಿ ಶೋಧ

Last Updated : Apr 4, 2022, 10:54 PM IST

For All Latest Updates

ABOUT THE AUTHOR

...view details