ಕರ್ನಾಟಕ

karnataka

ಏಕಾಏಕಿ ನಿಂತ ಉದ್ಯಾನವನ ಕಾಮಗಾರಿ: ಸುರಪುರ ಜನರ ಆಕ್ರೋಶ

ಟೈಲರ್ ಮಂಝಿಲ್ ಬಳಿಯ ಯಲ್ಲಪ್ಪ ಬಾವಿ ಪಕ್ಕದಲ್ಲಿನ ನಾಲ್ಕೂವರೆ ಎಕರೆ ಜಾಗದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಮತ್ತು ಈಜು ಕೊಳ ನಿರ್ಮಿಸುವುದಾಗಿ ಸರ್ಕಾರ ಸ್ಥಳ ಗುರುತಿಸಿತ್ತು. ಜೊತೆಗೆ ನಿರ್ಮಿತಿ ಕೇಂದ್ರದ ನಿರ್ವಹಣೆಯಲ್ಲಿ ಕಾಮಗಾರಿ ನಿರ್ಮಾಣಕ್ಕೆ ವಹಿಸಲಾಗಿತ್ತು. ಈ ಕಾಮಗಾರಿ ದಿಢೀರ್​ ನಿಂತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

By

Published : Jun 28, 2020, 11:55 AM IST

Published : Jun 28, 2020, 11:55 AM IST

Tyler Manziel near  Park Construction shutdown
ಏಕಾಏಕಿ ನಿಂತ ಟೈಲರ್ ಮಂಝಿಲ್ ಬಳಿಯ ಉದ್ಯಾನವನ ಕಾಮಗಾರಿ:

ಸುರಪುರ: ಕಳೆದ ನಾಲ್ಕು ವರ್ಷಗಳ ಹಿಂದೆ ನಗರದ ಟೈಲರ್ ಮಂಝಿಲ್ ಬಳಿ ಉದ್ಯಾನವನ ನಿರ್ಮಿಸುವುದಾಗಿ ಸರ್ಕಾರ ತಿಳಿಸಿತ್ತು. ಕಾಮಗಾರಿ ನಿರ್ಮಾಣದ ಹೊಣೆ ಹೊತ್ತ ನಿರ್ಮಿತ ಕೇಂದ್ರದ ಅಧಿಕಾರಿಗಳು ಆರಂಭದಲ್ಲಿ ಒಂದಿಷ್ಟು ಗಿಡಗಳನ್ನು ನೆಟ್ಟು ಜೊತೆಗೆ ಈಜು ಕೊಳವನ್ನು ಕೂಡ ನಿರ್ಮಿಸಿದ್ದರು. ಆದರೆ ಕೆಲ ತಿಂಗಳ ನಂತರ ಏಕಾಏಕಿ ಕಾಮಗಾರಿ ನಿಲ್ಲಿಸಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏಕಾಏಕಿ ನಿಂತ ಟೈಲರ್ ಮಂಝಿಲ್ ಬಳಿಯ ಉದ್ಯಾನವನ ಕಾಮಗಾರಿ: ಸ್ಥಳೀಯರ ಆಕ್ರೋಶ

ನಗರದ ಟೈಲರ್ ಮಂಝಿಲ್ ಬಳಿಯ ಯಲ್ಲಪ್ಪ ಬಾವಿ ಪಕ್ಕದಲ್ಲಿನ ನಾಲ್ಕೂವರೆ ಎಕರೆ ಜಾಗದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಮತ್ತು ಈಜು ಕೊಳ ನಿರ್ಮಿಸುವುದಾಗಿ ಸ್ಥಳ ಗುರುತು ಮಾಡಿತ್ತು. ಜೊತೆಗೆ ನಿರ್ಮಿತಿ ಕೇಂದ್ರದ ನಿರ್ವಹಣೆಯಲ್ಲಿ ಕಾಮಗಾರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಕಾಮಗಾರಿ ನಿರ್ಮಾಣದ ಹೊಣೆಹೊತ್ತ ನಿರ್ಮಿತ ಕೇಂದ್ರದ ಅಧಿಕಾರಿಗಳು ಮೊದ ಮೊದಲು ಕಾಮಗಾರಿ ಆರಂಭಿಸಿ ಒಂದಿಷ್ಟು ಗಿಡಗಳನ್ನು ನೆಟ್ಟು, ವಿಶ್ರಾಂತಿ ಕೋಣೆಗಳನ್ನು ನಿರ್ಮಿಸಿದ್ದರು. ನಂತರ ಕೆಲ ತಿಂಗಳುಗಳ ನಂತರ ಏಕಾಏಕಿ ಕಾಮಗಾರಿ ನಿಲ್ಲಿಸಿದ್ದಾರೆ. ಅಂದು ನಿಲ್ಲಿಸಿದ ಕಾಮಗಾರಿ ಮತ್ತೆ ಆರಂಭಗೊಂಡಿಲ್ಲ. ಅಲ್ಲದೆ ಅಂದು ನಿರ್ಮಿಸಿದ್ದ ವಿಶ್ರಾಂತಿ ಕೋಣೆಗಳ ತಗಡು ಕಳ್ಳರ ಪಾಲಾಗಿದ್ದು, ಕೆಲವು ಗಾಳಿಗೆ ಮುರಿದು ಬಿದ್ದಿವೆ. ಇದೀಗ ಉದ್ಯಾನವನದ ಸ್ಥಳ ಪುಂಡ ಪೋಕರಿಗಳ ಮೋಜು-ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ.

ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ನಿರ್ಮಿತಿ ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಜನರ ಉಪಯೋಗಕ್ಕೆಂದು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಲು ಉದ್ದೇಶಿಸಿದ್ದ ಕಾಮಗಾರಿ ಅರ್ಧಕ್ಕೆ ನಿಂತು ಹಾಳಾಗಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details