ವಿಜಯಪುರ: ಇಲ್ಲಿನ ಶಿಕ್ಷಕರ ಮತಕ್ಷೇತ್ರದಲ್ಲಿ ಶೇ. 59.17 ಹಾಗೂ ಪದವೀಧರರ ಕ್ಷೇತ್ರದಲ್ಲಿ ಶೇ. 42.58 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ ಶಹಾಪುರ ನಗರದ ಸರ್ಕಾರಿ ಬಾಲಕರ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆ ನಂ.121ರಲ್ಲಿ ಸಾಮಾನ್ಯ ಮತದಾರರ ಜೊತೆ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ನಾನು ಮೊದಲು ಪ್ರಾಶಸ್ತ್ಯ ಮತಗಳಿಂದ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.
ವಿಜಯಪುರ: ವಾಯವ್ಯ ಶಿಕ್ಷಕರ, ಪದವೀಧರರ ಚುನಾವಣೆ ಶಾಂತಿಯುತ
ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಮತಕ್ಷೇತ್ರದ ಚುನಾವಣೆ ವಿಜಯಪುರ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ.
ಶಾಂತಿಯುತ ಪರಿಷತ್ ಚುನಾವಣೆ , ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ
ಮತಗಟ್ಟೆಯಲ್ಲಿ ಗೊಂದಲ: ನಗರದ ದರ್ಬಾರ್ ಹೈಸ್ಕೂಲ್‌ನಲ್ಲಿ ಮತದಾನ ವೇಳೆ ಮತಗಟ್ಟೆ ನಂಬರ್ 126 ರಲ್ಲಿ ಮತ ಚಲಾಯಿಸಲು ಶಿಕ್ಷಕರು ಹಾಗೂ ಪದವೀಧರರು ಉದ್ದನೆ ಸಾಲಿನಲ್ಲಿ ನಿಲ್ಲಬೇಕಾಯಿತು. ಒಂದೇ ಮತಗಟ್ಟೆಯಲ್ಲಿ 1,170 ಮತದಾರರಿದ್ದ ಕಾರಣ ಈ ಪರಿಸ್ಥಿತಿ ಉದ್ಭವಿಸಿತು. ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ ಹಾಗೂ ಎಸ್ಪಿ ಆನಂದ ಕುಮಾರ ಭೇಟಿ ನೀಡಿ ಮತಗಟ್ಟೆ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಅನಿಲ್ ಬೆನಕೆ ವಿರುದ್ಧ ಪ್ರಕರಣ ದಾಖಲು