ಕರ್ನಾಟಕ

karnataka

30 ವರ್ಷ ಕಳೆದರೂ ಸಿಕ್ಕಿಲ್ಲ ಸೂರು: ಕೇವಲ ಹಕ್ಕು ಪತ್ರ ನೀಡಿ ಕೈತೊಳೆದುಕೊಂಡ ಸರ್ಕಾರ

By

Published : Oct 10, 2022, 4:05 PM IST

Updated : Oct 10, 2022, 9:32 PM IST

ಯಾದಗಿರಿ ಜಿಲ್ಲೆಯ ಗುರುಮಠಕಲ್​ನಲ್ಲಿ ಬಡಜನರಿಗಾಗಿ ಸೂರು ಕಲ್ಪಿಸಲು ತಂದ ಆಶ್ರಯ ಯೋಜನೆಯ ಫಲಾನುಭವಿಗಳಿಗೆ 30 ವರ್ಷ ಕಳೆದರೂ ಆಶ್ರಯ ಸಿಕ್ಕಿಲ್ಲ. ಫಲಾನುಭವಿಗಳಿಗೆ ಕೇವಲ ಹಕ್ಕು ಪತ್ರಗಳನ್ನು ನೀಡಿ ಕೈ ತೊಳೆದುಕೊಂಡಿರುವ ಸರ್ಕಾರ ಫಲಾನುಭವಿಗಳಿಗೆ ಸೂರು ಒದಗಿಸುವ ಕಾರ್ಯ ಮಾಡಿಲ್ಲ.

no-home-under-ashraya-scheme-at-yadagiri
30 ವರ್ಷ ಕಳೆದರೂ ಸಿಕ್ಕಿಲ್ಲ ಸೂರು : ಕೇವಲ ಹಕ್ಕು ಪತ್ರ ನೀಡಿ ಕೈತೊಳೆದುಕೊಂಡಿರುವ ಸರ್ಕಾರ

ಯಾದಗಿರಿ: ಬಡಜನರಿಗಾಗಿ ಸೂರು ಕಲ್ಪಿಸಲು ಈ ಹಿಂದೆಯೇ ಸರ್ಕಾರವು ಆಶ್ರಯ ಯೋಜನೆ ಜಾರಿಗೆ ತಂದಿತ್ತು. ಆದರೆ, ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ಅಧಿಕಾರಿಗಳ ಬೇಜವಾಬ್ದಾರಿಯೋ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡಿ ಕೈ ತೊಳೆದುಕೊಂಡಿದೆ. ಆದರೆ, 30 ವರ್ಷಗಳು ಕಳೆದರೂ ಇಲ್ಲಿ ಒಂದು ಮನೆಯೂ ನಿರ್ಮಾಣವಾಗಿಲ್ಲ.

30 ವರ್ಷವಾದರೂ ಇಲ್ಲ ಸೂರಿನ ಭಾಗ್ಯ : ಹೀಗೆ ಒಂದು ಕಡೆ ಮಳೆಯಲ್ಲಿ ನೆನೆಯುತ್ತಾ ನಿಂತಿರುವ ಜನರು,ಮತ್ತೊಂದೆಡೆ ಪುರಸಭೆ ಕಚೇರಿ ಬಳಿ ಬಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿರುವ ಜನರು. ಈ ದೃಶ್ಯ ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ. ಗಿರಿನಾಡು ಯಾದಗಿರಿ 12 ವರ್ಷಗಳ ಹಿಂದೆ ಕಲಬುರಗಿ ಜಿಲ್ಲೆಯಿಂದ ಬೇರ್ಪಟ್ಟು ಯಾದಗಿರಿ ನೂತನ ಜಿಲ್ಲೆಯಾಗಿ ರೂಪುಗೊಂಡಿತು.

30 ವರ್ಷ ಕಳೆದರೂ ಸಿಕ್ಕಿಲ್ಲ ಸೂರು : ಕೇವಲ ಹಕ್ಕು ಪತ್ರ ನೀಡಿ ಕೈತೊಳೆದುಕೊಂಡಿರುವ ಸರ್ಕಾರ

ಕೇವಲ ಹಕ್ಕು ಪತ್ರ ನೀಡಿ ಕೈತೊಳೆದುಕೊಂಡಿರುವ ಸರ್ಕಾರ: 30 ವರ್ಷಗಳ ಹಿಂದೆ ಬಡ ಜನರಿಗಾಗಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಶ್ರಯ ಯೋಜನೆ ಜಾರಿಗೆ ತಂದಿತ್ತು. ಅದರಂತೆ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಪಟ್ಟಣದ ಕೂಗಳತೆ ದೂರದಲ್ಲಿರುವ ನಾನಾಪುರ ಬಡಾವಣೆಯ ಸರ್ವೇ ನಂ 25ರ 3 ಎಕರೆ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಲಾಗಿತ್ತು.

1991-92ರ ಅವಧಿಯಲ್ಲಿ ಎಸ್.ಬಂಗಾರಪ್ಪ ಅವರ ಅಧಿಕಾರದ ಅವಧಿಯಲ್ಲಿ 134 ಬಡಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. 30 ವರ್ಷಗಳು ಕಳೆದರೂ ಫಲಾನುಭವಿಗಳಿಗೆ ಸ್ಥಳ ನೀಡದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ : ಗುರುಮಠಕಲ್ ಪಟ್ಟಣ ಪಂಚಾಯತ್​ ಮೂಲಕ ಪ್ರತಿ ಫಲಾನುಭವಿಗೆ 20x30 ನಿವೇಶನ ನೀಡಲು ಹಕ್ಕು ಪತ್ರ ವಿತರಣೆ ಮಾಡಿದೆ. ನಿವೇಶನ ಗುರುತಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿ ಬಂದಿವೆ.

ಶೀಘ್ರದಲ್ಲೇ ಪರಿಹಾರ ನೀಡುವ ಭರವಸೆ : ಇನ್ನು ಈ ಬಗ್ಗೆ ಪುರಸಭೆ ಅಧ್ಯಕ್ಷ ಪಾಪಣ್ಣ ಹಾಗೂ ಮುಖ್ಯಾಧಿಕಾರಿ ಭಾರತಿ ಅವರನ್ನು ಭೇಟಿ ಮಾಡಿದ ಫಲಾನುಭವಿಗಳು ನಿವೇಶನಗಳನ್ನು ಗುರುತಿಸಿ ಕೊಟ್ಟು ಬಡ ಜನರಿಗೆ ಸೂರು ಕಲ್ಪಿಸಿ ಎಂದು ಮನವಿ ಮಾಡಿದರು. ಜೊತೆಗೆ 1991ರಲ್ಲಿ ನೀಡಿದ್ದ ಹಕ್ಕು ಪತ್ರದ ವಿತರಣೆಯ ದಾಖಲೆಗಳನ್ನು ತರಿಸಿ ಮತ್ತೆ ಪರಿಶೀಲನೆ ನಡೆಸಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪುರಸಭೆ ಅಧ್ಯಕ್ಷ ಪಾಪಣ್ಣ, ಈ ಹಿಂದೆ ವೃದ್ದರೊಬ್ಬರು ಬಂದು ಈ ವಿಚಾರವನ್ನು ತಿಳಿಸಿದರು. ಕೂಡಲೇ ನಾನು ಮುತುರ್ವಜಿ ವಹಿಸಿ ಫಲಾನುಭವಿಗಳಿಗೆ ನಿವೇಶನ ನೀಡಲು ಸಿದ್ದತೆ ಮಾಡಿದ್ದೇನೆ. ಇನ್ನು ಎರಡು ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಇನ್ನಾದರೂ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಪರಿಹಾರ ಸಿಗುತ್ತೋ ಕಾದುನೋಡಬೇಕಿದೆ

ಇದನ್ನೂ ಓದಿ :ಬೊಮ್ಮಾಯಿ ಸಾಧನೆ ಕುರಿತ ಹಾಡುಗಳ ಧ್ವನಿಸುರುಳಿ ಬಿಡುಗಡೆ.. ನಟಿ ತಾರಾ ಅನುರಾಧಾ

Last Updated : Oct 10, 2022, 9:32 PM IST

ABOUT THE AUTHOR

...view details