ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶೃತಿ: ಹೆದ್ದಾರಿ ಬದಿ ವಾಸವಿದ್ದ ಹಸುಗೂಸಿನ ಕುಟುಂಬಕ್ಕೆ ನೆರವಾದ ಜಡ್ಜ್​​

ಕುಂಬಾರಪೇಟೆಯ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹತ್ತು ದಿನಗಳಿಂದ ವಾಸವಾಗಿದ್ದ ಹೈದರಾಬಾದ್ ಮೂಲದ ಕುಟುಂಬದ ಕಷ್ಟಕ್ಕೆ ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶ ಪ್ರಕಾಶ್​ ಅರ್ಜುನ್​ ಬನಸೋಡೆ ಸ್ಪಂದಿಸಿದ್ದಾರೆ. ಬಾಣಂತಿ ಮಹಿಳೆ ಮತ್ತು ಶಿಶುವವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

By

Published : Apr 27, 2020, 8:02 PM IST

Updated : Apr 27, 2020, 9:10 PM IST

Prakash Arjuna Banasode Visit
ಹೆದ್ದಾರಿ ಪಕ್ಕದಲ್ಲಿ ಹಸುಗೂಸಿನೊಂದಿಗೆ ವಾಸವಾಗಿದ್ದ ಕುಟುಂಬಕ್ಕೆ ನ್ಯಾಯಾಧೀಶರ ಭೇಟಿ

ಸುರಪುರ:ನಗರದ ಕುಂಬಾರಪೇಟೆಯ ರಾಜ್ಯ ಹೆದ್ದಾರಿ ಪಕ್ಕದಲ್ಲಿ 10 ದಿನಗಳಿಂದ ಹಸುಗೂಸಿನೊಂದಿಗೆ ವಾಸವಾಗಿದ್ದ ಹೈದರಾಬಾದ್ ಮೂಲದ ಕುಟುಂಬಕ್ಕೆ ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶರು ಭೇಟಿ ನೀಡಿ, ಬಾಣಂತಿ ಹಾಗೂ ಮಗುವನ್ನು ಆರೋಗ್ಯ ರಕ್ಷಣೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶರ ಪ್ರಕಾಶ ಅರ್ಜುನ ಬನಸೋಡೆ ಭೇಟಿ

ಹೈದರಾಬಾದ್ ಮೂಲದ ಶಾಂತಕುಮಾರ್ ಜ್ಯೋತಿ ದಂಪತಿ ಹಸುಗೂಸಿನೊಂದಿಗೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ 10 ದಿನಗಳಿಂದ ಜೀವನ ನಡೆಸಿದ್ದರು. ಈ ಬಗ್ಗೆ ಈಟಿವಿ ಭಾರತದಲ್ಲಿ ವಿಸ್ತೃತ ವರದಿಯನ್ನು ಬಿತ್ತರಿಸಲಾಗಿತ್ತು.

ಕೊರೊನಾ ತಂದ ಸಂಕಷ್ಟ: ಹತ್ತು ದಿನದ ಹಸುಗೂಸಿನ ಜೊತೆ ನೀರಿನ ಟ್ಯಾಂಕ್​​​ ಬಳಿ ಕುಟುಂಬದ ವಾಸ!

ವರದಿ ಬಳಿಕ ತಹಶೀಲ್ದಾರ್​ ಅವರು ಸ್ಥಳಕ್ಕೆ ತೆರಳಿ ಆ ಕುಟಂಬಕ್ಕೆ ಅಗತ್ಯ ವಸ್ತುಗಳನ್ನು ನೀಡಿ, ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದ್ದರು.

ಬಾಣಂತಿಯೊಂದಿಗೆ ಬೀದಿ ಬದಿ ವಾಸಿಸುತ್ತಿದ್ದ ಕುಟುಂಬಕ್ಕೆ ಅಧಿಕಾರಿಗಳ ನೆರವು: ಈಟಿವಿ ಭಾರತ ಫಲಶೃತಿ

ಇಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ್​ ಅರ್ಜುನ್​ ಬನಸೋಡೆ, ತಾಲೂಕು ಹಿರಿಯ ಸಿವಿಲ್ ನ್ಯಾಯಾಧೀಶೆ ತಯ್ಯಬಾ ಸುಲ್ತಾನ್, ಪ್ರಧಾನ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಮರನಾಥ ಬಿ.ಎನ್. ಅವರು ಈ ಕುಟುಂಬವನ್ನು ಭೇಟಿ ಮಾಡಿದ್ದರು. ಈ ವೇಳೆ ಬಾಣಂತಿ ಹಾಗೂ ಮಗುವಿನ ಆರೋಗ್ಯ ರಕ್ಷಣೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೇ ಅವರ ಆರೋಗ್ಯದ ಕುರಿತು ನಿಗಾವಹಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಿದ್ದಾರೆ.

Last Updated : Apr 27, 2020, 9:10 PM IST

ABOUT THE AUTHOR

...view details