ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲೆಯ 226 ಗ್ರಾಪಂಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಯಂತ್ರ ವಿತರಣೆ

ಮುದ್ದೇಬಿಹಾಳ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸುನೀಲ್​ ಗೌಡ ಪಾಟೀಲ ಅವರು, ವಿಧಾನ ಪರಿಷತ್ ಸದಸ್ಯರ ಅನುದಾನಲ್ಲಿ ಗ್ರಾಪಂಗಳಿಗೆ ಸ್ಯಾನಿಟೈಸರ್ ಸಿಪಂಡಣೆ ಯಂತ್ರಗಳನ್ನು ವಿತರಿಸಿದರು.

By

Published : May 23, 2020, 7:05 PM IST

Updated : May 23, 2020, 11:12 PM IST

sanitizer sprayer machine delivery
ವಿಜಯಪುರ ಜಿಲ್ಲೆಯ 226 ಗ್ರಾಪಂಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಯಂತ್ರ ವಿತರಣೆ

ಮುದ್ದೇಬಿಹಾಳ: ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ತಾಲೂಕಿನ 33 ಗ್ರಾಮ ಪಂಚಾಯಿತಿ, ಎರಡು ಪುರಸಭೆ, ಒಂದು ಪಟ್ಟಣ ಪಂಚಾಯಿತಿಗೆ ಸ್ಯಾನಿಟೈಸರ್ ಸಿಂಪಡಿಸುವ ಯಂತ್ರಗಳನ್ನು ಪರಿಷತ್​​ ಸದಸ್ಯ ಸುನೀಲ್​​ ಗೌಡ ಪಾಟೀಲ ಅವರು, ಆಯಾ ಗ್ರಾಪಂ ಅಧ್ಯಕ್ಷ, ಪಿಡಿಒಗಳಿಗೆ ವಿತರಿಸಿದರು.

ಮುದ್ದೇಬಿಹಾಳ ತಾಲೂಕು ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮುಗಿದ ಬಳಿಕ ಶಾಲೆ, ಸಮುದಾಯ ಭವನಗಳಿಗೆ ಸ್ಯಾನಿಟೈಸರ್ ಸಿಂಪಡಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಂತ್ರಗಳನ್ನು ಗ್ರಾ.ಪಂ.ಗಳಿಗೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 226 ಗ್ರಾ.ಪಂ.ಗಳಿಗೆ ಈ ಯಂತ್ರ ವಿತರಣೆ ಮಾಡಲಾಗುತ್ತಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಂದರು.

ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಕೊರೊನಾ ವೈರಸ್ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ್ದು ಮಹತ್ವದ ಪಾತ್ರವಿದೆ. ಒಂದೊಂದು ರಾಜ್ಯ ಒಂದೊಂದು ರೀತಿ ವರ್ತಿಸುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳದಿದ್ದರೆ ಕೊರೊನಾ ಮತ್ತಷ್ಟು ವೇಗವಾಗಿ ಹರಡಲಿದೆ ಎಂದರು. ಇದೇ ವೇಳೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.

ವಿಜಯಪುರ ಜಿಲ್ಲೆಯ 226 ಗ್ರಾಪಂಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಯಂತ್ರ ವಿತರಣೆ

ಕೊರೊನಾ ವಾರಿಯರ್ಸ್​​​ಗೆ ಅಭಿನಂದನೆ: ಕೊರೊನಾ ಹೋರಾಡುತ್ತಿರುವ ಆರೋಗ್ಯ, ಆರ್​​ಡಿಪಿಆರ್​​, ಪೊಲೀಸ್​, ಆಶಾ ಕಾರ್ಯಕರ್ತೆಯರು, ಮಾಧ್ಯಮ, ಜಿಲ್ಲಾಡಳಿತದ ಸಿಬ್ಬಂದಿಗೆ ಸುನೀಲ್​ ಗೌಡ ಪಾಟೀಲ್​​​ ಅವರು ಅಭಿನಂದನೆ ಸಲ್ಲಿಸಿದರು.

Last Updated : May 23, 2020, 11:12 PM IST

ABOUT THE AUTHOR

...view details