ಕರ್ನಾಟಕ

karnataka

ಯಾದಗಿರಿಯಲ್ಲಿ ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ!

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಈಗ ಸೋಂಕಿತ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಈ ಮೂಲಕ ಸಾವಿರ ಸೋಂಕಿತರನ್ನು ಹೊಂದಿದ 6ನೇ ಜಿಲ್ಲೆಯಾಗುತ್ತಿದೆ ಯಾದಗಿರಿ.

By

Published : Jul 7, 2020, 10:41 AM IST

Published : Jul 7, 2020, 10:41 AM IST

Coronavirus increase, Coronavirus increase in Yadagiri. Yadagiri Coronavirus update news, Yadagiri Coronavirus update latest news, ಕೊರೊನಾ ವೈರಸ್​ ಹೆಚ್ಚಳ, ಯಾದಗಿರಿಯಲ್ಲಿ ಕೊರೊನಾ ವೈರಸ್​ ಹೆಚ್ಚಳ ಸುದ್ದಿ, ಯಾದಗಿರಿಯಲ್ಲಿ 35 ಕೊರೊನಾ ಸೋಂಕು ಪತ್ತೆ, ಯಾದಗಿರಿಯಲ್ಲಿ 35 ಕೊರೊನಾ ಸೋಂಕು ಪತ್ತೆ,
ಯಾದಗಿರಿಯಲ್ಲಿ ಮಹಾಮಾರಿಯ ಆರ್ಭಟ

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ 6 ವರ್ಷದ ಬಾಲಕ ಸೇರಿದಂತೆ ಒಟ್ಟು 35 ಜನರಿಗೆ ವೈರಾಣು ಬಾಧಿಸಿದೆ.

ಅಂತಾರಾಜ್ಯ ವಲಸಿಗರಲ್ಲೇ ಪತ್ತೆಯಾಗುತ್ತಿದ್ದ ವೈರಸ್ ಈಗ ಸಮುದಾಯದ ಹಂತಕ್ಕೂ ವ್ಯಾಪಿಸಿರುವ ಆತಂಕ ಉಂಟುಮಾಡಿದೆ. ನಿನ್ನೆ ಜಿಲ್ಲೆಯಲ್ಲಿ 35 ಜನರ ದೆಹದಲ್ಲಿ ವೈರಾಣು ಹೊಕ್ಕಿದ್ದು 1,006 ಸೋಂಕಿತರು ಇದೀಗ ಜಿಲ್ಲೆಯಲ್ಲಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿದ 26 ಜನ ವಲಸಿಗರು ಸೇರಿ ತೆಲಂಗಾಣದಿಂದ ಹಿಂದಿರುಗಿದ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಪಿ-25088 ವ್ಯಕ್ತಿ ಮತ್ತು ಪಿ-16868 ಹಲಬಾವಿ ಗ್ರಾಮದ ಬಾಲಕನ ಸಂಪರ್ಕದ ಹಿನ್ನೆಲೆ ಹೊಂದಿದ್ದು, ಪಿ-25065, ಪಿ-25086, ಪಿ-25087 ಸೋಂಕಿತರ ಸಂಪರ್ಕ ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿದೆ.

ಒಟ್ಟು ಸೋಂಕಿತರ ಪೈಕಿ ಇಲ್ಲಿಯವರೆಗೆ 869 ಪ್ರಕರಣಗಳು ಗುಣಮುಖರಾಗಿದ್ದಾರೆ. 136 ಪ್ರಕರಣಗಳು ಸಕ್ರಿಯವಾಗಿವೆ. ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ಸೋಂಕು ಪತ್ತೆಯಾದವರನ್ನೆಲ್ಲ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ದಿನಕಳೆದಂತೆ ಸೋಂಕಿತರ ಸಂಖೆ ಗಣನೀಯವಾಗಿ ಏರುತ್ತಿರುವುದರಿಂದ ಜನರಲ್ಲಿ ಆತಂಕ ಮುಂದುವರೆದಿದೆ.

ABOUT THE AUTHOR

...view details