ಕರ್ನಾಟಕ

karnataka

ವಿಜಯಪುರ: ಭೀಮಾ ತೀರದ ರೌಡಿಗಳ ಪರೇಡ್

ಚಡಚಣ ಠಾಣೆಯ ರೌಡಿಗಳ ಪರೇಡ್ ಡಿವೈಎಸ್ಪಿ ದೊಡ್ಡಿ ನೇತೃತ್ವದಲ್ಲಿ ಇಂದು ನಡೆಸಲಾಯಿತು. ಕೆಲ ದಿನಗಳ ಹಿಂದಷ್ಟೇ ಇಂಡಿ ಡಿವೈಎಸ್ಪಿ ಯಾಗಿ ಅಧಿಕಾರ ವಹಿಸಿಕೊಂಡಿರುವ ದೊಡ್ಡಿ ಮೊದಲು ಭೀಮಾತೀರದ ರೌಡಿಗಳನ್ನು ಠಾಣೆಗೆ ಕರೆಯಿಸಿ ಪರೇಡ್ ನಡೆಸಿ ಖಡಕ ವಾರ್ನಿಂಗ್ ನೀಡಿದರು.

By

Published : Feb 9, 2021, 11:48 AM IST

Published : Feb 9, 2021, 11:48 AM IST

Rowdies Parade in Vijayapura
ಭೀಮಾತೀರದ ರೌಡಿಗಳ ಪರೇಡ್

ವಿಜಯಪುರ: ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆಸಿ ನಾಲ್ಕು ತಿಂಗಳ ನಂತರ ಭೀಮಾತೀರದ ಚಡಚಣ ಪೊಲೀಸರು ರೌಡಿಗಳ ಪರೇಡ್​​ ನಡೆಸಿ ಗ್ಯಾಂಗ್ ವಾರ ಸೇರಿ ಇನ್ನಿತರ ಕೃತ್ಯದಲ್ಲಿ ತೊಡಗಿಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಭೀಮಾತೀರದ ರೌಡಿಗಳ ಪರೇಡ್

ಚಡಚಣ ಠಾಣೆಯ ರೌಡಿಗಳ ಪರೇಡ್ ಅನ್ನು ಡಿವೈಎಸ್ಪಿ ದೊಡ್ಡಿ ನೇತೃತ್ವದಲ್ಲಿ ಇಂದು ನಡೆಸಲಾಯಿತು. ಕೆಲ ದಿನಗಳ ಹಿಂದಷ್ಟೇ ಇಂಡಿ ಡಿವೈಎಸ್ಪಿ ಯಾಗಿ ಅಧಿಕಾರ ವಹಿಸಿಕೊಂಡಿರುವ ದೊಡ್ಡಿ ಮೊದಲು ಭೀಮಾತೀರದ ರೌಡಿಗಳನ್ನು ಠಾಣೆಗೆ ಕರೆಯಿಸಿ ಪರೇಡ್ ನಡೆಸಿ ಖಡಕ್​​ ವಾರ್ನಿಂಗ್ ನೀಡಿದರು. ನಿಮ್ಮೆಲ್ಲರ ಕಾರ್ಯ ಚಟುವಟಿಕೆ ಎಲ್ಲವನ್ನು ನೋಡುತ್ತಿರುತ್ತೇವೆ. ಇಲ್ಲಿವರೆಗೆ ಆಗಿದ್ದು ಆಗಿ ಹೋಯ್ತು, ನಿಮಗೆ ತೊಂದರೆ ಇದ್ರೆ ನನಗೆ ಬಂದು ಹೇಳಿ ಎಂದು ರೌಡಿಗಳ ಕಷ್ಟ ಆಲಿಸುವ ಮೂಲಕ ಸೂಕ್ಷ್ಮವಾಗಿ ಎಚ್ಚರಿಕೆಯನ್ನು ಸಹ ನೀಡಿದರು.

ಓದಿ : ಸಿಸಿಬಿ ಪೊಲೀಸರ ಭರ್ಜರಿ ಬೇಟೆ: ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಅರೆಸ್ಟ್​

ನೀವು ಏನಾದರೂ ಮಾಡಿದರೆ ನಾನು ಸುಮ್ಮನಿರಲ್ಲ. ಎಲ್ಲದಕ್ಕೂ ಆಯುಧ ಹಿಡಿದರೇ ಸುಮ್ಮನಿರೋದಿಲ್ಲ ಎಂದು ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡರು. ಇದೆಲ್ಲ ಬಿಟ್ಟು ಬಾಳೆಹಣ್ಣು ಮಾರಾಟ ಮಾಡಿ ಜೀವನ ಸಾಗಿಸಿ ಎಂದು ಬುದ್ದಿವಾದ ಸಹ ಹೇಳಿದರು. ನಿಮ್ಮೆಲ್ಲರ ಕಾರ್ಯ ಚಟುವಟಿಕೆಗಳ ಬಗ್ಗೆ ಖುದ್ದಾಗಿ ನಿಗಾ ಇಟ್ಟಿರುತ್ತೇನೆ ಎಂದು ಡಿವೈಎಸ್​ಪಿ ದಡ್ಡಿ ರೌಡಿಗಳಿಗೆ ಸಂದೇಶ ರವಾನಿಸಿದರು. ಪ್ರತಿ 15 ದಿನಕ್ಕೊಮ್ಮೆ ಠಾಣೆಗೆ ಬಂದು ಹಾಜರಾಗುವಂತೆ ರೌಡಿಗಳಿಗೆ ತಾಕೀತು ಮಾಡಿದರು.

ABOUT THE AUTHOR

...view details