ಗುರುಮಠಕಲ್ :ಕಳೆದ ಏಳೆಂಟು ದಿನಗಳಿಂದ ಇಲ್ಲಿನ ವೈನ್ಸ್ ಶಾಪ್ಗೆ ಸೀಲ್ ಹಾಕಿದ್ದರೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮದ್ಯದಂಗಡಿಗೆ ಇದೀಗ ಎರಡನೇ ಬಾರಿಗೆ ಸೀಲ್ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಈಟಿವಿ ಭಾರತ ಫಲಶೃತಿ.. ಗುರುಮಠಕಲ್ನ ಲಕ್ಷ್ಮಿ ವೈನ್ಸ್ಗೆ 2ನೇ ಬಾರಿ ಸೀಲ್..
ವೈನ್ಸ್ ಬಾಗಿಲಿಗೆ ಹಾಕಿದ್ದ ಸೀಲ್ ಒಡೆದು ರಾಜಾರೋಷವಾಗಿ ರಾತ್ರಿ ಎಣ್ಣೆ ಮಾರಾಟ ಮಾಡುತ್ತಿದ್ದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಇದರಿಂದಾಗಿ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು.
ಗುರುಮಠಕಲ್ನ ಲಕ್ಷ್ಮಿ ವೈನ್ಸ್ಗೆ 2ನೇ ಬಾರಿ ಸೀಲ್
ಪಟ್ಟಣದ ಲಕ್ಷ್ಮಿ ವೈನ್ಸ್ ಬಾಗಿಲಿಗೆ ಹಾಕಿದ್ದ ಸೀಲ್ ಒಡೆದು ರಾಜಾರೋಷವಾಗಿ ರಾತ್ರಿ ಎಣ್ಣೆ ಮಾರಾಟ ಮಾಡುತ್ತಿದ್ದ ವಿಷಯವನ್ನು ಈಟಿವಿ ಭಾರತ ವರದಿ ಮಾಡಿದ ನಂತರ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು, ಅದರ ಮೇಲೆ ಎರಡನೇ ಬಾರಿ ಇನ್ನೊಂದು ಸೀಲ್ ಹಾಕಿದ್ದಾರೆ.
Last Updated : May 4, 2020, 10:43 AM IST