ಕರ್ನಾಟಕ

karnataka

ರಾಜ್ಯ‌ಮಟ್ಟದ ಟೆಕ್ವಾಂಡೋ ಸ್ಪರ್ಧೆಗೆ ಚಾಲನೆ: ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗಿ

ವಿಜಯಪುರದ ಅಂಬೇಡ್ಕರ್​ ಒಳಾಂಗಣದಲ್ಲಿ ಆಯೋಜಿಸಲಾಗಿದ್ದ ಟೆಕ್ವಾಂಡೋ ಸ್ಪರ್ಧೆಗೆ ವಿವಿಧ ಜಿಲ್ಲೆಗಳಿಂದ ಹಲವು ಕ್ರೀಡಾಪಟುಗಳು ಆಗಮಿಸಿದ್ದರು.

By

Published : Nov 5, 2022, 9:39 PM IST

Published : Nov 5, 2022, 9:39 PM IST

state-level-taekwondo-competition-at-vajaypur
ರಾಜ್ಯ‌ಮಟ್ಟದ ಟೈಕ್ವಾಂಡೋ ಸ್ಪರ್ಧೆಗೆ ಚಾಲನೆ : ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗಿ

ವಿಜಯಪುರ : ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಗರದಲ್ಲಿ ಎರಡು ದಿನಗಳ ರಾಜ್ಯ‌ಮಟ್ಟದ ಟೆಕ್ವಾಂಡೋ ಸ್ಪರ್ಧೆ ಆರಂಭವಾಗಿದೆ. ಶಿವಮೊಗ್ಗ, ದಾವಣಗೇರಿ, ವಿಜಯಪುರ ಸೇರಿದಂತೆ ಪದವಿ ಪೂರ್ವ ಕಾಲೇಜುಗಳ 25ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಇಲ್ಲಿನ ಅಂಬೇಡ್ಕರ್​ ಒಳಾಂಗಣದಲ್ಲಿ ಟೆಕ್ವಾಂಡೋ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇಬ್ಬರು ಕ್ರೀಡಾಪಟುಗಳು ಒಬ್ಬರಿಗೊಬ್ಬರು ಕಿಕ್ ಹೊಡೆಯುವುದು ಈ ಕ್ರೀಡೆಯ ವಿಶೇಷವಾಗಿದೆ. ಕರಾಟೆ, ಕಬಡ್ಡಿಗಿಂತ ಅಪಾಯಕಾರಿಯಾದ ಈ ಕ್ರೀಡೆಯಲ್ಲಿ ಕ್ರೀಡಾಪಟುಗಳು ಗಾಯಗೊಂಡರು.‌

ರೆಫ್ರಿ ವಿವಾದ :ಸ್ಪರ್ಧೆಯ ಮೊದಲ ದಿನ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ರಾಷ್ಟ್ರೀಯ ರೆಫ್ರಿ ಬದಲಿಗೆ ರಾಜ್ಯಮಟ್ಟದ ರೆಫ್ರಿಗಳು ಭಾಗವಹಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು.

ಇದನ್ನೂ ಓದಿ :ಬಣಜಿಗ ಸಮಾಜಕ್ಕೆ ಅವಹೇಳನ ಆರೋಪ: ವಿಷಾದ ವ್ಯಕ್ತ ಪಡಿಸಿದ ವಿಜಯಾನಂದ ಕಾಶಪ್ಪನವರ್​

ABOUT THE AUTHOR

...view details