ಕರ್ನಾಟಕ

karnataka

ETV Bharat / state

ಮೋದಿ ಸರ್ಕಾರ ಬಂದ್ಮೇಲೆ ಯುವಕರು ನಿರುದ್ಯೋಗಿಗಳಾಗ್ತಿದಾರೆ: ರಾಜು ಆಲಗೂರು - Alargura against Prime Minister Narendra Modi

ದೇಶದಲ್ಲಿ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದ್ರೆ ಕಳೆದ ಒಂದು ವರ್ಷದಿಂದ ದೇಶದ ಜಿಡಿಪಿ‌ 5ಕ್ಕೆ ಇಳಿಕೆಯಾಗಿದೆ ಎಂದು ಮೋದಿ ವಿರುದ್ಧ ವಿಜಯಪುರ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ರಾಜು ಆಲಗೂರು ವಾಗ್ದಾಳಿ ನಡೆಸಿದರು.

ಜಿಲ್ಲಾ ಕಾಂಗ್ರೆಸ್​ನ​ ಅಧ್ಯಕ್ಷ ಡಾ.ರಾಜ ಆಲಗೂರ

By

Published : Nov 4, 2019, 7:55 PM IST

ವಿಜಯಪುರ: ಅಧಿಕಾರಕ್ಕೆ ಬಂದ್ಮೇಲೆ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ, ಅವರು ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಜಿಲ್ಲಾ ಕಾಂಗ್ರೆಸ್​ನ​ ಅಧ್ಯಕ್ಷ ಡಾ.ರಾಜು ಆಲಗೂರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದ ಕಾರ್ಖಾನೆಗಳಲ್ಲಿ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ‌. ಈಗಾಗಲೇ ಮುಂಬೈಯಲ್ಲಿ 6 ಲಕ್ಷ ‌ಜನರು ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ಮೋದಿ ಹೇಳುತ್ತಿದ್ದಾರೆ. ಆದ್ರೆ ಕಳೆದ ಒಂದು ವರ್ಷದಿಂದ ದೇಶದ ಜಿಡಿಪಿ‌ ಇಳಿಕೆಯಾಗುತ್ತಲೇ ಇದ್ದು, ಈಗ 5ಕ್ಕೆ ತಲುಪಿದೆ ಎಂದು ಹರಿಹಾಯ್ದರು.

ರಾಜು ಆಲಗೂರು

ಆಪರೇಷನ್ ಕಮಲ ವಿಡಿಯೋ ವೈರಲ್​ ಕುರಿತು ಮಾತನಾಡಿದ ಆಲಗೂರು, ಕೇಂದ್ರ ಗೃಹಸಚಿವ ಅಮಿತ್​ ಶಾ ಅವರು 15 ಶಾಸಕರನ್ನು ನೋಡಿಕೊಳ್ಳುತ್ತಿದ್ದರು ಅನ್ನೋದು ವಿಡಿಯೋ ರೆಕಾರ್ಡ್​ನಲ್ಲಿ ಸ್ಪಷ್ಟವಾಗಿದೆ. ಜಿಜೆಪಿ ಸರ್ಕಾರ ರಚನೆಗಾಗಿ 15 ಶಾಸಕರ ರಾಜೀನಾಮೆ ಕೊಡಿಸಿದ್ದೇವೆ ಅನ್ನೋದು ಸಹ ಅದರಲ್ಲಿದೆ. ಈ ಸಂಬಂಧ ನಮ್ಮ ಪಕ್ಷದ ಮುಖಂಡರು ರಾಷ್ಟ್ರಪತಿ ಭೇಟಿಯಾಗಿದ್ದಾರೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details