ಕರ್ನಾಟಕ

karnataka

ಸರ್ಕಾರದ ನಿರ್ಲಕ್ಷ್ಯ ಆರೋಪ: ಅಳಿವಿನಂಚಿನಲ್ಲಿ ಗುಮ್ಮಟನಗರಿಯ ಸ್ಮಾರಕಗಳು

ನಗರ ರಕ್ಷಣೆಗೆ ಅಂದಿನ ಕಾಲದಲ್ಲಿ ತಡೆಗೋಡೆ ಹಾಗೂ ಕೋಟೆಗಳನ್ನ ನಿರ್ಮಿಸಲಾಗಿದೆ‌. ಪ್ರವಾಸೋದ್ಯಮ ಇಲಾಖೆಗಳ‌‌‌ ಕಾಳಜಿ ಕೊರತೆಯಿಂದ‌ ಕೋಟೆಗಳು ಅವಸಾನದ‌ ಅಂಚಿನಲ್ಲಿವೆ.

By

Published : Nov 10, 2020, 8:50 AM IST

Published : Nov 10, 2020, 8:50 AM IST

Need protection for historical monuments in Vijayapura
ಅಳಿವಿನಂಚಿನಲ್ಲಿ ಗುಮ್ಮಟನಗರಿಯ ಸ್ಮಾರಕಗಳು

ವಿಜಯಪುರ: ಜಿಲ್ಲೆಯಲ್ಲಿ ನೂರಾರು ಐತಿಹಾಸಿಕ‌‌ ಕಟ್ಟಡಗಳು, ಕೆರೆ, ಬಾವಿಗಳಿವೆ. ಅದರಲ್ಲೂ ವಿಶ್ವ ವಿಖ್ಯಾತ ಗೋಲ್ ಗುಂಬಜ್‌ಗೆ ವರ್ಷವಿಡಿ ಸಾವಿರಾರು ದೇಶಿ ಹಾಗೂ ವಿದೇಶಿ ಪ್ರವಾಸಿಗರ ಭೇಟಿ ನೀಡುತ್ತಾರೆ. ಆದರೆ ಜಿಲ್ಲಾಡಳಿತ, ಪುರಾತತ್ವ ಇಲಾಖೆ‌‌‌ ಹಾಗೂ ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಹಳೆಯ ಸ್ಮಾರಕಗಳು ಪ್ರವಾಸಿಗರ ಕಣ್ಣಿಗೆ ಕಾಣದಂತಾಗುತ್ತಿವೆ.

ಅಳಿವಿನಂಚಿನಲ್ಲಿ ಗುಮ್ಮಟನಗರಿಯ ಸ್ಮಾರಕಗಳು

ಜಿಲ್ಲೆಯ ಇತಿಹಾಸಕಾರರು ಹೇಳುವ ಪ್ರಕಾರ, ನಗರದಲ್ಲಿ 90 ಸಂರಕ್ಷಿತ ಸ್ಮಾರಕಗಳು ಇವೆಯಂತೆ. ಆದರೆ, ಸ್ಮಾರಕಗಳ ರಕ್ಷಣೆ ಹಾಗೂ ಅಭಿವೃದ್ಧಿ‌ ಪಡಿಸದಿರುವ ಕಾರಣ ಪ್ರವಾಸಿಗರಿಗೆ ಬೆರಳಿಣಿಕೆಯಲ್ಲಿ ಮಾತ್ರ ಐತಿಹಾಸಿಕ ಕಟ್ಟಡಗಳು ವೀಕ್ಷಣೆಗೆ ದೊರೆಯುತ್ತಿವೆ. ಇನ್ನು ಅಂದಿನ‌ ಬ್ರಿಟಿಷ್ ಅಧಿಕಾರಿ ಹೆಂಡ್ರಿಕ್ ಕಜೀನ್ ಜಿಲ್ಲೆಯಲ್ಲಿ 300 ಸ್ಮಾರಕಗಳಿವೆ ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರಂತೆ. ಆದರೆ ಅವುಗಳ ಮಾಹಿತಿ ಕೊರತೆಯಿಂದ ಬೆಳಕಿಗೆ ಬರೆದ ದೂರ ಉಳಿಯುವಂತಾಗಿವೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಕೋಟೆಗಳ ಅಭಿವೃದ್ಧಿಗೆ ಮುಂದಾಗಬೇಕಿದೆ ಸರ್ಕಾರ: ನಗರ ರಕ್ಷಣೆಗೆ ಅಂದಿನ ಕಾಲದಲ್ಲಿ ತಡೆಗೋಡೆ ಹಾಗೂ ಕೋಟೆಗಳನ್ನ ನಿರ್ಮಿಸಿಲಾಗಿದೆ‌. ಪ್ರವಾಸೋದ್ಯಮ ಇಲಾಖೆಗಳ‌‌‌ ಕಾಳಜಿ ಕೊರತೆಯಿಂದ‌ ಕೋಟೆಗಳು ಅವಸಾನದ‌ ಅಂಚಿನಲ್ಲಿವೆ.

ಸ್ಮಾರಕಗಳಲ್ಲಿರುವ ಸರ್ಕಾರಿ ಕಚೇರಿ ಹಾಗೂ ಅಧಿಕಾರಿಗಳ ಮನೆ ತೆರವಿಗೆ ಇತಿಹಾಸಕಾರರು ಆಗ್ರಹಿಸಿದ್ದಾರೆ. ಬಹುತೇಕ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ವಸತಿ ನಿಲಯಗಳು, ಇಂದಿಗೂ ಕೂಡ ಆದಿಲ್ ಶಾಹಿ ಕಾಲದ ಸ್ಮಾರಕಗಳಿವೆ. ಆಡಳಿತ‌‌ ಕಟ್ಟಡ ಹಾಗೂ ಅಧಿಕಾರಿಗಳಿಗೆ ಬೇರೆಡೆಗೆ ವಸತಿ ಮನೆ ನಿರ್ಮಿಸಿ, ಐತಿಹಾಸಿಕ ಸ್ಮಾರಕ ರಕ್ಷಣೆ ಮಾಡುಬೇಕೆಂದು ಇತಿಹಾಸಕಾರರು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಮನೆಯ ಮುಂಭಾಗದ ಪುರಾತನ ಕಂದಕಕ್ಕೆ ಬೋಟಿಂಗ್ ವ್ಯವಸ್ಥೆ ಯೋಜನೆಯನ್ನು ಹಲವು ವರ್ಷಗಳ ಹಿಂದೆ ಜಿಲ್ಲಾಡಳಿತ ರೂಪಿಸಿತ್ತು. ಆದರೆ ಸಂಬಂಧಿಸಿದ ಇಲಾಖೆಗಳ ಇಚ್ಛಾಶಕ್ತಿ ಕೊರತೆಯಿಂದ ಸದ್ಯ, ಪುರಾತನ ಕಂದಕ ಕುಡಕರ, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾತ್ ಕಬಾರ್, ಮೆಹತಾರ್ ಮಹಲ್, ನವರಸಪುರ ಮಹಲ್, ಆನಂದ ಮಹಲ್ ಸೇರಿದಂತೆ ನಗರದ ಪ್ರದೇಶದ ಬಹುತೇಕ ಸ್ಮಾರಕಗಳಿಗೆ ಭದ್ರತೆ ಕೊರತೆಯಿದೆ. ಕೋಟೆ ಗೋಡೆಗಳ ಮೇಲೆ ಗಿಡಗಳು ಬೆಳೆಯುತ್ತಿವೆ. ಅಳಿವಿನಂಚಿನಲ್ಲಿರುವ ಸ್ಮಾರಕಗಳ ರಕ್ಷಣೆ ಹಾಗೂ ಕಂದಕಗಳ ಅಭಿವೃದ್ಧಿಗೆ ಸರ್ಕಾರ ಕ್ರಮಹಿಸುವಂತೆ ಸಾರ್ವಜನಿಕರು ಮತ್ತು ಇತಿಹಾಸ ತಜ್ಞರು ಆಗ್ರಹಿಸಿದ್ದಾರೆ.

ಜಿಲ್ಲೆ ಪ್ರವಾಸೋದ್ಯಮದ ಅಭಿವೃದ್ಧಿ ಕ್ರಮದ ಕುರಿತು ಜಿಲ್ಲಾಧಿಕಾರಿಗಳನ್ನ ಕೇಳಿದರೆ ನಾವು ಕೂಡ ಪ್ರವಾಸೋದ್ಯಮ ಸಚಿವರ ಗಮನಕ್ಕೆ ತಂದಿದ್ದೇವೆ. ಹಳೆ ಕಾಲದ ಸ್ಮಾರಕಗಳ ಪ್ರವಾಸೋದ್ಯಮ ಪಟ್ಟಿಗೆ ಸೇರಿಸುವ ಕುರಿತು ಅಧಿಕಾರಿಗಳ ಜೊತೆಗೆ ಮಾತಾನಾಡಿದ್ದೇವೆ. ಜಿಲ್ಲಾಡಳಿತ ಅನುದಾನ ಕೂಡ ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details