ವಿಜಯಪುರ:ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಪೋಸ್ಟರ್ ಹರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಕೆಲವು ಜನರಿಗೆ ಇತಿಹಾಸದ ಬಗ್ಗೆ ಮಾಹಿತಿ ಇರುವುದಿಲ್ಲ. ಎರಡು ಸಲ ಕಾಳಾ ಪಾನಿ ಶಿಕ್ಷೆಯನ್ನು ವೀರ ಸಾವರ್ಕರ್ ಅನುಭವಿಸಿದ್ದರು. ಅಂಡಮಾನ್ ನಿಕೋಬಾರ್ ಜೈಲಿಗೆ ಹೋದರೆ ಸಾವರ್ಕರ್ ಬಗ್ಗೆ ತಿಳಿಯುತ್ತದೆ ಎಂದು ಹೇಳುವ ಮೂಲಕ ಸಾವರ್ಕರ್ ವಿರೋಧಿಗಳಿಗೆ ಮಾತಿನಲ್ಲೇ ತಿವಿದರು.
ಕೆಲವರು ಅಪ್ರಬುದ್ಧರಿರುತ್ತಾರೆ. ಅವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಇತಿಹಾಸ ನೆನಪಿಸಿಕೊಡಲು ಪ್ರಧಾನಮಂತ್ರಿ ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಒಂದು ವೇಳೆ ರಾಹುಲ್ ಗಾಂಧಿ ಸಾವರ್ಕರ್ ಬಳಿ ಇದ್ದಿದ್ದರೆ, ಒಂದೇ ತಾಸಿನಲ್ಲಿ ಶರಣಾಗಿ ಇಟಲಿಗೆ ಹೋಗುತ್ತಿದ್ರು ಎಂದು ವ್ಯಂಗ್ಯವಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವ ವಿಚಾರವಾಗಿ ಯತ್ನಾಳ ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಬೇಕಾದ್ರೂ ಓಡಾಡಲಿ, ಮನೇಲಿ ಬೇಕಾದ್ರು ಓಡಾಡಲಿ. ಯಾರು ಓಡಾಡಬೇಕು ಅನ್ನೋದು ಪಕ್ಷ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಆಡಳಿತ ಕುಂಠಿತ ಹೇಳಿಕೆ:ಸಚಿವ ಮಾಧಸ್ವಾಮಿ ರಾಜ್ಯದಲ್ಲಿ ಆಡಳಿತ ಕುಂಠಿತವಾಗುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ವೇಗವಾಗಿ ಆಡಳಿತ ನಡೆಯಬೇಕು ಅನ್ನೋ ಆಸೆ ಎಲ್ಲರಿಗೂ ಇದೆ. ಸರ್ಕಾರ ಇನ್ನೂ ಕ್ರಿಯಾಶೀಲವಾಗಬೇಕು. ಅಭಿವೃದ್ದಿಗೆ ಹೆಚ್ಚಿನ ವೇಗ ನೀಡಬೇಕು. ಕಠಿಣ ಕ್ರಮ ಕೈಗೊಳ್ಳುವುದು ಕೇವಲ ಬಾಯಿ ಮಾತಿನಲ್ಲಿ ಆಗಬಾರದು. ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಇದನ್ನೂ ಓದಿ:ಕಾಂಗ್ರೆಸ್ ಸುಮ್ಮನೆ ಆರೋಪಗಳನ್ನು ಮಾಡಿ ವಿಪಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತದೆ: ಮುರುಗೇಶ್ ನಿರಾಣಿ
ನೆಹರು ಕೊಡುಗೆ ಏನು ಇಲ್ಲ: ಸಿದ್ದರಾಮಯ್ಯ ರಾಜ್ಯದ ಒಬ್ಬ ಹಿರಿಯ ನಾಯಕ. ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಧ್ಯಯನ ಮಾಡಬೇಕು. ನೆಹರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ ಎಂದು ಯತ್ನಾಳ ಪ್ರಶ್ನಿಸಿದರು. ಮಹಾತ್ಮ ಗಾಂಧೀಜಿ ಅವರ ಪುಣ್ಯದಿಂದ ನೆಹರು ಪ್ರಧಾನಿಯಾದರು. ನೆಹರು ಪ್ರಧಾನಿಯಾಗಿದ್ದನ್ನು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ ಎಂದರು.
ಗಾಂಧೀಜಿ ಏನು ಹೇಳಿದ್ರು?:ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಗಾಂಧೀಜಿ ಹೇಳಿದ್ದರು. ಇಡೀ ದೇಶಕ್ಕೆ ಸ್ವಾತಂತ್ರ್ಯ ನಾವು ಕೊಡಿಸಿದ್ದೇವಿ ಎಂದು ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಗಾಂಧೀಜಿ ಹೇಳಿದ್ದರು, ಮೊದಲು ಅದನ್ನು ಪಾಲಿಸಲಿ ಎಂದು ಯತ್ನಾಳ ಒತ್ತಾಯಿಸಿದರು.