ಕರ್ನಾಟಕ

karnataka

ETV Bharat / state

ಆಡು, ಕುರಿ ಖರೀದಿಗೆ ಮುಗಿಬಿದ್ದ ಗ್ರಾಹಕರು: ಮರೆಯಾದ ಸಾಮಾಜಿಕ ಅಂತರ

ವಿಜಯಪುರ ಜಿಲ್ಲೆಯಲ್ಲಿ ಲಾಕ್​ಡೌನ್​ ಸಡಿಲಗೊಳಿಸಿದ ನಂತರ ಕುರಿ ಬಜಾರ್​ನಲ್ಲಿ ವ್ಯಾಪಾರ ಜೋರಾಗಿದೆ. ಆದ್ರೆ ಇಲ್ಲಿ ಸಾಮಾಜಿಕ ಅಂತರ ಮರೆಯಾಗಿದೆ.

By

Published : Jun 16, 2020, 5:04 PM IST

social distance failure in sheep market at  vijayapura
ಕುರಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ವಿಜಯಪುರ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯಾಗಿ ದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಜಾರಿಯಾಗಿದ್ದ ಲಾಕ್​ಡೌನ್​ ಅನ್ನು ಕೊಂಚ ಸಡಿಲಿಸಲಾಗಿದೆ. ಆದ್ರೆ ಸಾಮಾಜಿಕ ಅಂತರ, ಮಾಸ್ಕ್​​ ಧರಿಸುವುದು ಕಡ್ಡಾಯವಾಗಿದೆ.

ವಿಜಯಪುರದ ಕುರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರೆಯಾಗಿದೆ. ಇದರ ನಡುವೆ ಖರೀದಿಗೆ ಬರುವ ಜನರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇದೀಗ ವ್ಯಾಪಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಾಮಾಜಿಕ ಅಂತರ ಮರೆತು ಆಡು, ಕುರಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ನಗರದ ಎಪಿಎಂಸಿ ಆವರಣದಲ್ಲಿ ನಡೆಯುವ ಕುರಿ ಬಜಾರ್​ಗೆ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಕುರಿಗಳನ್ನು ಮಾರಾಟಕ್ಕೆ ತರುತ್ತಾರೆ. ಲಾಕ್ ಡೌನ್ ಪರಿಣಾಮ ಈಗ ಕುರಿಗಳ ವ್ಯಾಪಾರಿಗಳಿಗೆ ಬಂಪರ್ ಹೊಡೆದಿದೆ. ಒಂದು ಕೆಜಿ ಕುರಿ ಮಾಂಸಕ್ಕೆ ಕಳೆದ ವರ್ಷ 250-300ರೂ. ಇತ್ತು. ಆದರೆ ಈ ವರ್ಷ 650-700 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಮಾಂಸ ಖರೀದಿ ಬದಲು ಕುರಿ ಖರೀದಿಗೆ ಗ್ರಾಹಕರು ಮುಂದಾಗುತ್ತಿದ್ದಾರೆ.

ಈ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡ ವ್ಯಾಪಾರಿ ಅನೀಲ್​, ಮಾಂಸ ಪ್ರಿಯರು ಕುರಿಗಳ ಖರೀದಿಗೆ ಮುಗಿ ಬೀಳುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ. ಪರಿಣಾಮ ಪೊಲೀಸರು ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಲಾಕ್​ಡೌನ್​​ ಸಡಿಲಿಕೆ ಮಾಡಿದ್ದರಿಂದ ಮಾಂಸ ಖರೀದಿಗೆ ಗ್ರಾಹಕರು ಮುಗಿಬೀಳುತ್ತಲೇ ಇದ್ದಾರೆ. ಪರಿಣಾಮ ಪ್ರತಿದಿನ ಒಂದೊಂದು ಬಡಾವಣೆಯಲ್ಲಿ ನಡೆಯುವ ಕುರಿ ಬಜಾರ್​ನಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೊರೊನಾ ಹರಡುವಿಕೆಯ ಭಯ ಹೆಚ್ಚಾಗಿದೆ.

ABOUT THE AUTHOR

...view details