ಮುದ್ದೇಬಿಹಾಳ:ವಿಶ್ವದಲ್ಲಿನ ಮೊದಲ ಎಂಜಿನಿಯರರು ಎಂದರೆ ವಿಶ್ವಕರ್ಮ ಸಮಾಜದವರು. ವಿಶ್ವಕರ್ಮ ಸಮಾಜದವರು ತಮ್ಮ ಮೂಲ ಕಸುಬಿನಲ್ಲಿ ನವೀನ ತಂತ್ರಾಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳದೇ ಇರುವುದೇ ಆರ್ಥಿಕವಾಗಿ ಹಿಂದುಳಿಯಲು ಕಾರಣ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿನ ಮೌನೇಶ್ವರ ದೇವಸ್ಥಾನದಲ್ಲಿ ತಾಲೂಕಾಡಳಿತ ಹಾಗೂ ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಂಡಿದ್ದ ತಾಲೂಕಾಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದವರು ತಮ್ಮ ಮೂಲ ಕಸುಬಿನಲ್ಲಿ ನವೀನ ತಂತ್ರಾಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳದೇ ಇರುವುದು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದ್ದು, ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನಿರ್ಗತಿಕರು, ಅಶಕ್ತರು, ತುಳಿತಕ್ಕೊಳಗಾದವರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಹೆಚ್ಚಿನ ಸಬ್ಸಿಡಿ ಕೊಡಲಾಗಿದೆ. ಮಹಿಳೆಯರಿಗೆ ಶೇ.50 ರಷ್ಟು ಸಬ್ಸಿಡಿ ನೀಡಲಾಗಿದೆ. ವಿಶ್ವಕರ್ಮ ನಿಗಮಕ್ಕೆ ಪಿಎಂ ಹಾಗೂ ಸಿಎಂ ಅವರು 24 ಕೋಟಿ.ರೂ.ಗಳನ್ನು ನೀಡಿದ್ದಾರೆ ಎಂದರು.