ಕರ್ನಾಟಕ

karnataka

ETV Bharat / state

ವಿವಾಹೇತರ ಸಂಬಂಧದಲ್ಲಿ ಮೂಡಿದ ಮನಸ್ತಾಪ: ಮಹಿಳೆಯ ಕತ್ತು ಹಿಸುಕಿ ಕೊಲೆ - yadagiri news

ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯನ್ನು ತನ್ನ ಪ್ರಿಯಕರನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

killed woman in yadagiri
ಮಹಿಳೆಯ ಕತ್ತು ಹಿಸುಕಿ ಕೊಲೆ

By

Published : Sep 12, 2020, 11:48 PM IST

Updated : Sep 13, 2020, 6:16 AM IST

ಯಾದಗಿರಿ: ಕತ್ತು ಹಿಸುಕಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವರ್ಕನಳ್ಳಿ ಗ್ರಾಮದ ಉಮಾದೇವಿ (35) ಎಂಬುವಾಕೆ ಕೊಲೆಯಾದ ಮಹಿಳೆ. ಅದೆ ಗ್ರಾಮದ ಬಾವಸಾಬ್ ಎಂಬುವವ ಉಮಾದೇವಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮಹಿಳೆಯ ಕತ್ತು ಹಿಸುಕಿ ಕೊಲೆ

ಉಮಾದೇವಿ ಜೊತೆ ಬಾವಸಾಬ್ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದೆ. ಮದುವೆಗಿದ್ದ ಉಮಾದೇವಿ ಕಳೆದ 15 ವರ್ಷಗಳ ಹಿಂದೆ ಗಂಡನಿಂದ ದೂರವಾಗಿ ಬಾವಸಾಬ್ ಜೊತೆಗಿದ್ದಳಂತೆ. ಬಾವಸಾಬ್ ಮದುವೆಯಾಗಿದ್ರು ಕೂಡ ಉಮಾದೇವಿ ಜೊತೆ ವಿವಾಹೇತರ ಸಂಬಂಧ ಬೆಳೆಸಿದ್ದ. ಇವರಿಬ್ಬರ ಸಂಬಂಧ ಮಧ್ಯೆ ಮನಸ್ತಾಪ ಮೂಡಿದ್ದು, ಈ ಕೊಲೆಗೆ ಕಾರಣ ಅಂತ ಹೇಳಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡ ಯಾದಗಿರಿ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿ ಬಾವಸಾಬ್ ಬಂಧನಕ್ಕೆ ಬಲೆ ಬಿಸಿದ್ದಾರೆ.

Last Updated : Sep 13, 2020, 6:16 AM IST

ABOUT THE AUTHOR

...view details