ಮುದ್ದೇಬಿಹಾಳ: ಲಕ್ಷಾಂತರ ರೂ. ಖರ್ಚು ಮಾಡಿ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆಗೆಂದು ಖರೀದಿಸಿದ ತ್ಯಾಜ್ಯ ಸಂಗ್ರಹ ವಾಹನಗಳೀಗ ಗುಜರಿ ಅಂಗಡಿ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ದುರಸ್ತಿ ಮಾಡಿ ಬಳಕೆ ಮಾಡಲು ಸಾಧ್ಯವಿದ್ದರೂ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಈ ಕುರಿತು ಯೋಜನಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಪುರಸಭೆಯ ಕಸದ ವಿಲೇವಾರಿ ಸಮಸ್ಯೆ ಬಗೆ ಹರಿಸಿಲ್ಲ. ಒಂದಿಲ್ಲೊಂದು ವಾರ್ಡ್ಗಳಲ್ಲಿ ಕಸದ ವಾಹನ ಬರುವುದಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿವೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ವೀರೇಶ ಹಡಲಗೇರಿ ಆಗ್ರಹಿಸಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ 23 ವಾರ್ಡ್ಗಳಿದ್ದು, ನಿತ್ಯವೂ ಕಸ ಸಂಗ್ರಹಕ್ಕೆ ನಾಲ್ಕು ವಾಹನಗಳಿದ್ದವು. ಅವುಗಳಿಗೆ ಬೆಳಗ್ಗೆಯೇ ಸ್ವಚ್ಛತೆಯ ಗೀತೆಯನ್ನು ಹಾಕಿಕೊಂಡು ಪ್ರತಿಯೊಂದು ವಾರ್ಡ್ನ ಓಣಿಗಳಿಗೆ ತೆರಳಿ ನಿವಾಸಿಗಳಿಂದ ನೇರವಾಗಿ ಕಸ ಸಂಗ್ರಹಿಸಲಾಗುತ್ತಿದೆ. ಆದರೀಗ ಎರಡು ವಾಹನಗಳನ್ನು ಗುಜರಿಗೆ ಹಾಕುವ ಪರಿಸ್ಥಿತಿ ಬಂದೊದಗಿದೆ. ಪಟ್ಟಣದ ಕುಡಿವ ನೀರು ಶುದ್ಧೀಕರಣ ಘಟಕದಲ್ಲಿರುವ ಕಸ ಸಂಗ್ರಹದ ವಾಹನಗಳು ರಿಪೇರಿಗೆ ಬಂದಿದ್ದು, ಅವುಗಳ ದುರಸ್ತಿಗೆ ತಗಲುವ ವೆಚ್ಚದಲ್ಲಿ ಹೊಸ ವಾಹನಗಳನ್ನೇ ಖರೀದಿಸಬಹುದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕೇವಲ ಎರಡೇ ವಾಹನಗಳು ನಿತ್ಯವೂ ಇಡೀ ಪಟ್ಟಣದ ಕಸ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ ಇನ್ನೆರಡು ವಾಹನಗಳ ಅಗತ್ಯತೆ ಇದೆ. ಹಾಗಾಗಿ ಅವುಗಳು ಕೆಟ್ಟು ನಿಂತು ಎರಡು ತಿಂಗಳು ಕಳೆದರೂ ದುರಸ್ತಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂಬ ಆರೋಪ ಪುರಸಭೆ ಸದಸ್ಯರದ್ದಾಗಿದೆ.
ಫಾಗಿಂಗ್ ನಿಲ್ಲಿಸಿದ ಯಂತ್ರ: