ಕರ್ನಾಟಕ

karnataka

ETV Bharat / state

ಫೆ.8 ರಿಂದ ವಿಜಯಪುರದಲ್ಲಿ ಅಂತರ್ ವಿವಿ ಮಟ್ಟದ ಮಹಿಳಾ ಸೈಕ್ಲಿಂಗ್ ಸ್ಪರ್ಧೆ

ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಸೈಕ್ಲಿಂಗ್ ಸ್ಪರ್ಧೆ ಫೆ. 8 ರಿಂದ ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50 ರ ಟೋಲ್ ಪ್ಲಾಜಾದಲ್ಲಿ ಚಾಲನೆಗೊಳ್ಳಲಿದೆ. ಸೈಕ್ಲಿಂಗ್ ಚಾಂಪಿಯನ್ ಶಿಪ್​ನಲ್ಲಿ ವಿವಿಧ ರಾಜ್ಯಗಳ 28 ವಿಶ್ವವಿದ್ಯಾಲಯಗಳ 127 ಸೈಕ್ಲಿಷ್ಟ್​ಗಳು ಭಾಗವಹಿಸಲಿದ್ದಾರೆ.

By

Published : Feb 5, 2020, 5:03 PM IST

women's cycling competition in Vijayapur
ಪ್ರೊ. ಎಂ.ಎನ್​ ಕೋರಿ , ಪ್ರಾಚಾರ್ಯ

ವಿಜಯಪುರ:ಇದೇ ಮೊದಲ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಸೈಕ್ಲಿಂಗ್ ಸ್ಪರ್ಧೆ ಫೆ. 8 ರಿಂದ 11ರವರೆಗೆ ನಗರದಲ್ಲಿ ನಡೆಯಲಿದೆ ಎಂದು ಎ.ಎಸ್.ಪಾಟೀಲ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎನ್​. ಕೋರಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಅಖಿಲ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟ, ಸೈಕ್ಲಿಂಗ್ ಸ್ಪರ್ಧೆ ಸಂಘಟಿಸುವ ಜವಾಬ್ದಾರಿಯನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ನೀಡಿದೆ. ರಾಣಿ ಚೆನ್ನಮ್ಮ ವಿವಿ ಜೊತೆ ನಮ್ಮ ಕಾಲೇಜು ಕೈ ಜೋಡಿಸಲಿದೆ ಎಂದು ತಿಳಿಸಿದರು.

ಪ್ರೊ. ಎಂ.ಎನ್​ ಕೋರಿ , ಪ್ರಾಚಾರ್ಯ

ಫೆ. 8 ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50 ರ ಟೋಲ್ ಪ್ಲಾಜಾದಲ್ಲಿ ಸ್ಪರ್ಧೆ ಚಾಲನೆಗೊಳ್ಳಲಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಸೈಕ್ಲಿಂಗ್ ಸ್ಪರ್ಧೆ ಸಂಘಟಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಸೈಕ್ಲಿಂಗ್ ಚಾಂಪಿಯನ್ ಶಿಪ್​ನಲ್ಲಿ ವಿವಿಧ ರಾಜ್ಯಗಳ 28 ವಿಶ್ವವಿದ್ಯಾಲಯಗಳ 127 ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಕರಿಸಲು ವಿವಿಧ ಸಂಘ, ಸಂಸ್ಥೆಗಳ 400 ಸ್ವಯಂ ಸೇವಕರು ಆಗಮಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಡಾ. ಎಂ.ಬಿ.ಪಾಟೀಲ್​, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ. ರಾಮಚಂದ್ರೆಗೌಡ ಸೇರದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಫೆ.11ರಂದು ಬಿಎಲ್​ಡಿ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಮಾರೋಪ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಬಿಎಲ್​ಡಿ ಸಂಸ್ಥೆಯ ಉಪಾಧ್ಯಕ್ಷ ವಿ.ವಿ.ನಿಂಬಾಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಎಲ್​ಡಿ ಸಂಸ್ಥೆಯ ಪಿ.ಆರ್.ಓ. ಡಾ.ಮಹಾಂತೇಶ ಬಿರಾದಾರ, ಸೈಕ್ಲಿಸ್ಟ್ ಅಲಕಾ ಪಡತರೆ, ಪ್ರೊ.ದಿಲೀಪ ಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details