ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಕುಸಿದು ಬಿದ್ದ ಶಾಲಾ ಛಾವಣಿ - ಮುದ್ದೇಬಿಹಾಳ ಸುದ್ದಿ

ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡದ ಛಾವಣಿ ಕುಸಿದು ಬಿದ್ದಿದೆ.

school roof collapsed
school roof collapsed

By

Published : Sep 7, 2020, 7:48 PM IST

Updated : Sep 7, 2020, 8:55 PM IST

ಮುದ್ದೇಬಿಹಾಳ (ವಿಜಯಪುರ):ಶಾಲಾ ಛಾವಣಿ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಇಣಚಗಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಗ್ರಾಮಸ್ಥರು ಯಾರೂ ಈ ವೇಳೆ ಅಲ್ಲಿರದ ಕಾರಣ ಯಾವುದೇ ಜೀವ ಹಾನಿಯಾಗಿಲ್ಲ.

ಕಳೆದ ಹಲವಾರು ವರ್ಷಗಳಿಂದ ಗ್ರಾಮದ ಪ್ರಮುಖ ಸ್ಥಳದಲ್ಲಿದ್ದ ಶಾಲೆಯ ಒಂದು ಕೊಠಡಿಯ ಛಾವಣಿ ಶಿಥಿಲಗೊಂಡಿತ್ತು. ಹಲವಾರು ಬಾರಿ ಗ್ರಾಮಸ್ಥರು ಅದನ್ನು ನೆಲಸಮಗೊಳಿಸುವಂತೆ ಸಂಬಂಧಪಟ್ಟ ಶಿಕ್ಷಕರಿಗೆ, ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಅದನ್ನು ನೆಲಸಮಗೊಳಿಸಿರಲಿಲ್ಲ.

ಕುಸಿದು ಬಿದ್ದ ಛಾವಣಿ

ಅದೇ ಶಾಲೆಯ ಸುತ್ತಮುತ್ತ, ಕಟ್ಟೆಯ ಮೇಲೆ ವೃದ್ಧರು ಹರಟೆ ಹೊಡೆಯುತ್ತಿದ್ದರು, ಮಕ್ಕಳು ಆಟವಾಡುತ್ತಿದ್ದರು. ಆದರೆ ಇಂದು ಬೆಳಗ್ಗೆ ಹೆಂಚಿನಿಂದ ಕೂಡಿದ್ದ ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದಂತಾಗಿದೆ.

ಕುಸಿದು ಬಿದ್ದ ಛಾವಣಿ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಗ್ರಾಪಂ ಮಾಜಿ ಸದಸ್ಯ ಸಾಯಬಣ್ಣ ತಳವಾರ, ಯುವ ಮುಖಂಡ ನಾಗರಾಜ ಕನ್ನೊಳ್ಳಿ, ಹಲವಾರು ಬಾರಿ ಶಿಥಿಲ ಕೊಠಡಿಯನ್ನು ನೆಲಸಮ ಮಾಡಿ ಎಂದು ಹೇಳಿದ್ದರೂ ಅದಕ್ಕೆ ಬೆಲೆ ಕೊಟ್ಟಿರಲಿಲ್ಲ. ಇಂದು ದಿಢೀರನೇ ಛಾವಣಿ ಕುಸಿದಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಹೇಳಿದರು.

Last Updated : Sep 7, 2020, 8:55 PM IST

ABOUT THE AUTHOR

...view details