ಕರ್ನಾಟಕ

karnataka

ETV Bharat / state

ಲಾಕ್​ಡೌನ್​​ ನಡುವೆ ಹಸಿದವರಿಗೆ ಹಣ್ಣು ನೀಡಿದ ಮಹಿಳಾ ಪಿಎಸ್‌ಐ

ಕಳೆದ ಒಂದು ತಿಂಗಳಿಂದ ಕೆಲವು ನಿರ್ಗತಿಕರು ಲಾಕ್​ಡೌನ್​​​ ಪರಿಣಾಮ ಉಳಿಯಲು ಸರಿಯಾದ ಜಾಗವಿಲ್ಲದೆ ವಿಜಯಪುರ ಜಿಲ್ಲೆಯ ಕ್ರೀಡಾಂಗಣ ಮುಂಭಾಗದಲ್ಲಿ ಉಳಿದುಕೊಂಡಿದ್ದಾರೆ. ಅವರು ಆಹಾರಕ್ಕಾಗಿ ಪರದಾಟ ನಡೆಸುತ್ತಿರುವುದನ್ನ ಕಂಡ ಮಹಿಳಾ ಪಿಎಸ್‌ಐ ಪ್ರೇಮಾ, ಮನೆಯಿಂದ ಬಾಳೆಹಣ್ಣು, ಬಿಸ್ಕತ್​ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

By

Published : Apr 26, 2020, 5:28 PM IST

PSI Feeding the Needy people in vijayapura
ನಿರ್ಗತಿಕರಿಗೆ ತಿನ್ನಲು ಆಹಾರ ನೀಡಿದ ಮಹಿಳಾ ಪಿಎಸ್‌ಐ

ವಿಜಯಪುರ:ಲಾಕ್​​ಡೌನ್​ ಕರ್ತವ್ಯದ ನಡುವೆ ನಿರ್ಗತಿಕರಿಗೆ ಬಿಸ್ಕತ್​, ಬಾಳೆಹಣ್ಣು ನೀಡಿ ಮಹಿಳಾ ಪಿಎಸ್‌ಐ ಮಾನವೀಯತೆ ಮೆರೆದಿದ್ದಾರೆ‌.

ನಗರದ ಜಿಲ್ಲಾ ಕ್ರೀಡಾಂಗಣ ಮುಂಭಾಗದಲ್ಲಿ 20ಕ್ಕೂ ಅಧಿಕ ನಿರ್ಗತಿಕರಿಗೆ ಪಿಎಸ್‌ಐ ಪ್ರೇಮಾ‌ ಬಾಳೆಹಣ್ಣನ್ನು ನೀಡಿದ್ದಾರೆ. ಕಳೆದ ಒಂದು ತಿಂಗಳಿಂದ ಕೆಲವು ನಿರ್ಗತಿಕರು ಲಾಕ್​ಡೌನ್​​​ ಪರಿಣಾಮ ಉಳಿಯಲು ಸರಿಯಾದ ಜಾಗವಿಲ್ಲದೆ ಕ್ರೀಡಾಂಗಣ ಮುಂಭಾಗದಲ್ಲಿ ಉಳಿದುಕೊಂಡಿದ್ದಾರೆ. ಅವರು ಆಹಾರಕ್ಕಾಗಿ ಪರದಾಟ ನಡೆಸುತ್ತಿರುವುದನ್ನ ಕಂಡ ಪಿಎಸ್​ಐ ಪ್ರೇಮಾ, ಮನೆಯಿಂದ ಬಾಳೆಹಣ್ಣು, ಬಿಸ್ಕತ್​ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಲಾಕ್​ಡೌನ್​​ ನಡುವೆಯೂ ಹಸಿದವರಿಗೆ ಹಣ್ಣು ನೀಡಿದ ಮಹಿಳಾ ಪಿಎಸ್‌ಐ
ಇನ್ನು ಸ್ಟೇಷನ್ ರಸ್ತೆ, ಎಪಿಎಂಸಿ ಮಾರ್ಗ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಭಿಕ್ಷಾಟನೆ ನಡೆಸುವ ಜನರ ಬಳಿ ಹೋಗಿ ಆಹಾರ ನೀಡಿ ಜನ ಮೆಚ್ಚುಗೆ ಪಡೆದಿದ್ದಾರೆ. ಕರ್ತವ್ಯದ ನಡುವೆ ನಿರ್ಗತಿಕರ ಕಷ್ಟ ನೋಡಿ ಸಹಾಯಕ್ಕೆ ಮುಂದಾಗಿದ್ದು, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ABOUT THE AUTHOR

...view details