ಕರ್ನಾಟಕ

karnataka

ಹಿಂದೂ ಧರ್ಮದ ಉಳಿವಿಗಾಗಿ ಒಬ್ಬೊಬ್ಬರು 12 ಮಕ್ಕಳನ್ನು ಹೆರಬೇಕು: ಸ್ವಾಮೀಜಿ ಹೇಳಿಕೆ

ಹಿಂದೂ ಧರ್ಮದ ಉಳಿವಿಗಾಗಿ ಒಬ್ಬೊಬ್ಬರು 12 ಮಕ್ಕಳನ್ನು ಹೆರಬೇಕು ಎಂದು ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಯೊಬ್ಬರು ಹೇಳಿಕೆ ನೀಡಿದ್ದಾರೆ.

By

Published : Dec 14, 2019, 7:27 PM IST

Published : Dec 14, 2019, 7:27 PM IST

Andolana karuneshwara matta swamiji
ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ

ಯಾದಗಿರಿ: ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಶಹಾಪುರ ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ

ಕಾರ್ಯಕ್ರಮದಲ್ಲಿ ಮಾತನಾಡಿದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಹಿಂದೂ ಸಮಾಜದ ಉಳಿವಿಗಾಗಿ ಪ್ರತಿಯೊಬ್ಬ ಮಹಿಳೆ 12 ಮಕ್ಕಳನ್ನು ಹೆರಬೇಕು ಎಂದು ಹೇಳಿಕೆ ನೀಡಿದ್ದಾರೆ.

ಹಿಂದೂ ಸಮಾಜದ ಜನಸಂಖ್ಯೆ ಕುಸಿದು ಹೋಗುತ್ತಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಆದರ್ಶ ಮಕ್ಕಳಿಗೆ ಜನ್ಮ ನೀಡಬೇಕು. ನಮ್ಮ ದೇಶದ ಕಾನೂನು ಎರಡು ಮಕ್ಕಳನ್ನು ಹೊಂದಬೇಕೆಂದು ಹೇಳುತ್ತಿದೆ. ಒಂದು ಆರತಿಗೆ ಮತ್ತೊಂದು ಕೀರ್ತಿಗೆ ಎಂದು. ಆದರೆ ಈ ಕಾನೂನು ಹಿಂದೂ ಧರ್ಮದವರಿಗೆ ಮಾತ್ರ ಅನ್ವಯವಾಗುತ್ತಿದೆ ಎಂದು ಹೇಳಿದ್ದಾರೆ.

ಸ್ವಾಮೀಜಿ ಹೇಳಿಕೆಗೆ ಈಗ ಎಲ್ಲೆಡೆ ವ್ಯಾಪಕ ವಿರೋಧ ಕೇಳಿ ಬರುತ್ತಿದೆ.

For All Latest Updates

TAGGED:

ABOUT THE AUTHOR

...view details