ವಿಜಯಪುರ : ಕೊರೊನಾ ವೈರಸ್ ಹರಡುವಿಕೆಯ ಮುಖ್ಯ ಲಕ್ಷಣವಾಗಿರುವುದು ಜ್ವರ ಕಂಡು ಬಂದ ಎಲ್ಲರನ್ನು ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದು ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಹೇಳಿದರು.
ಜ್ವರಕ್ಕೆ ಬಳಸುವ ಮಾತ್ರೆ ಪಡೆಯುವವರ ಮಾಹಿತಿ ಪಡೆದುಕೊಳ್ಳಿ : ಔಷಧ ಮಳಿಗೆಗಳಿಗೆ ಜಿಲ್ಲಾಧಿಕಾರಿ ಸೂಚನೆ - corona virus latest news
ಜಿಲ್ಲೆಯಲ್ಲಿ 800 - 900 ಮೆಡಿಕಲ್ ಶಾಪ್ ಗಳು ಕಾರ್ಯ ನಿರ್ವಹಿಸುತ್ತಿವೆ. ಅವರೆಲ್ಲರೂ ಕಡ್ಡಾಯವಾಗಿ ಜ್ವರ ಎಂದು ಬರುವ ರೋಗಿಗಳಿಗೆ ನೀಡುವ ಪ್ಯಾರಾಸಿಟಮಲ್ ಮಾತ್ರೆ ಜತೆ ಆ ಮಾತ್ರೆ ತೆಗೆದುಕೊಳ್ಳಲು ಯಾವ ವೈದ್ಯರು ಸಲಹೆ ನೀಡಿದ್ದಾರೆ. ಅವರ ಮೊಬೈಲ್ ನಂಬರ್, ರೋಗಿಗಳ ಮೊಬೈಲ್ ನಂಬರುಗಳ ದಾಖಲೆಗಳನ್ನು ಸಂಗ್ರಹಿಸಿಡಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಜಿಲ್ಲಾಡಳಿತ ಕೆಲ ಸಮಿತಿಗಳು ನೀಡಿದ ಸಲಹೆ ಮೇರೆಗೆ ಜ್ವರಕ್ಕೆ ಸಂಬಂಧಿಸಿದಂತೆ ಯಾವುದೇ ಶಾಪ್ನಲ್ಲಿ, ಯಾವುದೇ ವ್ಯಕ್ತಿ ಮಾತ್ರೆ ಪಡೆದರೆ ಅಂತಹವರ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 800-900 ಮೆಡಿಕಲ್ ಶಾಪ್ ಗಳು ಕಾರ್ಯ ನಿರ್ವಹಿಸುತ್ತೀವೆ. ಅವರೆಲ್ಲರೂ ಕಡ್ಡಾಯವಾಗಿ ಜ್ವರ ಎಂದು ಬರುವ ರೋಗಿಗಳಿಗೆ ನೀಡುವ ಪ್ಯಾರಾಸಿಟಮಲ್ ಮಾತ್ರೆ ಜತೆ ಆ ಮಾತ್ರೆ ತೆಗೆದುಕೊಳ್ಳಲು ಯಾವ ವೈದ್ಯರು ಸಲಹೆ ನೀಡಿದ್ದಾರೆ. ಅವರ ಮೊಬೈಲ್ ನಂಬರ್, ರೋಗಿಗಳ ಮೊಬೈಲ್ ನಂಬರುಗಳ ದಾಖಲೆಗಳನ್ನು ಸಂಗ್ರಹಿಸಿಡಬೇಕು. ಅಗತ್ಯ ಸಂದರ್ಭದಲ್ಲಿ ಜಿಲ್ಲಾಡಳಿತ ಕೇಳುವ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ಹೊರಗಡೆಯಿಂದ 451 ಜನ ಬಂದಿದ್ದಾರೆ. 258 ಜನ 28 ದಿನಗಳ ಹೋಮ್ ಕ್ವಾರೆಂಟೈನ್ಸ್ ಮುಗಿಸಿದ್ದಾರೆ. 138 ಜನ 15 ರಿಂದ 28 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯಲ್ಲಿದ್ದಾರೆ. ಇಲ್ಲಿಯವರೆಗೆ 92 ಜನರ ಗಂಟಲು ದ್ರವದ ಪರೀಕ್ಷೆ ಟೆಸ್ಟ್ ಗೆ ಕಳುಹಿಸಲಾಗಿದೆ. ಅದರಲ್ಲಿ 65 ಟೆಸ್ಟ್ ನೆಗಟಿವ್ ಬಂದಿವೆ. ಇನ್ನು 27 ಜನರ ವರದಿ ಬರಬೇಕಾಗಿದೆ ಎಂದರು.